ಲಂಡನ್: ‘ಸುಳ್ಳು ನಮ್ಮಲಿಲ್ಲವಯ್ಯಾ ಸುಳ್ಳೇ ನಮ್ಮನೆ ದೇವರು…’ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲರೂ ಸುಳ್ಳು ಹೇಳುತ್ತಾರೆ ಅನ್ನೋದು ನಿಜವೇ. ಆದ್ರೆ, ಮಹಿಳೆಯರಿಗಿಂತ ಪುರುಷರೇ ಜಾಸ್ತಿ ಸುಳ್ಳು ಹೇಳುತ್ತಾರೆ ಎಂಬುದನ್ನು ಯುಕೆ ಯ ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯ ಸಂಶೋಧಕರು ನಡೆಸಿದ ಈ ಅಧ್ಯಯನ ಸ್ಪಷ್ಟಪಡಿಸಿದೆ.
ಈ ಅಧ್ಯಯನದ ಪ್ರಕಾರ, ಪುರುಷರು ಮಹಿಳೆಯರಿಗಿಂತ ಉತ್ತಮವಾಗಿ ಸುಳ್ಳು ಹೇಳುತ್ತಾರಂತೆ. ಹಾಗೆಯೇ ಸುಳ್ಳು ಹೇಳುವ ವ್ಯಕ್ತಿ ಉತ್ತಮ ಮಾತುಗಾರನಾಗಿರುತ್ತಾನಂತೆ! ಸಾಮಾನ್ಯವಾಗಿ ಪುರುಷ ದಿನಕ್ಕೆ ಮೂರು ಬಾರಿ ಮತ್ತು ವರ್ಷಕ್ಕೆ 1,092 ಬಾರಿ ಸುಳ್ಳು ಹೇಳಿದರೆ, ಮಹಿಳೆ ವರ್ಷದಲ್ಲಿ 728 ಬಾರಿ ಸುಳ್ಳು ಹೇಳುತ್ತಾಳಂತೆ.
ಸೋಷಿಯಲ್ ಮೀಡಿಯಾಗಳಲ್ಲಿ ಕಡಿಮೆ ಸುಳ್ಳು ಹೇಳುವ ಮಂದಿ ನೇರ ಮಾತಿನ ವೇಳೆಯೇ ಹೆಚ್ಚು ಸುಳ್ಳು ಹೇಳುತ್ತಾರಂತೆ.
ಸಾಮಾನ್ಯವಾಗಿ ಪುರುಷರು ತನ್ನ ಸಂಗಾತಿಗೆ, ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಮತ್ತು ಸಹೋದ್ಯೋಗಿಗಳ ಜತೆ ಹೆಚ್ಚು ಸುಳ್ಳು ಹೇಳುತ್ತಾರಂತೆ. ಮಹಿಳೆಯರು ತಮ್ಮನ್ನು ಹೊಗಳಿಸಿಕೊಳ್ಳಲು ಹೆಚ್ಚು ಸುಳ್ಳು ಹೇಳುತ್ತಾರಂತೆ. ಹಾಗೆಯೇ ಹೊಸ ಬಟ್ಟೆ ಖರೀದಿಸಿದಾಗಲೂ ಸುಳ್ಳು ಹೇಳುತ್ತಾರೆ ಎಂದು ಅಧ್ಯಯನ ಹೇಳಿದೆ.
ಸುಳ್ಳು ಹೇಳುವುದರಲ್ಲಿ ಪುರುಷರೇ ನಿಸ್ಸೀಮರಂತೆ!
Follow Us