ಕೋಲಾರ: ಪಾನಮತ್ತನೊಬ್ಬ ಹಾವನ್ನೇ ಕಚ್ಚಿ ಸಾಯಿಸಿದ್ದಾನೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹಲವು ದಿನಗಳಿಂದ ಮದ್ಯ ಸಿಗದ್ದರಿಂದ ಬೇಸತ್ತಿದ್ದ ಈತ ಚೆನ್ನಾಗಿ ಕುಡಿದು ಹಾವನ್ನೇ ಕಚ್ಚಿ ಕಚ್ಚಿ ಸಾಯಿಸಿರುವ ವಿಡಿಯೋ ವೈರಲ್ ಆಗಿದೆ.
ದ್ವಿಚಕ್ರ ವಾಹನದಲ್ಲಿ ಈತ ಹೋಗುತ್ತಿದ್ದಾಗ ಬೈಕ್ ಗೆ ಹಾವು ಅಡ್ಡಬಂದಿದೆ. ಆಗ ಗಾಡಿಯನ್ನು ನಿಲ್ಲಿಸಿದ ಈತ ಬೈಕ್ ಬಳಿ ಇದ್ದ ಹಾವನ್ನು ಕೈಗೆ ಎತ್ತಿಕೊಂಡಿದ್ದಾನೆ. ನಂತರ ಅದನ್ನು ಕೊರಳಿಗೆ ಸುತ್ತಿಕೊಂಡು, ಅದರ ಬಾಯಿ, ಬಾಲವನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಕೆಲ ಕಾಲ ಕಚ್ಚಿದ್ದರಿಂದ ಹಾವು ಸತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪಾನಮತ್ತ ತಾಯಿಯಿಂದಲೇ ಮಗನ ತುಟಿ ಕಟ್:
ಇನ್ನೊಂದು ಘಟನೆಯಲ್ಲಿ ಕುಡಿದ ಮತ್ತಿನಲ್ಲಿ ತಾಯಿಯೇ ತನ್ನ ಮಗನ ತುಟಿಯನ್ನು ಕಚ್ಚಿ ತುಂಡರಿಸಿದ್ದಾರೆನ್ನಲಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗ್ರಾಮದ ಲೇಟ್ ರಂಗನಾಥ ಎಂಬಾತನ ಪತ್ನಿ ಪಾರ್ವತಿ ಎಂಬಾಕೆ ಕುಡಿದ ಮತ್ತಿನಲ್ಲಿ ತನ್ನ ಮಗ ಮೋಹನ್ (28) ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿ ತುಟಿಯನ್ನು ಕಚ್ಚಿ ತುಂಡರಿಸಿದ್ದಾಳೆ ಎಂದು ಆರೋಪಿಸಲಾಗಿದೆ.