ವಾಷಿಂಗ್ಟನ್: ಎಲ್ಲ ಸಂಶೋಧಕರು ಅಂದುಕೊಂಡಂತೆ ಆದರೆ ಫಿಟ್’ನೆಸ್ ಟ್ರ್ಯಾಕ್’ಗಾಗಿ ಬಂದಿರುವಂತೆಯೇ ಮನುಷ್ಯನಿಗೆ ಕೊರೋನಾ ಸೋಂಕು ತಗುಲಿದ್ದನ್ನು ತಕ್ಷಣ ಗುರುತಿಸುವಂತಹ ವಾಚ್’ಗಳು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.
ಅಮೆರಿಕದ ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ನಿಟ್ಟಿನಲ್ಲಿ ವರ್ಷದ ಆರಂಭದಿಂದಲೇ ಸಂಶೋಧನೆ ಆರಂಭಿಸಿದ್ದಾರೆ.
ಫಿಟ್ ಬಿಟ್, ಫಿಟ್ನೆಸ್ ಟ್ರ್ಯಾಕರ್, ಆ್ಯಪಲ್ ಫಿಟನೆಸ್ ವಾಚ್’ಗಳನ್ನು ಕೋವಿಡ್-19 ರೋಗ ಲಕ್ಷಣಗಳನ್ನು ಪತ್ತೆಹಚ್ಚಲು ಬಳಸಬಹುದಾದ ಸಾಧ್ಯತೆಗಳ ಕುರಿತು ಸ್ಟ್ಯಾನ್ ಪೋರ್ಡ್ ವಿವಿ ಅಧ್ಯಯನ ಆರಂಭಿಸಿದೆ.
ಈ ರೀತಿಯ ವಾಚ್’ಗಳು ಧರಿಸುವ ವ್ಯಕ್ತಿಯ ದೇಹದಲ್ಲಿನ ಉಷ್ಣತೆ, ಹೃದಯಬಡಿತ, ಆಕ್ಸಿಜನ್ ಅಗತ್ಯ ಎಲ್ಲವನ್ನೂ ಪತ್ತೆ ಮಾಡಿ ದಾಖಲಿಸುತ್ತವೆ. ಇದೇ ರೀತಿ ಕೊರೋನಾ ಸೋಂಕು ತಗುಲಿದಾಗಲೂ ಕೆಲಸ ನಿರ್ವಹಿಸುವಲ್ಲಿ ಯಶಸ್ವಿಯಾಗುವಂತೆ ಸಿದ್ಧಪಡಿಸಲು ಪ್ರಯೋಗಗಳು ನಡೆದಿದ್ದು, ಒಂದನೇ ಹಂತದಲ್ಲಿ ಈ ಪ್ರಯತ್ನ ಯಶಸ್ವಿಯಾಗಿದೆ.
ಆದರೆ ನ್ಯುಮೋನಿಯಾದ ಸಂದರ್ಭದಲ್ಲಿ ಉಂಟಾಗುವ ಉಸಿರಾಟದ ಸಮಸ್ಯೆಗೂ ಕೊರೋನಾ ಅಟ್ಯಾಕ್ ಸಂದರ್ಭದಲ್ಲಿ ಆಗುವ ಉಸಿರಾಟದ ಸಮಸ್ಯೆಗೂ ಸಾಮ್ಯತೆ ಇದ್ದು, ಇದನ್ನು ಈ ವಾಚ್ ಹೇಗೆ ಕಂಡುಹಿಡಿಯಬಹುದು ಎಂಬುದರ ಬಗ್ಗೆ ಎರಡನೆ ಹಂತದ ಅಧ್ಯಯನ ಚುರುಕುಗೊಂಡಿದೆ.
ಎರಡನೇ ಹಂತದ ಅಧ್ಯಯನ ಯಶಸ್ವಿಯಾದ ಬಳಿಕ ಈ ವಾಚ್’ಗಳು ಮಾರುಕಟ್ಟೆಗೆ ಬರಲಿದೆ. ಅಲ್ಲದೇ ಈ ವಿವಿ ವಿಜ್ಞಾನಿಗಳು ಎಲ್ಲ ರೀತಿಯ ಅನಾರೋಗ್ಯ ವನ್ನು ಪತ್ತೆ ಹಚ್ಚಲು ಬಳಸುವಂತ ವಾಚ್ ತಯಾರಿಕೆಗೂ ಪ್ರಯತ್ನ ಆರಂಭಿಸಿದ್ದಾರೆ.
Untouch ಬ್ಯಾಂಡ್ ಧರಿಸಿ, ಕೊರೋನಾ ನಿಯಂತ್ರಿಸಿ