ಪದ್ಯ- ಸಖ್ಯ ಸಂಧಾನ

newsics.com ಕವಿತೆ ಸಂಬಂಧದಲ್ಲಿ ಪ್ರಾಮಾಣಿಕತೆ ಹುಡುಕದಿರು ಗೆಳತಿ ಸಾಮರಸ್ಯ ಕೆಟ್ಟೀತು ಪ್ರಮಾಣೀಕರಿಸುವ ಪ್ರಯತ್ನ ಬಿಟ್ಟುಬಿಡೇ ಗೆಳತಿ ಸ್ವಾರಸ್ಯ ಹೆಚ್ಚೀತು ಸಾನುರಾಗ ಬಯಸಬೇಡವೆ ಗೆಳತಿ ಸಾಪೇಕ್ಷ ಹೆಚ್ಚೀತು ಸುಪರ್ದಿಯಲ್ಲಿರಿಸುವ ಬಯಕೆ ಹತ್ತಿಕ್ಕೇ ಗೆಳತಿ ಸಾಂಗತ್ಯ ಉಳಿದೀತು ಮುಖ್ಯ ವಿಷಯ ತಿಳಿದುಕೊಳ್ಳೇ ಗೆಳತಿ ಸಂಬಂಧದಲ್ಲಿ ಕಾಡಬೇಕಾದುದು ಬಿಟ್ಟಿರಲಾಗದ ಭಾವ ಅಷ್ಟೇ. – ಶೋಭಾ ಕಡೆಕೊಪ್ಪಲ, ಶಿವಮೊಗ್ಗ