newsics.com
ನವದೆಹಲಿ :ಅನಂತ್ ಅಂಬಾನಿ ಮದುವೆ ಪ್ರೀ-ವೆಡ್ಡಿಂಗ್ ಸಮಾರಂಭ ವೇಳೆ ನೀಡಿದ ಆಹಾರದಲ್ಲಿ ಕೂದಲು ಸಿಕ್ಕಿದೆ. ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿರುವ ಒರಿ ಹಂಚಿಕೊಂಡ ವಿಡಿಯೋದಿಂದ ಈ ವಿಚಾರ ವೈರಲ್ ಆಗಿದೆ.
ಬಾಲಿವುಡ್ ಸೆಲೆಬ್ರಿಟಿಗಳ ಆಪ್ತ ಎಂದೇ ಫೇಮಸ್ ಆಗಿರುವ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ-ವೆಡ್ಡಿಂಗ್ ಸಮಾರಂಭದ ಕೆಲವು ದೃಶ್ಯಗಳನ್ನು ಒರಿ ಹಂಚಿಕೊಂಡಿದ್ದಾರೆ. ಅತಿಥಿಗಳಿಗೆ ತಯಾರಿಸಿದ್ದ ನೂರಾರು ಬಗೆಯ ಆಹಾರದ ಬಗ್ಗೆ ಅವರೊಂದು ವಿಡಿಯೋ ಮಾಡಿದ್ದಾರೆ.
ಒರಿ ಮತ್ತು ಅವರ ಸ್ನೇಹಿತೆ ತಾನಿಯಾ ಶ್ರಾಫ್ ಅವರು ಹಲವು ಆಹಾರಗಳ ರುಚಿ ಸವಿದಿದ್ದಾರೆ. ಅದರ ನಡುವೆ ಅವರು ವಡಾ ಪಾವ್ ಕೂಡ ತಿಂದಿದ್ದಾರೆ. ತಿನ್ನುವುದಕ್ಕೂ ಮುನ್ನವೇ ‘ಇದು ಅತ್ಯುತ್ತಮ ವಡಾ ಪಾವ್’ ಎಂದು ಒರಿ ಬಿಲ್ಡಪ್ ಕೊಟ್ಟಿದ್ದಾರೆ. ಆದರೆ ತಾನಿಯಾ ಶ್ರಾಫ್ಗೆ ಆ ವಡಾ ಪಾವ್ನಲ್ಲಿ ಕೂದಲು ಸಿಕ್ಕಿದೆ. ‘ನನಗೆ ಇನ್ನೊಂದು ಬೇಕಿತ್ತು. ಆದರೆ ಅದರಲ್ಲಿ ಕೂದಲು ಇತ್ತು’ ಎಂದು ಅವರು ಹೇಳಿರುವುದು ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸಿದೆ. ಇದು ಸಖತ್ ವೈರಲ್ ಆಗುತ್ತಿದೆ.