ರಸ್ತೆ ಅಪಘಾತ: ಮಾವ, ಸೊಸೆ ಸಾವು, ತಾಯಿಗಾಗಿ ಹಂಬಲಿಸುತ್ತಿದೆ 6 ತಿಂಗಳ ಮಗು

newsics.com ಅಲ್ವರಾ(ರಾಜಸ್ಥಾನ): ರಸ್ತೆ ಅಪಘಾತವೊಂದರಲ್ಲಿ ಮಾವ ಮತ್ತು ಸೊಸೆ ಮೃತಪಟ್ಟಿದ್ದು, ಆರು‌ ತಿಂಗಳ ಮಗು ತಾಯಿಗಾಗಿ ಹಂಬಲಿಸುತ್ತಿರುವ ಹೃದಯವಿದ್ರಾವಕ ಘಟನೆ ಅಲ್ವರಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಒಂದೇ ದಿನ ಎರಡು ಜೀವ ಕಳೆದುಕೊಂಡ ಒಂದೇ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಮಾವ ಮತ್ತು ಸೊಸೆ ಬೈಕ್‌ನಲ್ಲಿ ರಸ್ತೆ ದಾಟುತ್ತಿರುವಾಗ ವೇಗವಾಗಿ ಬಂದ ವಾಹನವೊಂದು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತರಾಗಿದ್ದಾರೆ. ಮಹಿಳೆಯ ಆರು ತಿಂಗಳ ಮಗು ತಾಯಿ ಮಡಿಲಿಗಾಗಿ ಅಳುತ್ತಿದೆ. ರಾಜಸ್ಥಾನದ ಅಲ್ವರಾ … Continue reading ರಸ್ತೆ ಅಪಘಾತ: ಮಾವ, ಸೊಸೆ ಸಾವು, ತಾಯಿಗಾಗಿ ಹಂಬಲಿಸುತ್ತಿದೆ 6 ತಿಂಗಳ ಮಗು