newsics.com
ಮಗ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಎಲ್ಲರ ಕೇಂದ್ರಬಿಂದುವಾಗಿದ್ದ ನೀತಾ ಅಂಬಾನಿ ಸದ್ಯ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನೀತಾ ಅಂಬಾನಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ತಲುಪಿದ್ದು, ಪ್ಯಾರಿಸ್ ನಲ್ಲಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ನೀತಾ ಅಂಬಾನಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ಅವರ ಕೈ ಚುಂಬಿಸಿ ಅವರನ್ನು ಬರಮಾಡಿಕೊಂಡಿದ್ದಾರೆ. ನೀತಾ ಅಂಬಾನಿ ಹಾಗೂ ಇಮ್ಯಾನುಯೆಲ್ ಮ್ಯಾಕ್ರೋನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ನೀತಾ ಕೈಗೆ ಮ್ಯಾಕ್ರೋನ್ ಚುಂಬಿಸಿದ್ದು, ನೆಟ್ಟಿಗರಿಗೆ ಸರಿಕಂಡಿಲ್ಲ. ಬಹುತೇಕರು ಮುಖೇಶ್ ಅಂಬಾನಿ ಪರ ಬ್ಯಾಟ್ ಬೀಸಿದ್ದಾರೆ.
ಫೋಟೋದಲ್ಲಿ ಎಮ್ಯಾನುಯೆಲ್ ಮ್ಯಾಕ್ರೋನ್ ನೀತಾ ಅಂಬಾನಿ ಮುಂದೆ ನಮಸ್ಕರಿಸುತ್ತಿರುವುದನ್ನು ಮತ್ತು ಅವಳ ಕೈಗೆ ಮುತ್ತಿಡುತ್ತಿರುವುದನ್ನು ಕಾಣಬಹುದು. ಫ್ರಾನ್ಸ್ ಪದ್ಧತಿಗಳ ಪ್ರಕಾರ, ಮಹಿಳೆಯರಿಗೆ ಇದೇ ರೀತಿಯಲ್ಲಿ ಗೌರವವನ್ನು ನೀಡಲಾಗುತ್ತದೆ. ಆದ್ರೆ ನೆಟ್ಟಿಗರು ಇದಕ್ಕೆ ಕೆಂಡಕಾರಿದ್ದಾರೆ.