ಹಂದಿಯ ಮುಖವನ್ನು ಹೋಲುವ ಮೀನು ಪತ್ತೆ

newsics.com ಹಂದಿಯ ಮುಖವನ್ನು ಹೋಲುವ ಮೀನಿನ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದು ಹಂದಿಯ ಮುಖ, ಮೀನಿನ ದೇಹವನ್ನು ಹೊಂದಿದೆ. ಇದನ್ನು ನೋಡಿದರೆ ಒಂದು ಕ್ಷಣ ನೀವು ಶಾಕ್ ಆಗುವುದಂತೂ ಖಂಡಿತಾ. ಇದು ನಿಜಾನಾ? ಎಡಿಟೆಡ್ ಫೋಟೋನಾ? ಎಂದು ಅನುಮಾನ ಹುಟ್ಟುವುದು ಖಚಿತ. ಇಂಡೋನೇಷ್ಯಾದಲ್ಲಿ ಹಂದಿಯ ಮುಖವನ್ನು ಹೋಲುವ ಮೀನು ಪತ್ತೆಯಾಗಿದ್ದು, ಈ ಮೀನಿನ ಫೋಟೋಗಳನ್ನು ಇಂಡೋನೇಷ್ಯಾದ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋ ಎಲ್ಲೆಡೆ ಭಾರೀ ಸುದ್ದು ಮಾಡುತ್ತಿದೆ.