newsics.com
ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ದುಬಾರಿ ಕಾರುಗಳ ಪೈಕಿ ಅಪರೂಪದ, ಕೆಲವೇ ಕೆಲವು ಮಂದಿಯಲ್ಲಿರುವ ಒರಿಜನ್ ಮರ್ಸಿಡಿಸ್ ಮೇಬ್ಯಾಕ್ ಕಾರು ಇದೀಗ ಕೈಗೆಟುಕುವ ದರದಲ್ಲಿ ಮಾರಾಟಕ್ಕಿದೆ. ಆನ್ಲೈನ್ ಮೂಲಕವೇ ಬುಕಿಂಗ್ ಕೂಡ ಮಾಡಬಹುದು. ಕಾರು ಖರೀದಿಸೋ ಪ್ಲಾನ್ ಇದ್ರೆ ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮಾಲೀಕನ ವಿಜಯ್ ಮಲ್ಯರವರ ಕಾರೊಂದು ಮಾರಾಟಕ್ಕಿದೆ. ನೀವೂ ಖರೀದಿಸಬಹುದು!.
ಮರ್ಸಿಡಿಸ್ ಮೇಬ್ಯಾಕ್ 62 ಕಾರನ್ನು ಮಾರಾಟಕ್ಕೆ ಇರಿಸಲಾಗಿದೆ. ಇದು ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮಾಲೀಕನ ವಿಜಯ್ ಮಲ್ಯರವರಿಗೆ ಸೇರಿದ್ದಾಗಿದೆ. ಅಲ್ಟ್ರಾ ಐಷಾರಾಮಿ ಸೆಡಾನ್ ಕಾರೆಂದೇ ಇದು ಗುರುತಿಸಿಕೊಂಡಿದೆ. ವಿಜಯ್ ಮಲ್ಯ 2009ರಲ್ಲಿ ಈ ಕಾರು ಖರೀದಿಸಿದ್ದಾರೆ. ಆದರೆ ಮರ್ಸಿಡಿಸ್ ಕಂಪನಿ 2013ರಲ್ಲಿ ಈ ಮಾಡೆಲ್ನ ಉತ್ಪಾದನೆ ಸ್ಥಗಿತ ಮಾಡಿದೆ. ಸದ್ಯ ವಿಜಯ್ ಮಲ್ಯರವರ ಮೇಬ್ಯಾಕ್ 62 ಹೆಸರಿನ ಕಾರು ಮಾರಾಟಕ್ಕಿದ್ದು, 2.49 ಕೋಟಿಗೆ ಸೇಲ್ ಮಾಡಲಾಗುತ್ತಿದೆ.
ಮರ್ಸಿಡಿಸ್ ಮೇಬ್ಯಾಕ್ 62 ಕಾರಿನ ಪೂರ್ತಿ ಬಣ್ಣ ಕಪ್ಪು ಆಗಿದೆ. ಆದರೆ ಕಾರಿನ ಸೈಡ್ ಪ್ಯಾನೆಲ್ಗಳ ಗೋಲ್ಡ್ ಬಣ್ಣದ ದೊಡ್ಡ ಪಟ್ಟಿಯಿದೆ. ವಿಜಯ ಮಲ್ಯರವರು ಈ ಕಾರನ್ನು 2004ರಲ್ಲಿ ತರಿಸಿದ್ದರು. ಆದೆ 2009ರಲ್ಲಿ ನೋಂದಯಿಸಿದರು.
ಮೇಬ್ಯಾಕ್ 62 ಕಾರು ಒಟ್ಟು 33,971 ಕಿಮೀ ಮಾತ್ರ ಚಲಿಸಿದೆ. ಇನ್ನು ಈ ಕಾರಿನಲ್ಲಿ 5.5 ಲೀಟರ್ ಟ್ವಿನ್ ಟರ್ಬೋ ಚಾರ್ಜರ್ ಹೊಂದಿದ್ದು, ವಿ12 ಪೆಟ್ರೋಲ್ ಎಂಜಿನ್ ಹೊಂದಿದೆ. 543ಬಿಹೆಚ್ಪಿ ಎಂಜಿನ್ ಮತ್ತು 900 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಐದು ಗೇರ್ನಿಂದ ಕೂಡಿರುವ ಮೇಬ್ಯಾಕ್ 62 ಕಾರು 6.2 ಮೀಟರ್ನಷ್ಟು ಉದ್ದವಿದೆ.