newsics.com
ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನೊಬ್ಬ ಸರಸದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ನೋವಾ ಕಾರಿನೊಳಗೆ ಇಬ್ಬರು ಮಹಿಳೆಯರನ್ನು ತಬ್ಬಿಕೊಳ್ಳುತ್ತಾ ಯುವಕ ಎಂಜಾಯ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಸಿಟಿ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿರುವ ಸಫೇದಾಬಾದ್ನಲ್ಲಿರುವ ಕಾಳಿಕಾ ಹವೇಲಿ ರೆಸ್ಟೋರೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ಇನ್ನೋವಾ ಕಾರಿನೊಳಗಿನ ಯುವಕನ ಸರಸ ಸಲ್ಲಾಪದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ಫೋನ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.