newsics.com
ಸುಲಭವಾಗಿ ಮನೆಯಲ್ಲಿ ಸಿಗುವ ಐಸ್ ಕ್ಯೂಬ್ನಿಂದ ತ್ವಚೆಯಲ್ಲಿ ಏನೆಲ್ಲಾ ಬದಲಾವಣೆ ಆಗತ್ತೆ?
ಐಸ್ ಕ್ಯೂಬ್ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ಮುಖದ ಮೇಲಿನ ಊತ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಬಾರಿ ಐಸ್ ಕ್ಯೂಬ್ನಿಂದ ಮುಖಕ್ಕೆ ರಬ್ ಮಾಡಿಕೊಂಡರೆ ಉತ್ತಮ.
ಇದರಿಂದ ಮುಖದ ರಕ್ತ ಪರಿಚಲನೆ ಸುಧಾರಿಸುತ್ತದೆ. ಶೀತದ ಉಷ್ಣತೆಯು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಮತ್ತು ನೀವು ಐಸ್ ಅನ್ನು ಹಚ್ಚಿದಾಗ ಅವು ಹಿಗ್ಗುತ್ತವೆ. ಜತೆಗೆ ರಕ್ತದ ಹರಿವನ್ನು ಸುಧಾರಿಸುತ್ತದೆ.
ನಿಮ್ಮ ಕೆನ್ನೆಯ ಮೇಲೆ ಅತಿಯಾಗಿ ರಂಧ್ರಗಳು ಇದ್ದರೆ, ಐಸ್ ಕ್ಯೂಬ್ನಿಂದ ಮಸಾಜ್ ಮಾಡಿಕೊಳ್ಳಿ.
ಐಸ್ ಕ್ಯೂಬ್ ಅಪ್ಲೈ ಮಾಡಿಕೊಳ್ಳುವುದರಿಂದ ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನೀವು ಐಸ್ ಕ್ಯೂಬ್ ಹಚ್ಚಿಕೊಂಡಾಗ ಒತ್ತಡವನ್ನು ಕಡಿಮೆ ಮಾಡುವುದರ ಜತೆಗೆ ಹೆಚ್ಚು ಕಾಂತಿಯನ್ನು ಉತ್ತೇಜಿಸುತ್ತದೆ.
ನಿಮ್ಮ ಮಕ್ಕಳು ಮಿತಿಮೀರಿ ಟಿವಿ, ಮೊಬೈಲ್ ನೋಡುತ್ತಿದ್ದಾರಾ..? ಈ ಅಪಾಯ ತಪ್ಪಿದ್ದಲ್ಲ, ಎಚ್ಚರ!