newsics.com
ಬೆಂಗಳೂರು: ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದಂತ ಪೂಮಾ ಟೀಶರ್ಟ್ ಫುಲ್ ಟ್ರೆಂಡಿಂಗ್ನಲ್ಲಿ ಇದೆ.
ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹೋಗುವಾಗ ದರ್ಶನ್ ಅವರು PUMA ಎಂದು ಬರೆದಿರುವ ಕಪ್ಪು ಬಣ್ಣದ ಟೀಶರ್ಟ್ ಹಾಗೂ ಬ್ಲೂ ಕಲರ್ ಜೀನ್ಸ್ ಹಾಕಿಕೊಂಡಿದ್ದರು. ಆದರೆ ದರ್ಶನ್ ಧರಿಸಿದಂತ ಸೇಮ್ ಟು ಸೇಮ್ ಪೂಮಾ ಟೀಶರ್ಟ್ ಅನ್ನು ಅವರ ಅಭಿಮಾನಿಗಳು ಕೂಡ ಹಾಕಿಕೊಂಡಿದ್ದಾರೆ. ಪೂಮಾ ಟೀಶರ್ಟ್ ಧರಿಸಿ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಿದ ಮೇಲೆ 511 ಕೈದಿ ನಂಬರ್ ನೀಡಲಾಗಿತ್ತು. ಈ ನಂಬರ್ ಅನ್ನು ಅಭಿಮಾನಿಗಳು ಟೀಶರ್ಟ್ ಹಾಗೂ ವಾಹನಗಳ ಮೇಲೆ ಹಾಕಿಕೊಂಡಿದ್ದರು. ಈ ಎಲ್ಲ ಆದ ಮೇಲೆ ಇದೀಗ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಹಾಕಿಕೊಂಡಂತ ಟೀಶರ್ಟ್ ಸಖತ್ ಟ್ರೆಂಡ್ ಆಗುತ್ತಿದೆ. ಇನ್ನು ಬಳ್ಳಾರಿ ಜೈಲಿಗೆ ದರ್ಶನ್ ಹೋಗಿ 3 ದಿನಗಳು ಆಗಿದ್ದು ಅಂದಿನಿಂದ ಒಂದೇ ಟೀಶರ್ಟ್ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.