newsics.com
ಬೆಂಗಳೂರು: ರಷ್ಯಾದ ಬೇಹುಗಾರಿಕಾ ತಿಮಿಂಗಲ ಹ್ವಾಲ್ಡಮೀರ್ ಸಾವನ್ನಪ್ಪಿದೆ.
2019ರಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ರಷ್ಯನ್ ಸ್ಪೈ ತಿಮಿಂಗಿಲು ಎಂದೇ ಖ್ಯಾತಿ ಪಡೆದಿದ್ದ ಹ್ವಾಲ್ಡಮೀರ್ ನಾರ್ವೆಯ ಬಳಿ ಅಸುನೀಗಿದೆ. ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2700 ಪೌಂಡ್ ತೂಕದಷ್ಟಿತ್ತು ಎಂದು ಹೇಳಲಾಗಿದೆ.
2019ರಲ್ಲಿ ಸೆಂಟ್ ಪೀಟರ್ಸ್ಬರ್ಗ್ ಸಲಕರಣೆ ಎಂದು ಲೆಬೇಲ್ನೊಂದಿಗೆ ಇದು ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು. ಅಂದಿನಿಂದಲೂ ಇದು ರಷ್ಯಾ ಬೇಹುಗಾರಿಕೆಗಾಗಿ ಉಪಯೋಗಿಸಿರುವ ತಿಮಿಂಗಿಲ ಎಂದು ಇದಕ್ಕೆ ಹ್ವಾಲ್ಡಮೀರ್ ಎಂದು ನಾಮಕರಣ ಕೂಡ ಮಾಡಲಾಗಿತ್ತು.
ರಷ್ಯನ್ ಸ್ಪೈ ತಿಮಿಂಗಲು ಎಂದು ನಂಬಿದ್ದ ಅನೇಕ ರಷ್ಯಾದ ಅಧ್ಯಕ್ಷ ವ್ಲಾಡಮೀರ್ ಪುಟಿನ್ ಹೆಸರು ಸೇರಿಸಿ ಇದಕ್ಕೆ ಹ್ವಾಲ್ಡಮೀರ್ ಎಂದು ಹೆಸರಿಟ್ಟಿದ್ದಾರೆ ಇಂಗ್ಲಿಷ್ನ whale ನಿಂದ hvalಲ ತೆಗೆದುಕೊಂಡು vladamir putin ಹೆಸರಿನಿಂದ vladamir ತೆಗೆದುಕೊಂಡು ಹ್ವಾಲ್ಡಮೀರ್ ಎಂದು ಹೆಸರಿನ್ನಿಡಲಾಗಿತ್ತು.