ಲಕ್ನೋದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಐವರ ಸಾವು, ಹಲವರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ

newsics.com ಲಕ್ನೋ: ಲಕ್ನೋದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದಲ್ಲಿ 3 ಅಂತಸ್ತಿನ ಕಟ್ಟಡ ಕುಸಿದು ಐವರು ಸಾವಿಗೀಡಾಗಿದ್ದು, ಈವರೆಗೆ 24 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ. ಅಧಿಕಾರಿಗಳ ಪ್ರಕಾರ, ಕಟ್ಟಡದ ನೆಲಮಾಳಿಗೆಯಲ್ಲಿ ಕಟ್ಟಡ ಕುಸಿತದ ವೇಳೆ ಕಾಮಗಾರಿ ನಡೆಯುತ್ತಿತ್ತು. ಘಟನೆಯಲ್ಲಿ ಸುಮಾರು 13 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರ್ಮಿಲಾಪ್ ಬಿಲ್ಡಿಂಗ್ ಎಂದು ಕರೆಯಲ್ಪಡುವ ಕಟ್ಟಡವನ್ನು ಔಷಧ ವ್ಯಾಪಾರಕ್ಕಾಗಿ ಗೋಡೌನ್ ಆಗಿ ಬಳಸಲಾಗುತ್ತಿತ್ತು. ಸಂಜೆ 5 ಗಂಟೆ ಸುಮಾರಿಗೆ ಈ … Continue reading ಲಕ್ನೋದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಐವರ ಸಾವು, ಹಲವರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ