ಏರ್‌ಪೋರ್ಟ್ ಸಿಬ್ಬಂದಿ ಜತೆ ವಾಗ್ವಾದ: ಖ್ಯಾತ ನಟನ ಬಂಧನ

newsics.com ಹೈದರಾಬಾದ್:‌ ಇಲ್ಲಿನ ರಾಜೀವಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಜತೆ ಜಗಳವಾಡಿದ ಅರೋಪದ ಮೇಲೆ ಮಾಲಿವುಡ್‌ ನಟ ವಿನಾಯಗನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿಯಿಂದ ಗೋವಾಗೆ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದ್ದು, ವಿನಾಯಗನ್ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಗೋವಾಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕಾಗಿ ಕಾಯುತ್ತಿದ್ದಾಗ, ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದ್ದು, ಇದಾದ ಬಳಿಕ ವಾಗ್ವಾದ ದೈಹಿಕ ಹಲ್ಲೆವರೆಗೂ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ ವಾಹಿನಿಯೊಂದರ ಜತೆ ಮಾತನಾಡಿರುವ … Continue reading ಏರ್‌ಪೋರ್ಟ್ ಸಿಬ್ಬಂದಿ ಜತೆ ವಾಗ್ವಾದ: ಖ್ಯಾತ ನಟನ ಬಂಧನ