newsics.com
ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ರಸ್ತೆ ಸೇರಿಂದತೆ ಇನ್ನೀತರೆ ರಸ್ತೆಗಳಲ್ಲಿ ರವಿವಾರ (ಸೆ.08) ರಂದು ವಾಹನ ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಸೂಚನೆ ಹೊರಡಿಸಿದ್ದಾರೆ.
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ (ಸೆ.08) ರಂದು ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮವಿದೆ. ಹೀಗಾಗಿ ರವಿವಾರ ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಸಂಚಾರ ನಿರ್ಬಂಧಿಸಿರುವ ರಸ್ತೆಗಳು:
- ಜ್ಯೋತಿಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
- ಬ್ರಾಡ್ ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್ ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರ ಬಂದ್ ಆಗಲಿದೆ.
- ಧರ್ಮರಾಜ ಕೋಯಿಲ್ ಸ್ಟ್ರೀಟ್ – ಓ.ಪಿ.ಹೆಚ್.ರಸ್ತೆ ವರೆಗೆ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗುತ್ತದೆ.
- ಬಿ.ಆರ್.ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
- ಬಾಳೇ ಕುಂಡಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್ಗಳು ಸೇರಿದಂತೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗುತ್ತದೆ.