newsics.com
ಬಾಂಗ್ಲಾದೇಶವು ಕೂಡ ಅಫ್ಘಾನಿಸ್ತಾನದಂತಾಗುತ್ತಿದೆ, ಹಿಜಾಬ್ ಧರಿಸಿಲ್ಲ ಎಂದು ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ಹಲವಾರು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರು ದಾಳಿ ನಡೆಸುತ್ತಿರುವುದನ್ನು ಕಾಣಬಹುದು. ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆ ಸಿಟ್-ಅಪ್ ಮಾಡುತ್ತಿರುವ ದೃಶಯವನ್ನು ವಿಡಿಯೋದಲ್ಲಿ ಕಾಣಬಹುದು. ಪ್ರಸಿದ್ಧ ಕಾಕ್ಸ್ ಬಜಾರ್ನಲ್ಲಿ ರಸ್ತೆಯಲ್ಲಿ ಹೋಗುವ ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ದು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.