newsics.com
ಇಂದಿನ ಒತ್ತಡದ ಜೀವನದಲ್ಲಿ ಸಾಕಷ್ಟು ಜನರು ನಿದ್ರಾ ಹೀನತೆಯನ್ನು ಅನುಭವಿಸುತ್ತಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ತಜ್ಞರು ನಡೆಸಿದ ಸಂಶೋಧನೆಯು ಅನೇಕ ಜನರು 7 ರಿಂದ 9 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ತಿಳಿಸಿದೆ. ಆದರೆ ತಜ್ಞರ ಪ್ರಕಾರ ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರು ಹೃದ್ರೋಗಕ್ಕೆ ತುತ್ತಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ. ನಿದ್ರಾಹೀನತೆಯು ಹೃದಯದ ಆರೋಗ್ಯವನ್ನು ಗಂಭೀರವಾಗಿ ಹಾನಿ ಮಾಡುತ್ತದೆ. ರಾತ್ರಿಯಲ್ಲಿ 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಹೃದಯಾಘಾತದಂತಹ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಿದ್ರಾ ಹೀನತೆಯಿಂದಾಗುವ ಪ್ರಮುಖ ಸಮಸ್ಯೆಯೆಂದರೆ ಅದು ಅಧಿಕ ರಕ್ತದೊತ್ತಡ. ದೀರ್ಘಕಾಲದ ನಿದ್ರಾಹೀನತೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ಹೃದಯ ಕಾಯಿಲೆಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಈ ಒತ್ತಡವು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಅಪಧಮನಿಗಳನ್ನು ಹಾನಿಗೊಳಿಸುತ್ತದೆ. ಹೃದಯ ಸಮಸ್ಯೆಗಳನ್ನು ದ್ವಿಗುಣಗೊಳಿಸುತ್ತದೆ. ಹೃದಯಾಘಾತ: ನಿದ್ರೆಯ ಕೊರತೆಯು ಕ್ರಮೇಣ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹೃದಯ ಬಡಿತದ ವೇಗವನ್ನು ಹೆಚ್ಚಿಸುತ್ತದೆ. ಒಮ್ಮೆ ವೇಗವಾಗಿ ಮತ್ತು ಮತ್ತೊಮ್ಮೆ ನಿಧಾನವಾಗಿ ಬಡಿಯುವುದರಿಂದ ಹೃದಯದ ಆರೋಗ್ಯ ಹಾಳಾಗುತ್ತದೆ.
ನಿದ್ರಾಹೀನತೆಯು ಅಪಧಮನಿಕಾಠಿಣ್ಯ (ಅಪಧಮನಿಗಳ ಗಟ್ಟಿಯಾಗುವುದು ಮತ್ತು ಕಿರಿದಾಗುವಿಕೆ) ಸೇರಿದಂತೆ ವಿವಿಧ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.
ನಿದ್ರೆಯ ಕೊರತೆಯು ಕ್ರಮೇಣ ಜ್ಞಾಪಕ ಶಕ್ತಿಯ ನಷ್ಟಕ್ಕೆ ಕಾರಣವಾಗಬಹುದು. ಇದರಿಂದ ಅವರು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ನಿದ್ರಾಹೀನತೆಯು ದೇಹದಲ್ಲಿ ಇನ್ಸುಲಿನ್ ಪ್ರತಿರೋಧದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹದ ಜೀವಕೋಶಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ.
ನಿದ್ರಾಹೀನತೆಯು ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ದೀರ್ಘಕಾಲದ ಒತ್ತಡವು ಹೃದ್ರೋಗಕ್ಕೆ ಸಂಬಂಧಿಸಿದೆ. ಇದು ಅಧಿಕ ರಕ್ತದೊತ್ತಡದಂತಹ ಇತರ ಅಪಾಯಗಳನ್ನು ಉಲ್ಬಣಗೊಳಿಸಬಹುದು. ಆದ್ದರಿಂದ, ಆರೋಗ್ಯ ತಜ್ಞರು ದಿನಕ್ಕೆ ಕನಿಷ್ಠ 6 ಗಂಟೆಗಳ ಕಾಲ ನಿದ್ರೆ ಮಾಡಲು ಸಲಹೆ ನೀಡುತ್ತಾರೆ. ನಿಮ್ಮ ಸದೃಢವಾಗಿರಲು ನಿಮ್ಮ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನು ನೆನಪಿಡಿ.