newsics.com
ಬಳ್ಳಾರಿ: ಬಳ್ಳಾರಿ ಜೈಲಿನ ಡಾಕ್ಟರ್ಗಳು ದರ್ಶನ್ ಬೆನ್ನು ನೋವಿನ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಬಳಿಕ ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ.
ಜೈಲಿನ ಸೆಲ್ನಲ್ಲಿರುವ ದರ್ಶನ್ ಅವರು ತಮಗೆ ಬೆನ್ನು ನೋವು ಇದೆ. ಬಾತ್ ರೂಂಗೆ ಹೋಗುವಾಗ ಕಷ್ಟವಾಗುತ್ತಿದ್ದು, ಸರ್ಜಿಕಲ್ ಕಮೋಡ್ ಚೇರ್ ನೀಡುವಂತೆ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು.
ಬಳ್ಳಾರಿ ಜೈಲಿಗೆ ಇಂದು ದರ್ಶನ್ಗಾಗಿ ಜಿಲ್ಲಾಸ್ಪತ್ರೆಯಿಂದ ಸರ್ಜಿಕಲ್ ಚೇರ್ ಅನ್ನು ತರಲಾಗಿದೆ. ಕಾರಿನಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಸರ್ಜಿಕಲ್ ಚೇರ್ ತಂದು ಜೈಲಾಧಿಕಾರಿಗಳಿಗೆ ನೀಡಿದ್ದಾರೆ.