newsics.com
ಕಠ್ಮಂಡು: ನೇಪಾಳ ಕೇಂದ್ರೀಯ ಬ್ಯಾಂಕ್ ಹೊರ ತರಲು ನಿರ್ಧರಿಸಿರುವ ಹೊಸ ಕರೆನ್ಸಿ ಭಾರತದ ತಲೆನೋವಿಗೆ ಕಾರಣವಾಗಿದೆ.
ನೇಪಾಳ ಮತ್ತು ಭಾರತದ ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನೊಳಗೊಂಡಿರುವ ಚಿತ್ರದ ಹೊಸ ನೋಟನ್ನು ಮುದ್ರಿಸಲು ಮುಂದಾಗಿದೆ.
ನೇಪಾಳದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದೊಳಗೆ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸಿದ್ದು, ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.
ನೇಪಾಳ ರಾಷ್ಟ್ರ ಬ್ಯಾಂಕ್ ಈಗಾಗಲೇ ಹೊಸ ನಕ್ಷೆಯೊಂದಿಗೆ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರಲ್ಲಿ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಸೇರಿವೆ ಎಂದು ಬ್ಯಾಂಕ್ನ ಜಂಟಿ ವಕ್ತಾರ ದಿಲ್ಲಿರಾಮ್ ಪೊಖರೆಲ್ ಅವರು ಆನ್ಲೈನ್ ನ್ಯೂಸ್ ಪೋರ್ಟಲ್ಗೆ ತಿಳಿಸಿದ್ದಾರೆ.
ಹೊಸ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆ ಆರು ತಿಂಗಳಿಂದ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಪೋಖರೆಲ್ ಹೇಳಿದ್ದಾರೆ.
ನೇಪಾಳದ ಅಂದಿನ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ನೇತೃತ್ವದ ನೇಪಾಳದ ಕ್ಯಾಬಿನೆಟ್ ಮೇ 3 ರಂದು ನೇಪಾಳದ ಭಾಗವಾಗಿ ಈ ಪ್ರದೇಶಗಳನ್ನು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಇದೇ ನಕ್ಷೆಯನ್ನು ಹೊಸ ನೋಟುಗಳಲ್ಲಿ ಮುದ್ರಿಸಲು ನಿರ್ಧರಿಸಿತ್ತು.
ಬೆಂಗಳೂರಿನ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿ ನಟಿ ರಿಯಾ ಚಕ್ರವರ್ತಿ, ಅದ್ರೆ ಈಕೆ ಮದ್ವೆ ಮಾತ್ರ ಆಗಲ್ವಂತೆ
2023 ರ ವಿಧಾನಸಭೆ ಚುನಾವಣೆ: ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಅಸಿಂಧು ಕೋರಿ ಸುಪ್ರೀಂಗೆ ಬಿಜೆಪಿ ಅರ್ಜಿ,ನೋಟಿಸ್ ಜಾರಿ
ನಿವಿನ್ ಪೌಲಿ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲು: ನಾನು ತಪ್ಪು ಮಾಡಿಲ್ಲ ಎಂದ ನಟ
ಕನ್ನಡ ಬಿಗ್ ಬಾಸ್ನಲ್ಲಿ ಕಿಚ್ಚ, ಹಿಂದಿಯಲ್ಲಿ ಸಲ್ಮಾನ್ ನಿರೂಪಣೆ ಖಚಿತ ; ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಬಿಡುಗಡೆ