newsics.com
ಗೋವಾಗೆ ಹೋಗಿ ಬೀಚ್ಗಳ ಅಂಚಿನಲ್ಲಿ ಕುಳಿತು ಎಣ್ಣೆ ಹೊಡೆಯಬೇಕು, ಸಖತ್ ಎಂಜಾಯ್ ಮಾಡಬೇಕು ಎಂಬ ಕನಸು ಎಲ್ಲರಿಗೂ ಇದ್ದೇ ಇರುತ್ತೆ. ಆದರೆ, ಈ ಕನಸು ಕಾಣುತ್ತಿರೋರಿಗೆ ಗೋವಾ ಸರ್ಕಾರ ಶಾಕ್ ಕೊಟ್ಟಿದೆ.
ಸದ್ಯ ಹೀಗೆ ಗೋವಾ ಬೀಚ್ಗಳಲ್ಲಿ ಕಾನೂನು ಮೀರಿ ಎಣ್ಣೆ ಹೊಡೆಯಲು ಹೋಗಿ ಎಷ್ಟೋ ಮಂದಿ ಭಾರೀ ದಂಡ ಕಟ್ಟಿದ್ದಾರೆ. ಗೋವಾ ಸರ್ಕಾರ ಕೇವಲ 1 ವರ್ಷದಲ್ಲಿ ಬರೋಬ್ಬರಿ 4.4 ಲಕ್ಷ ರೂ. ದಂಡ ಸಂಗ್ರಹ ಮಾಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗೋವಾದ ಪ್ರವಾಸೋದ್ಯಮ ಇಲಾಖೆ ಸಚಿವ ರೋಹನ್ ಅವರೇ ಸ್ಪಷ್ಟಪಡಿಸಿದ್ದಾರೆ.
ಗೋವಾ ಬೀಚ್ಗಳಲ್ಲಿ ಕುಳಿತು ಮದ್ಯ ಕುಡಿದರೆ ಒಂದಲ್ಲ ಎರಡಲ್ಲ ಬರೋಬ್ಬರಿ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಅಲ್ಲಿನ ರಾಜ್ಯ ಸರ್ಕಾರ ಹೀಗೊಂದು ಕಠಿಣ ನಿಯಮ ಜಾರಿ ಮಾಡಿ ದಂಡ ಸಂಗ್ರಹ ಮಾಡುತ್ತಿದೆ. ಯಾರಾದ್ರೂ ಬೀಚ್ನಲ್ಲಿ ಕುಳಿತು ಕುಡಿದ್ರೆ, ಜತೆಗೆ ಚಿಪ್ಸ್ ಪ್ಯಾಕ್ಗಳು, ಬಾಟಲಿಗಳನ್ನು ಎಸೆದು ಹೋದ್ರೂ ದಂಡ ಬೀಳಲಿದೆ.