newsics.com
ಮುಂಬೈ: ನಟಿ ಸಾರಾ ಅಲಿ ಖಾನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಗಗನ ಸಖಿಯೊಬ್ಬರು ಸಾರಾ ಅಲಿ ಖಾನ್ ಉಡುಪಿನ ಮೇಲೆ ಆಕಸ್ಮಾತ್ ಆಗಿ ಜ್ಯೂಸ್ ಬೀಳಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗಗಮಸಖಿ ಜ್ಯೂಸ್ಗಳನ್ನು ಪ್ರಯಾಣಿಕರಿಗೆ ನೀಡುತ್ತಿರುವಾಗ ಆಕಸ್ಮಿಕವಾಗಿ ನಟಿಯ ಡ್ರೆಸ್ನ ಮೇಲೆ ಜ್ಯೂಸ್ ಅನ್ನು ಚೆಲ್ಲಿದ್ದಾಳೆ. ಇದರಿಂದ ನಟಿ ಅಸಮಾಧಾನಗೊಂಡಿದ್ದಾರೆ. ಆಗ ನಟಿ ಗಗನಸಖಿಯನ್ನು ಸಿಟ್ಟಿನಿಂದ ದುರುಗುಟ್ಟಿ ನೋಡುತ್ತ ಎದ್ದು ವಾಶ್ ರೂಮ್ಗೆ ಹೋಗಿ ಮರಳಿ ಬರುತ್ತಿರುವಾಗ ನಟಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ.
ವಿಡಿಯೊಗೆ ಹಲವರು ಕಾಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಮಾನಿಗಳು ಈ ಘಟನೆಯು ಪ್ರಚಾರಕ್ಕಾಗಿ ಮಾಡಿರಬಹುದು ಅಥವಾ ಮುಂಬರುವ ಯೋಜನೆಯ ದೃಶ್ಯವಾಗಿರಬಹುದು ಎಂದಿದ್ದಾರೆ.