newsics.com
ಬಿಎಂಡಬ್ಲ್ಯೂ ಮೊಟೊರಾಡ್ ಕಂಪನಿಯ ಅತಿ ದುಬಾರಿ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿದೆ.
ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ನ್ನು ಬಿಡುಗಡೆ ಮಾಡಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ನ ಎಕ್ಸ್ ಶೋರೂಮ್ ಬೆಲೆ 14.90 ಲಕ್ಷ ರೂಪಾಯಿ. ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ತಿಂಗಳಲ್ಲಿ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ನ ಬುಕ್ಕಿಂಗ್ ಆರಂಭವಾಗಿದ್ದು, 2024ರ ಸೆಪ್ಟೆಂಬರ್ನಲ್ಲಿ ಡೆಲಿವರಿ ಶುರುವಾಗಲಿದೆ. ಆರಂಭದಲ್ಲಿ ಈ ಸ್ಕೂಟರ್ನ್ನು 2022ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶಿಸಲಾಗಿತ್ತು.
ಈ ಸ್ಕೂಟರ್ನಲ್ಲಿ ಲಿಕ್ವಿಡ್ ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು 8.9 kWh ಬ್ಯಾಟರಿ ಪ್ಯಾಕ್ ನೊಂದಿಗೆ ಜೋಡಿಸಲಾಗಿದೆ. ಈ ಮೋಟಾರ್ 42 ಬಿಎಚ್ಪಿ ಶಕ್ತಿ ಹಾಗೂ 62 ಎನ್ ಎಂ ಟಾರ್ಕ್ ಅನ್ನು ಹೊರಹಾಕುತ್ತದೆ.
ಈ ದುಬಾರಿ ಸ್ಕೂಟರ್ 120 ಕಿಲೋಮೀಟರ್ ವೇಗ ಹೊಂದಿದ್ದು, ಒಂದು ಸಂಪೂರ್ಣ ಚಾರ್ಜ್ನಲ್ಲಿ ಇದು 130 ಕಿಲೋಮೀಟರ್ ದೂರ ಕ್ರಮಿಸುತ್ತದೆ.
ಸ್ಕೂಟರ್ 2.3kW ಸ್ಟ್ಯಾಂಡರ್ಡ್ ಹಾಗೂ ಐಚ್ಛಿಕ ವೇಗದ 6.9kW ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. 2.3kW ಸ್ಟ್ಯಾಂಡರ್ಡ್ ಚಾರ್ಜರ್ ನಲ್ಲಿ 4 ಗಂಟೆ 20 ನಿಮಿಷದಲ್ಲಿ ಮತ್ತು 6.9kW ಚಾರ್ಜರ್ನಲ್ಲಿ 1 ಗಂಟೆ 40 ನಿಮಿಷದಲ್ಲಿ 0-100 ಪ್ರತಿಶತ ಚಾರ್ಜ್ ಮಾಡಬಹುದು.
https://x.com/BMWMotorrad_IN/status/1816069132707672575?t=9kqYKaLto5u02LlZM_PEfg&s=19
https://x.com/BMWMotorrad_IN/status/1816069132707672575?t=9kqYKaLto5u02LlZM_PEfg&s=19
Paris Olympics: ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತ ವನಿತೆಯರು