newsics.com
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಗೆ ಬಂದ ನಂತರ ಕೋತಿಯೊಂದು ಬಸ್ನಲ್ಲಿ ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಪ್ರಯಾಣಿಸಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮೊದಲು ಮುಂಬೈ ಲೋಕಲ್ ಮೆಟ್ರೋದಲ್ಲಿ ನಾಯಿಯೊಂದು ಪ್ರತಿದಿನವೂ ಪ್ರಯಾಣಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಬಸ್ ರೈಡ್ ಮಾಡುವ ಸರದಿ ಕಾಗೆಗಳದ್ದು. ಹೌದು ಮುಂಬೈ ಮಹಾನಗರಿಯಲ್ಲಿ ಇಂತದೊಂದು ಅಪರೂಪದ ದೃಶ್ಯ ಸೆರೆ ಆಗಿದೆ.
ಕೆಂಪು ಬಣ್ಣದ ಸರ್ಕಾರಿ ಬಸ್ನ ಟಾಪ್ ಮೇಲೆ ಕುಳಿತು ಕಾಗೆಗಳು ರೈಡ್ ಮಾಡುತ್ತಿದ್ದು, ನೋಡಲು ಮಜವಾಗಿದೆ. ಟ್ವಿಟ್ಟರ್ನಲ್ಲಿ ಕ್ರೌನಿಶ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಸಾವಿರಾರು ಜನ ಈ ವೀಡಿಯೋ ನೋಡಿ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 4 ಸೆಕೆಂಡ್ನ ವೀಡಿಯೋದಲ್ಲಿ ಕಾಣಿಸುವಂತೆ ಬೃಹನ್ಮುಂಬೈ ಇಲೆಕ್ಟ್ರಿಕ್ ಪೂರೈಕೆ ಹಾಗೂ ಸಾರಿಗೆ ಇಲಾಖೆಗೆ ಸೇರಿದ ಬಸ್ನ ಟಾಪ್ ಮೇಲೆ ಕಾಗೆಗಳು ಕುಳಿತಿದ್ದು, ಬಸ್ ಮುಂದೆ ಹೋಗುತ್ತಿದ್ದರೂ ಕದಲದೇ ಟಾಪ್ ಮೇಲೆ ಪಯಣಿಸುತ್ತಿವೆ. ಈ ವೀಡಿಯೋ ಪೋಸ್ಟ್ ಮಾಡಿದವರು ಇವರೆಲ್ಲಿಗೆ ಹೋಗುತ್ತಿದ್ದಾರೆ ಎಂದು ಕ್ಯಾಪ್ಷನ್ ನೀಡಿದ್ದಾರೆ