newsics.com
ಶಾಲೆಯಲ್ಲಿ ಎರಡು ಜಡೆ ಹಾಕಿಕೊಂಡು ಬರಲಿಲ್ಲ ಶಿಸ್ತನ್ನು ಪಾಲಿಸುತ್ತಿಲ್ಲ ಎಂದು ಜಡೆಯನ್ನೇ ಕತ್ತರಿಸಿದ ಘಟನೆ ರಾಮನಗರ ಜಿಲ್ಲೆಯ ಅರಳಾಸಂದ್ರ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ನಡೆದಿದೆ.
ಶಾಲೆಗೆ ಬರುವಾಗ 8ನೇ ತರಗತಿಯ ಮೂವರು ವಿದ್ಯಾರ್ಥಿಗಳು ಎರಡು ಜಡೆ ಹಾಕಿಲ್ಲವೆಂದು ಶಿಕ್ಷಕರು ಕೂದಲನ್ನು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜು. 26ರಂದು ನಡೆದಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರವೂ ಈ ವಿಚಾರವಾಗಿ ಶಾಲೆಯಲ್ಲಿ ಬಿಗುವಿನ ವಾತಾವರಣವಿತ್ತೆಂದು ಹೇಳಲಾಗಿದ್ದು, ವಿಷಯ ತಿಳಿದ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಶಾಲೆಗೆ ಆಗಮಿಸಿ ಘಟನೆಯ ವಿವರಣೆಯನ್ನು ವಿದ್ಯಾರ್ಥಿನಿಯರಿಂದ ಹಾಗೂ ಅವರ ಸಹಪಾಠಿಗಳಿಂದ ಪಡೆದಿದ್ದಾರೆ.
ಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕಿ ಪವಿತ್ರ ಅಮಾನುಷ ಕೃತ್ಯವೆಸಗಿದ್ದಾರೆ. ಶಿಕ್ಷಕರ ಕೃತ್ಯಕ್ಕೆ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೆ, ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.