* ಅಮೆರಿಕ ಸಂಶೋಧಕರ ಸಾಧನೆ
ವಾಷಿಂಗ್ಟನ್: ಹೊಸ ಟೊಮೇಟೊ ತಳಿಯನ್ನು ಅಮೆರಿಕ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ದ್ರಾಕ್ಷಿಯಂತೆ ಗೊಂಚಲಾಗಿ ಬೆಳೆಯುವ ಅರ್ಬನ್ ಅಗ್ರಿಕಲ್ಚರ್ ಟೊಮೇಟೊ ಸಸಿಯನ್ನು ಸಂಶೋಧಿಸಿದ್ದಾರೆ.
40 ದಿನದಲ್ಲೇ ಬೆಳೆಯುವ ಈ ಟೊಮೇಟೊ ಉದ್ದವಾದ ಬಳ್ಳಿಯನ್ನು ಹೊಂದಿದೆ. ಇದನ್ನು ನಗರದ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಹುದಾಗಿದೆ. ಗಗನಚುಂಬಿ ಕಟ್ಟಡ ಅಥವಾ ಬಾಹ್ಯಾಕಾಶದ ಇಕ್ಕಟ್ಟಾದ ಪ್ರದೇಶಗಳಲ್ಲಿಯೂ ಇದನ್ನು ಬೆಳೆಸಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಒಳ್ಳೆಯ ರುಚಿ ಹೊಂದಿರುವ ಇದು ಸಣ್ಣ ಗಾತ್ರದಲ್ಲಿರುತ್ತದೆ. ಭೂಮಿ ಮತ್ತು ಗೊಬ್ಬರ ಬಳಕೆ ಎರಡನ್ನೂ ತಗ್ಗಿಸಲು ಸಹಕಾರಿಯಾಗಲಿದೆ. ಇಂಗಾಲದ ಪ್ರಮಾಣ ಕೂಡ ಕಡಿಮೆ ಇದೆ. ಸಿಆರ್ಐಎಸ್ಪಿಆರ್ ಜೀನ್ ಎಡಿಟಿಂಗ್ ಸಾಧನ ಬಳಸಿಕೊಂಡು ಗೊಂಚಲಾಗಿ ಬೆಳೆಯುವ ಹೊಸ ಟೊಮೇಟೊ ಸಸಿಯನ್ನು ಡಿಸೈನ್ ಮಾಡಲಾಗಿದೆ ಎಂದು ನ್ಯೂಯಾರ್ಕ್ನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ ಜೀವಶಾಸ್ತ್ರಜ್ಞ ಝಾಚ್ ಲಿಪ್ಮ್ಯಾನ್ ತಿಳಿಸಿದ್ದಾರೆ.
