Saturday, November 27, 2021

ತಾಲೂಕಿಗೊಂದರಂತೆ ಸಿರಿಧಾನ್ಯ ಸಂಸ್ಕರಣಾ ಘಟಕ ಬೇಕು

Follow Us

ಬೇಸಾಯದ ಕತೆ 3

 
* ಚಂಸು ಪಾಟೀಲ್
response@134.209.153.225
chamsupatil@gmail.com

 

ಪ್ಪ ಇದ್ದಾಗ ಆಗಾಗ ಬರುತ್ತಿದ್ದ ಎಂಜಿ ಪಾಟೀಲರು ಇತ್ತೀಚೆಗೆ ಮತ್ತೆ ನಮ್ಮ ಮನೆಗೆ ಬಂದಿರಲೇ ಇಲ್ಲ. ಅವರದು ರಾಣೇಬೆನ್ನೂರಿನಲ್ಲಿ ಹತ್ತಿ ಬೀಜ ಸಂಸ್ಕರಣಾ ಘಟಕ ಇದೆ. ಈ ಕಾರಣಕ್ಕೆ ನಾನು ಕೆಲ ವರ್ಷದ ಹಿಂದೆ ಬಿಟಿ ಹತ್ತಿ ಬದಲಾಗಿ ಸಹನಾ ಜವಾರಿ ಹತ್ತಿ ಬೆಳೆದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದೆ. ಕರ್ನಾಟಕ ಕೃಷಿ ವಿ.ವಿ.ಯಿಂದ ತಂದಿದ್ದ ಸಹನಾ ಹತ್ತಿ ಬೀಜಗಳನ್ನು ಬೆಳೆದ ಮೇಲೆ ಬೀಜ ವಾಪಸು ಕೊಡಲು ಹೇಳಿದ್ದರು. ಅದು ಎಕರೆಗೆ 12 ಕ್ವಿಂಟಾಲ್ ಇಳುವರಿ ಬಂದಿತ್ತು. ಏಳುವರೆ ಕ್ವಿಂಟಾಲ್ ಬೀಜಗಳನ್ನು ಕೆಜಿಗೆ 60ರೂ.ನಂತೆ ವಿಶ್ವವಿದ್ಯಾಲಯಕ್ಕೆ ಮರಳಿಸಿದ್ದೆ.
ಶಂಕರಗೌಡರು ಇತ್ತೀಚೆಗೆ ರಾಣೇಬೆನ್ನೂರಿನಲ್ಲಿ ಸಾವಯವ ರೈತರ ಸಭೆ ಏರ್ಪಡಿಸಿದ್ದರು. ಅದಕ್ಕಾಗಿ ಅವರು ಎಂಜಿ ಪಾಟೀಲರನ್ನು ಭೇಟಿಯಾಗಿದ್ದರು. ಆಗ ಎಂಜಿ ಪಾಟೀಲರು ನನಗೆ ಸಾವಯವ ಸಿರಿಧಾನ್ಯಗಳು ಬೇಕು. ಅವು ಯಾರ ಬಳಿ ಸಿಗುತ್ತವೆ ಎಂದು ವಿಚಾರಿಸಿದರಂತೆ. ಶಂಕರಗೌಡರು, `ಅಯ್ಯೋ ಇದು ಅಂಗೈಯಲ್ಲಿ ಬೆಣ್ಣಿ ಇಟ್ಕೊಂಡು ತುಪ್ಪಕ್ಕ ಉರೆಲ್ಲ ತಿರುಗಿದ್ಹಾಂಗ ಆತಲ್ಲ’ ಎಂದು ನನ್ನ ಹೆಸರು ಹೇಳಿದರಂತೆ. ಕೂನಬೇವು ಅಂತ ಕೇಳುತ್ತಲೇ ಎಂಜಿ ಪಾಟೀಲರು ಮೊದಲೆಲ್ಲ ಅಲ್ಲಿಗೆ ಹೋಗ್ತಿದ್ದೆ. ಇತ್ತೀಚೆಗೆ ಹೋಗಿಲ್ಲ ಎಂದಿದ್ದಾರೆ. ಶಂಕರಗೌಡರು ಅದಕ್ಕೆ ಹಾಗಾದ್ರೆ ಹೋಗಿ ಬರೋಣ ನಡ್ರೀ ಎಂದು ಅವರನ್ನು ಕರೆದುಕೊಂಡೇ ಬಂದಿದ್ದರು.
ಇಲ್ಲಿ ಬರುತ್ತಲೆ ಎಂಜಿ ಪಾಟೀಲರು `ಅಯ್ಯೋ ನಾನೀ ಮನೆಗೆ ಬಂದೇ ಬರ್ತಿದ್ದೆ ಎಂದು ಅಪ್ಪನನ್ನು ನೆನಪಿಸಿಕೊಂಡರು. ಅವರಿಗೆ ಬೇಸಾಯದ ಕತಿ ಪುಸ್ತಕ ಕೊಟ್ಟೆ. ಬೀಜದ ಕಂಪನಿಗಳು ರಾಣೇಬೆನ್ನೂರಿನಲ್ಲಿ ತಳವೂರಲು ತಾವು ಮಾಡಿದ ಕೆಲಸಕಾರ್ಯಗಳ ಬಗ್ಗೆ ಹೇಳಿದರು. ಅದರಿಂದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಕ್ಕ ಬಗ್ಗೆ, ಕೃಷಿಕರು ವೈಜ್ಞಾನಿಕ ಕೃಷಿ ಪದ್ಧತಿಗೆ ಹೊರಳಿದ ಬಗ್ಗೆ ಸ್ವಲ್ಪ ಅಭಿಮಾನದಿಂದಲೆ ವಿವರಿಸಿದರು. ಶಂಕರಗೌಡರದು ಯಾವಾಗಲೂ ನಿಷ್ಠುರ ಮಾತು. ಎಂಜಿ ಪಾಟೀಲರ ಮಾತಿನ ಮಧ್ಯೆಯೆ `ಏನು ಸಾಧನೆ ಬಿಡ್ರೀ ನಿಮ್ಮದು. ರೈತರಿಗೆ ರಸಗೊಬ್ಬರ, ವಿಷ ಹಾಕೋದು ಕಲಿಸಿ ಭೂಮಿ, ಪರಿಸರ ಎಲ್ಲಾ ಹಾಳುಮಾಡಿಬಿಟ್ರೀ. ಈಗ ನೀವೆ ಸಾವಯವ ಆಹಾರಧಾನ್ಯ ಹುಡುಕ್ತಾ ಇದ್ದೀರಿ. ನೀವು ಮಾಡಿದ್ದು ಸರಿ ಅನಿಸುತೈತೇನು?’ ಎಂದು ಪ್ರಶ್ನಿಸಿದರು.
ಈ ಮಾತಿಗೆ ನಿರುತ್ತರರಾದ ಅವರು `ಆ ಕಾಲಕ್ಕ ಅದು ಬಂತು, ಅದು ಬೇಕಾಗಿತ್ತು ಅಂತನ ಅದನ ಮಾಡಿದೀವಿ. ಈಗ ಅದರ ತಪ್ಪುದೋಷ ಗೊತ್ತಾಗ್ಯಾವು. ಈಗ ಅದಕ ಎಲ್ಲಾರಿಗೂ ಸಾವಯವ ಕೃಷಿ ಮಾಡ್ರೀ ಅನ್ನಾಕ್ಹತ್ತೇವಿ. ಮತ್ ನಾವೂ ಅವನ ಹುಡುಕಾಕ್ಹತ್ತೇವಿ’ ಎಂದು ನಕ್ಕರು.
ನನ್ನ ಹತ್ತಿರ ಊದಲು ಮತ್ತು ನವಣಿ ಅಷ್ಟೆ ಇರುವುದೆಂದು ಹೇಳಿದೆ. ಸಿರಿಧಾನ್ಯಗಳನ್ನು ಒಕ್ಕುವುದು ಮತ್ತು ಸಂಸ್ಕರಿಸುವುದು ಕಷ್ಟಕರವಾದ್ದರಿಂದ ಅವುಗಳನ್ನು ಹೆಚ್ಚು ಕ್ಷೇತ್ರದಲ್ಲಿ ಬೆಳೆಯುವುದು ಸಾಧ್ಯವಾಗುತ್ತಿಲ್ಲ. ಈಗ ನಮಗೋಸ್ಕರ ಎಷ್ಟು ಸಾಧ್ಯವೋ ಅಷ್ಟೆ ಬೆಳೆದುಕೊಳ್ಳುತ್ತಿರುವುದಾಗಿ ತಿಳಿಸಿದೆ. ನನಗೆ ಊದಲು ಬೇಕು ಅವನ್ನು ಗಿರಣಿಗೆ ಹಾಕಿಸಿ ಕೊಡಿರಿ ಎಂದು ಅವರು ಹೇಳಿದರು.
ಬಯಲುಸೀಮೆಯ ಹವಾಮಾನಕ್ಕೆ ಸಿರಿಧಾನ್ಯಗಳು ಬಹಳ ಹೊಂದಿಕೊಳ್ಳುತ್ತವೆ. ಆದರೆ ಇಲ್ಲಿ ತಮಿಳುನಾಡಿನಲ್ಲಿ ಇರುವಂತೆ ಸಾಕಷ್ಟು ಸಂಸ್ಕರಣಾ ಘಟಕಗಳಿಲ್ಲ. ಹೀಗಾಗಿ ಅವುಗಳನ್ನು ರೈತರೂ ಬೆಳೆಯಲು ಮನಸು ಮಾಡುತ್ತಿಲ್ಲ. ತಾಲೂಕಿಗೆ ಒಂದಾದರೂ ಸಂಸ್ಕರಣಾ ಘಟಕ ಇರಬೇಕು. ಅದು ಸಾಧ್ಯವಾದರೆ ಸಿರಿಧಾನ್ಯ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ ಎಂದು ನಾನು ಹೇಳಿದೆ. ಶಂಕರಗೌಡರೂ ನನ್ನ ಮಾತನ್ನು ಅನುಮೋದಿಸಿ, ಸರ್ಕಾರ ಈ ಕುರಿತು ಚಿಂತಿಸಿ ಕಾರ್ಯಪ್ರವೃತ್ತವಾದರೆ ರೈತರು ಮತ್ತು ಗ್ರಾಹಕರಿಗೂ ಒಳ್ಳೆಯದಾಗುತ್ತದೆ ಎಂದರು.

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!