ದೇಶದ 47 ಗಣ್ಯ ಕಲಾವಿದರ ಸಮೂಹ ಗಾಯನ
ಸಾಹಿತ್ಯ ಸಂಯೋಜನೆ: ಕಂಚಿ ಪರಮಾಚಾರ್ಯ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸ್ವಾಮೀಜಿ
ಮೂಲ ಗಾಯನ: ಭಾರತರತ್ನ ವಿದುಷಿ ಎಂ.ಎಸ್.ಸುಬ್ಬುಲಕ್ಷ್ಮಿ
ರಾಗ: ರಾಗಮಾಲಿಕಾ- ಯಮನ್ ಕಲ್ಯಾಣಿ ಮತ್ತು ಕಾಪಿ
newsics.com
ಕಂಚಿ ಪೀಠದ ಪರಮಾಚಾರ್ಯ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸ್ವಾಮೀಜಿ ಸಂಸ್ಕೃತದಲ್ಲಿ ರಚಿಸಿರುವ, ವಿಶ್ವಶಾಂತಿ ಸಾರುವ ಈ ಕೀರ್ತನೆಯನ್ನು ಭಾರತರತ್ನ ವಿದುಷಿ ಎಂ.ಎಸ್.ಸುಬ್ಬುಲಕ್ಷ್ಮಿ ವಿಶ್ವಸಂಸ್ಥೆಯ ಸುವರ್ಣ ಮಹೋತ್ಸವ (1966 ಅಕ್ಟೋಬರ್ 23) ಸಂದರ್ಭದಲ್ಲಿ ಪ್ರಸ್ತುತಪಡಿಸಿದ್ದರು. ಆ ಬಳಿಕ ನೂರಾರು ಕಲಾವಿದರು ಈ ಕೀರ್ತನೆಗೆ ದನಿಯಾಗಿದ್ದಾರೆ.
ಈ ಕೀರ್ತನೆ ‘ಜಗತ್ತಿನ ಎಲ್ಲ ಜನರು ಸಂತೋಷವಾಗಿರಲಿ, ಎಲ್ಲರಿಗೂ ಶುಭವಾಗಲಿ’ ಎಂಬ ಆಶಯದೊಂದಿಗೆ ಮುಗಿಯುತ್ತದೆ. ಯುದ್ಧ ಸಂದರ್ಭವಷ್ಟೇ ಅಲ್ಲ, ಪರಸ್ಪರ ಮಾನವೀಯ ನೆಲೆಯಲ್ಲಿ ಬದುಕಬೇಕಾದ ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿ ಈ ಕೀರ್ತನೆ ಅತ್ಯಂತ ಪ್ರಸ್ತುತ.
ಕೊರೋನಾ ಮೊದಲನೇ ಅಲೆ ಹಿನ್ನೆಲೆಯಲ್ಲಿ 2020ರ ಏಪ್ರಿಲ್ 14 ರಂದು ಲಾಕ್’ಡೌನ್ ಘೋಷಣೆಯಾದ ಬಳಿಕ ಸುಧಾ ರಘುನಾಥನ್ ಹಾಗೂ ಎಸ್.ಮಹತಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ವಿಡಿಯೋ ಇದು. ನಾವೆಲ್ಲರೂ ಒಂದೇ ಎಂಬ ಕಲ್ಪನೆಯಲ್ಲಿ ದೇಶದ 47 ಗಾಯಕರು ಈ ಕೀರ್ತನೆಗೆ ದನಿಗೂಡಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ವಿಶ್ವ ಸಂಗೀತ ದಿನ (ಜೂ.21) (ಅಂತಾರಾಷ್ಟ್ರೀಯ ಯೋಗ ದಿನ ಕೂಡ) ಹಿನ್ನೆಲೆಯಲ್ಲಿ ವಿಶ್ವಶಾಂತಿ ಬಯಸುವ ಈ ಕೀರ್ತನೆ ಪ್ರೀತಿಯ ಓದುಗರಿಗಾಗಿ.
ವಿಶ್ವ ಸಂಗೀತ ಹಾಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
ಮೈತ್ರೀಂ ಭಜತ…
ಮೈತ್ರೀಂ ಭಜತ ಅಖಿಲಹೃಜ್ಜೇತ್ರೀಂ
ಆತ್ಮವದೇವ ಪರಾನಪಿ ಪಶ್ಯತ ।
ಯುದ್ಧಂ ತ್ಯಜತ ಸ್ಪರ್ಧಾಂ ತ್ಯಜತ
ತ್ಯಜತ ಪರೇಷು ಅಕ್ರಮಮಾಕ್ರಮಣಂ ॥
ಜನನೀ ಪೃಥಿವೀ ಕಾಮದುಘಾಽಽಸ್ತೇ
ಜನಕೋ ದೇವಃ ಸಕಲದಯಾಲುಃ ।
ದಾಮ್ಯತ ದತ್ತ ದಯಧ್ವಂ ಜನತಾಃ
ಶ್ರೇಯೋ ಭೂಯಾತ್ ಸಕಲಜನಾನಾಂ ॥