newsics.com
ಒಬ್ಬೊಬ್ಬರು ಒಂದೊಂದು ಸಾಧನೆಗೆ ಮುಂದಾಗುತ್ತಾರೆ. ಆದರೆ ಈ ಆದಿ ಸ್ವರೂಪ ಮಾತ್ರ ಸಾಧನೆಗೆ ಆಯ್ದುಕೊಂಡ ಕಾರ್ಯ ವಿಭಿನ್ನವಾದದ್ದು.ಏಕಕಾಲಕ್ಕೆ ತನ್ನೆರಡೂ ಕೈಗಳಿಂದ ಅತಿ ವೇಗವಾಗಿ ಹಾಗೂ ಸುಂದರವಾಗಿ ಬರೆಯುವ ಮೂಲಕ ಮಂಗಳೂರಿನ ಈ ಆದಿ ಸ್ವರೂಪ ಜಗತ್ತಿನಲ್ಲಿ ದಾಖಲೆ ಬರೆದಿದ್ದಾಳೆ. ಬಹುಮುಖ ಪ್ರತಿಭೆಯ ಆದಿ ಸ್ವರೂಪ, ಈಗ ವರ್ಲ್ಡ್ ರೆಕಾರ್ಡ್ ದಾರಿಯಲ್ಲಿದ್ದಾಳೆ.
ಈಕೆ ಎರಡೂ ಕೈಗಳಲ್ಲಿ ಏಕಕಾಲಕ್ಕೆ 11 ಬಗೆಯಲ್ಲಿ ಬರೆಯಬಲ್ಲಳು. ಒಂದು ನಿಮಿಷಕ್ಕೆ 45 ಪದ ಬರೆಯುವ ಸಾಮರ್ಥ್ಯ ಹೊಂದಿರುವ ಆದಿ ಸ್ವರೂಪ, ಒಂದು ಕೈನಲ್ಲಿ ಇಂಗ್ಲಿಷ್ ಬರೆದರೆ, ಇನ್ನೊಂದು ಕೈನಲ್ಲಿ ಕನ್ನಡ ವಾಕ್ಯ ಬರೆಯುತ್ತಾಳೆ. ಅಥವಾ ಒಂದೇ ಭಾಷೆಯ ಒಂದೇ ವಾಕ್ಯ ಬರೆಯಬಲ್ಲಳು. ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬರೆಯಬಲ್ಲ ಈಕೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡೂ ಬರೆಯುವ ಸಾಮರ್ಥ್ಯ ಹೊಂದಿದ್ದಾಳೆ.
ಆದಿ ಎರಡೂ ಕೈಗಳಲ್ಲಿ ಅತಿ ವೇಗವಾಗಿ ಬರೆಯಬಲ್ಲ ಬರಹಗಾರ್ತಿ ಎಂಬ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಈ ರೆಕಾರ್ಡ್ ಘೋಷಣೆ ಮಾಡಿದೆ.
ಅಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್ ಕೂಡ ಈಕೆಗೆ ಗೊತ್ತು. ಆದರೆ ಶಾಲೆ ಮೆಟ್ಟಿಲು ಹತ್ತಿಲ್ಲ. ಮನೆಯೇ ಈಕೆಗೆ ಶಾಲೆ. ತಂದೆ-ತಾಯಿಯೇ ಗುರು. ಬಾಹ್ಯವಾಗಿ (ಎಕ್ಸ್ಟರ್ನಲ್) ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾಳೆ.
ಸ್ವಕಲಿಕಾ ವಿಧಾನದಲ್ಲಿ ಶಿಕ್ಷಣ ಪಡೆಯುತ್ತಿರುವ ಆದಿ ಸ್ವರೂಪ, ಒಂದೂವರೆ ವರ್ಷದಲ್ಲೇ ಓದಲಾರಂಭಿಸಿದ್ದಳು. ಎರಡೂವರೆ ವರ್ಷದಲ್ಲಿದ್ದಾಗ ದಿನಕ್ಕೆ 30 ಪುಟ ಬರೆಯುತ್ತಿದ್ದಳು. ಈಗಾಗಲೇ 120 ಕಾದಂಬರಿಗಳನ್ನು ಓದಿರುವ ಆದಿ, ಈಗ ಒಂದು ಕಾದಂಬರಿ ಬರೆಯುತ್ತಿದ್ದಾಳೆ ಎನ್ನುತ್ತಾರೆ, ಆಕೆಯ ತಂದೆ ಗೋಪಾಲ್ ಗೋಪಾಡ್ಕರ್ ಮತ್ತು ತಾಯಿ ಸುಮಾಡ್ಕರ್.
ಎರಡೂ ಕೈನಲ್ಲಿ ಬರೆವ ಸಾಧಕಿ…
Follow Us