Wednesday, November 30, 2022

ಆಕಾಶವಾಣಿಯ ಚಿತ್ರಗೀತೆ ವೈವಿಧ್ಯಮಯ…

Follow Us

ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು!
ಅದರ ಹಿಂದೆ ಇರುವ ಶ್ರಮವನ್ನು .
ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು,
ಪ್ರಾದೇಶಿಕ ವಿವಿಧ ಭಾರತಿ ಕೇಂದ್ರಗಳು,
2000 ದ ನಂತರ ಬಂದ FM ಕೇಂದ್ರಗಳು
ಚಿತ್ರಗೀತೆಗಳ ಪ್ರಸಾರವನ್ನು ಅವಿಭಾಜ್ಯ ಅಂಗ ಮಾಡಿಕೊಂಡಿದ್ದವು.


♦ ಬಿ.ಕೆ. ಸುಮತಿ
ಆಕಾಶವಾಣಿ ಹಿರಿಯ ಉದ್ಘೋಷಕರು
newsics.com@gmail.com

1952 ರಲ್ಲಿ ಬಿ. ವಿ. ಕೇಸ್ಕರ್ ಅವರು ಆಕಾಶವಾಣಿಯಲ್ಲಿ ಚಿತ್ರಗೀತೆ ಪ್ರಸಾರ ಬೇಡ ಎಂದ ಸಮಯದಿಂದ ಇಲ್ಲಿಯವರೆಗೂ ನೋಡಿದರೆ, ಏನೆಲ್ಲ ಬದಲಾವಣೆಗಳು !
ಆಶ್ಚಯ೯ ಎನಿಸುತ್ತದೆ.
ಚಿತ್ರಗೀತೆ ಎಂದರೆ ಮೂಗು ಮುರಿಯುತ್ತಿದ್ದ ಮಂದಿ ಕ್ರಮೇಣ ಇಲ್ಲಿ ಏನೋ ಆಕರ್ಷಣೆ ಇದೆ ಎಂಬುದನ್ನು ಮನಗಾಣಲು ಆರಂಭಿಸಿದರು. ಪ್ರಾದೇಶಿಕ ವಿವಿಧ ಭಾರತಿ ಕೇಂದ್ರಗಳ ಸ್ಥಾಪನೆ ಆದ ನಂತರ ಚಿತ್ರಗೀತೆಗಳ ಪ್ರಕಾರ ಹೆಚ್ಚು ಹೆಚ್ಚು ಜನಪ್ರಿಯವಾಯಿತು.
ಚಿತ್ರಗೀತೆಗಳ ಪ್ರಸಾರ ಮತ್ತು ಪ್ರಚಾರದಲ್ಲಿ ಆಕಾಶವಾಣಿ ಕೊಡುಗೆ ಅಪಾರ.
ಚಿತ್ರಗೀತೆ ಮತ್ತು ಆಕಾಶವಾಣಿ ಅಂದ ಕೂಡಲೇ
ಅಮೀನ್ ಸಯಾನಿ, ಬಿನಾಕಾ ಗೀತ್ ಮಾಲಾ ಎಂದು ಉದಾಹರಿಸುತ್ತಾರೆ. ಆಗಿನ ಸಂದರ್ಭಕ್ಕೆ
ಅದೊಂದು ಅತ್ಯಂತ ಜನಪ್ರಿಯ ದಾಖಲಾರ್ಹ ಮತ್ತು ಚಾರಿತ್ರಾರ್ಹ ಕಾರ್ಯಕ್ರಮ.
ನಿಜ. ಆದರೆ ಚಿತ್ರಗೀತೆ ಕಾರ್ಯಕ್ರಮ ಅಂದರೆ ಸಾವಿರಾರು ಧ್ವನಿಗಳಿವೆ.
ದೇಶದಾದ್ಯಂತ ಚಿತ್ರಗೀತೆಗಳ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದು ಆಯಾ ಕೇಂದ್ರಗಳ ಉದ್ಘೋಷಕರು.
ಒಂದೊಂದು ಆಕಾಶವಾಣಿ ಕೇಂದ್ರದಲ್ಲೂ ಸರ್ಕಾರದ ನಿಯಮ ಅನುಸಾರ 6 ರಿಂದ 8 ಮಂದಿ ಕಾಯಂ ಉದ್ಘೋಷಕರು ಇರುತ್ತಿದ್ದರು.
ಕೇಂದ್ರದ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ನಿರೂಪಣೆ ಒದಗಿಸುತ್ತಾ, ನಿರ್ಮಾಣದಲ್ಲಿ ಸಹಾಯ ಮಾಡುತ್ತಾ ನೇರ ಪ್ರಸಾರದಲ್ಲಿ ತೊಡಗಿಸಿಕೊಳ್ಳುವುದು ಉದ್ಘೋಷಕರ ಕೆಲಸ.
ನಿಲಯದ ಪ್ರಸಾರ ಕಾರ್ಯ ಆರಂಭ ಆಗುವುದು ಮುಂಜಾನೆ 5. 50 ಕ್ಕೆ.
ಬೆಳಗ್ಗೆ 4.30 ಕ್ಕೆ ಉದ್ಘೋಷಕ ತನ್ನ ಬೆಳಗಿನ ಪಾಳಿಗೆ ಹಾಜರಾಗುತ್ತಾನೆ.
ಅಂದರೆ ಆತ/ಆಕೆ 3.30ಕ್ಕೆ ಹಾಸಿಗೆ ಬಿಟ್ಟು ಏಳಬೇಕು.
ರಾತ್ರಿ ಪಾಳಿ ಆದರೆ ಸಂಜೆ 4 ಕ್ಕೆ ಆರಂಭ,
11.30ಕ್ಕೆ ಮುಕ್ತಾಯ.
ಮನೆ ಸೇರುವುದು ನಡು ರಾತ್ರಿ 12.30 ರ ನಂತರವೇ.
ಹೀಗೆ ಪಾಳಿ ಕೆಲಸ ಮಾಡುವ ಉದ್ಘೋಷಕರು ಚಿತ್ರಗೀತೆಗಳನ್ನು ಹುಡುಕಿ ಹುಡುಕಿ ಪ್ರಸಾರಕ್ಕೆ ಅಣಿ ಮಾಡುತ್ತಾರೆ.
15 ನಿಮಿಷ ಅಂದರೆ ಅಂದಾಜು ಮೂರು ಹಾಡು.
ಅರ್ಧ ಗಂಟೆ ಅಂದರೆ ಅಂದಾಜು ಆರು ಹಾಡು.
ಮಧ್ಯದಲ್ಲಿ ಜಾಹೀರಾತುಗಳು ಇದ್ದರೆ ಹಾಡುಗಳ ಅವಧಿ ಹೇಗೆ?
ವಿಶೇಷ ಸಂದರ್ಭಗಳಲ್ಲಿ ಎಂತಹ ಗೀತೆಗಳು ಪ್ರಸಾರ ಆಗಬೇಕು?
ಹೀಗೆ ಯೋಚಿಸಿ ಪ್ರತಿ ದಿನ ಪ್ರತಿ ಕ್ಷಣ ಚಿತ್ರಗೀತೆ ಬದುಕು ಬದುಕುವವರು ಉದ್ಘೋಷಕರು.
ಚಿತ್ರಗೀತೆಗಳ ಪ್ರಸಾರದಲ್ಲಿ ಆಕಾಶವಾಣಿ ಪಾತ್ರ ಇದೆ ಎಂದು ಒಂದು ವಾಕ್ಯ ಹೇಳುವ ಪ್ರತಿಯೊಬ್ಬರೂ ಗಮನಿಸಬೇಕಾದದ್ದು ಆಯ್ಕೆ ಮತ್ತು ಪ್ರಸಾರದ ವೈವಿಧ್ಯವನ್ನು!
ಅದರ ಹಿಂದೆ ಇರುವ ಶ್ರಮವನ್ನು .
ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳು,
ಪ್ರಾದೇಶಿಕ ವಿವಿಧ ಭಾರತಿ ಕೇಂದ್ರಗಳು,
2000 ದ ನಂತರ ಬಂದ FM ಕೇಂದ್ರಗಳು
ಚಿತ್ರಗೀತೆಗಳ ಪ್ರಸಾರವನ್ನು ಅವಿಭಾಜ್ಯ ಅಂಗ ಮಾಡಿಕೊಂಡಿದ್ದವು.
ಮನರಂಜನೆಯೇ ಪ್ರಧಾನವಾದ ಯುವ ಸಮುದಾಯವನ್ನು ಉದ್ದೇಶ ವಾಗಿಟ್ಟುಕೊಂಡು ಸ್ಥಾಪನೆ ಆದ rainbow ಅಥವಾ Metro ವಾಹಿನಿಗಳು ಅನವರತ ಚಿತ್ರಗೀತೆ, 24 ಗಂಟೆ ಚಿತ್ರಗೀತೆ ಪ್ರಸಾರದಲ್ಲಿ ಮುಳುಗಿದವು.
ಚಿತ್ರಗೀತೆಗಳು ಜನಜೀವನ ಮಿಡಿತವಾಯಿತು.
ಚಿತ್ರಗೀತೆಗಳ ಸುಗ್ಗಿ!
ಚಿತ್ರಗೀತೆ ಕುರಿತು ಬರೆಯುವವರು,
ಚಿತ್ರಗೀತೆ ಹಾಡುವವರು,
ಚಿತ್ರಗೀತೆ ಸಂಗ್ರಹ ಮಾಡುವವರು ಎಲ್ಲರೂ ಆ ಪರಿಕಲ್ಪನೆಗಳನ್ನು ಕೊಟ್ಟ ಉದ್ಘೋಷಕ ವರ್ಗವನ್ನು ಸ್ಮರಿಸಲೇಬೇಕು.
ಪ್ರಾದೇಶಿಕ ವಿವಿಧ ಭಾರತಿಗಳಲ್ಲಿ , ಆಕಾಶವಾಣಿ ಚಿತ್ರಗೀತೆಗಳ ಪ್ರಸಾರದಲ್ಲಿ ನಡೆದಷ್ಟು ಪ್ರಯೋಗಗಳು ಎಲ್ಲೂ ನಡೆದಿಲ್ಲ ಎಂದು ಘಂಟಾಘೋಷವಾಗಿ ಹೇಳಬಹುದು.
ಮೂವತ್ತು ಮೂವತ್ತೈದು ವರ್ಷ ಚಿತ್ರರಂಗದ, ಚಿತ್ರಗೀತೆಗಳ ಏಳುಬೀಳುಗಳನ್ನು ನಿರಂತರ ಗಮನಿಸುತ್ತ ಬಂದವರು ಉದ್ಘೋಷಕರು.
ಸದಾ ಹಿಂದಿ ಕಾರ್ಯಕ್ರಮಗಳನ್ನು ಉದಾಹರಿಸುವ ಚಿತ್ರಗೀತೆ ಸಂಬಂಧಿ ಲೇಖಕರು ಕನ್ನಡದ ಪ್ರಯೋಗಗಳನ್ನು ಗಮನಿಸಲಿಲ್ಲ ಎನಿಸುತ್ತದೆ.
ಚಿತ್ರಗೀತೆ ಪ್ರೇಮಿಗಳಿಗೆ ಆಕಾಶವಾಣಿ ಧ್ವನಿಗಳು ಅತ್ಯಂತ ಆಪ್ತ.
ಯಾರಿಗೆ ಯಾವ ಗೀತೆ ಇಷ್ಟ?
ಈ ಗೀತೆಗೆ ಉದ್ಘೋಷಣೆ ಹೇಗೆ ಕೊಟ್ಟರೆ ಶ್ರೋತೃ ಇಷ್ಟಪಡುತ್ತಾನೆ ?
ಯಾರ ಅಭಿರುಚಿ ಏನು?
ಸಂದರ್ಭ ಏನು?
ಬೆಳಿಗ್ಗೆ ಎಂಥ ಹಾಡು ?
ರಾತ್ರಿಗೆ ಎಂಥ ಹಾಡು?
ಹಬ್ಬ , ರಾಜ್ಯೋತ್ಸವ, ಮುಂತಾದ ವಿಶೇಷ ,
ವಾರದ ವಿಶೇಷ …
ಒಂದೇ ಎರಡೇ?
ಇಷ್ಟೆಲ್ಲ ಗಮನಿಸುತ್ತಾ ಚಿತ್ರಗೀತೆ ಲೋಕದಲ್ಲಿ ಇರುವ ಅನಾಮಿಕ ಉದ್ಘೋಷಕ.
ಧ್ವನಿಯಿಂದ ಬಾಂಧವ್ಯ ಬೆಸೆಯುವ ಮಾಂತ್ರಿಕ.
ಚಿತ್ರಗೀತೆಗಳ ಲೋಕದಲ್ಲಿ ಇವತ್ತು ನಾವು ಕೇಳುವ ಅಂತ್ಯಾಕ್ಷರಿ, ಒಬ್ಬರೇ ಕಲಾವಿದರು ಹಾಡಿರುವ ಗೀತೆಗಳು, ಒಂದೇ ವಿಷಯದ ಗೀತೆಗಳು, ವಿಚಾರಕ್ಕೆ ತಕ್ಕ ಗೀತೆಗಳು, ರಾಗ ಆಧಾರಿತ ಗೀತೆಗಳು
ಹೀಗೆ … ಇವೆಲ್ಲ ಪ್ರಯೋಗಗಳನ್ನು ಮಾಡಿದವರು, ತಲುಪಿಸಿದವರು ಆಕಾಶವಾಣಿಯ ಉದ್ಘೋಷಕರು .
ಚಿತ್ರ ಲಹರಿ, ಲಹರಿ, ನಂದನ, ಗೀತ ಪುಷ್ಪ,
ಬೃಂದಾವನ, ಮಿಶ್ರ ಮಾಧುರ್ಯ, ಕಾಮನಬಿಲ್ಲು , ತರಂಗ, …
ಒಂದೊಂದು ಶೀರ್ಷಿಕೆಯಲ್ಲಿ ಭಿನ್ನ ವಿಭಿನ್ನ ಗೀತೆಗಳ ಪ್ರಸಾರ ಇರುತ್ತಿತ್ತು.
ಇವಲ್ಲದೆ telephone ಮೂಲಕ ಮೆಚ್ಚಿನ ಚಿತ್ರಗೀತೆ, ಪತ್ರ ಆಧಾರಿತ ಮೆಚ್ಚಿನ ಚಿತ್ರಗೀತೆ,
ಬಹಳ ಜನಪ್ರಿಯ ಕಾರ್ಯಕ್ರಮಗಳು.
ಚಿತ್ರಗೀತೆಗಳ ಈ ರಮ್ಯ ಲೋಕದ ಮುಂದಿನ ಮಾತು… ಮುಂದಿನ ವಾರ ..

ಮತ್ತಷ್ಟು ಸುದ್ದಿಗಳು

vertical

Latest News

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...

48,500 ವರ್ಷಗಳ ಹಿಂದಿನ ಝೋಂಬಿ ವೈರಸ್‌ ಪತ್ತೆ

newsics.com ಮಾಸ್ಕೋ: ಸೈಬೀರಿಯಾದಲ್ಲಿ 48,500 ವರ್ಷಗಳ ಹಿಂದಿನ ಝೋಂಬಿ ವೈರಸ್‌ ಪತ್ತೆಯಾಗಿದೆ. ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದಲ್ಲಿ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್‌ಗಳನ್ನು ಪತ್ತೆ...
- Advertisement -
error: Content is protected !!