ರಂಗದಲ್ಲಿ, ಕಿರಿಯ ಕಲಾವಿದರನ್ನು ಅತಿ ಗೌರವದಿಂದ ಕಾಣುವುದಲ್ಲದೇ, ಅವರಿಂದಾಗುವ ಸಣ್ಣ ಪುಟ್ಟ ತಪ್ಪುಗಳನ್ನು ಪ್ರೇಕ್ಷಕರಿಗೆ ಗೊತ್ತಾಗದ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಎಂ.ಕೆ. ರಮೇಶ್ ಆಚಾರ್ ಅವರ ಸಜ್ಜನಿಕೆ.
4
♦ ದಿವ್ಯಾ ಶ್ರೀಧರ್ ರಾವ್
response@newsics.com
newsics.com@gmail.com
ಅ ಧಿಕೃತವಾಗಿ ಗುರುವೆನಿಸಿಕೊಂಡಿರುವುದು ಕೆಲವರಿಗಾದರೂ, ಯಕ್ಷರಂಗದ ಪ್ರತಿಯೊಬ್ಬರ ಅನುಮಾನಗಳನ್ನು ಬಗೆಹರಿಸುವ, ಹಲವರ ಬಾಯಿಯಿಂದ ಗುರುಗಳು ಎಂದೇ ಕರೆಸಿಕೊಳ್ಳುವ ಅಪರೂಪದ ಕಲಾವಿದ, ಪ್ರಸಂಗಕರ್ತ ಎಂ.ಕೆ. ರಮೇಶ್ ಆಚಾರ್ ಅವರು.
ನೂರಾರು ಪ್ರಸಂಗಗಳನ್ನು ಬರೆದಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಎಂ.ಕೆ. ರಮೇಶ್ ಆಚಾರ್, ತೆಂಕು ಯಕ್ಷರಂಗದಲ್ಲಿ ತಮ್ಮ 60 ವರ್ಷಗಳ ಸುದೀರ್ಘ ಪ್ರಯಾಣವನ್ನು ಅತ್ಯಂತ ಸಂತಸದಿಂದ ಮುಗಿಸಿ, ಈ ವರ್ಷ 61ನೇ ವರ್ಷದ ತಿರುಗಾಟಕ್ಕೆ ಸಿದ್ಧರಾಗಿದ್ದಾರೆ.
ನಯ, ವಿನಯವನ್ನೇ ತಮ್ಮ ಸಾಧನೆಯ ದಾರಿಯೆಂಬಂತೆ ಬದುಕುತ್ತಿರುವ ರಮೇಶ್ ಅವರು, ಸ್ತ್ರೀ ವೇಷಧಾರಿಯಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದರಾದರೂ, ಮೊದಲು ಅವರು ಅಭಿಮನ್ಯುವಿನಂತಹ ಪುಂಡುವೇಷದೊಂದಿಗೆ ಯಕ್ಷರಂಗಕ್ಕೆ ಹೆಜ್ಜೆ ಇಟ್ಟವರು.
ರಂಗದಲ್ಲಿ, ಕಿರಿಯ ಕಲಾವಿದರನ್ನು ಅತಿ ಗೌರವದಿಂದ ಕಾಣುವುದಲ್ಲದೇ, ಅವರಿಂದಾಗುವ ಸಣ್ಣ ಪುಟ್ಟ ತಪ್ಪುಗಳನ್ನು ಪ್ರೇಕ್ಷಕರಿಗೆ ಗೊತ್ತಾಗದ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಅವರ ಸಜ್ಜನಿಕೆ. ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವ ಇವರ ಬಗ್ಗೆ ಯಕ್ಷರಂಗಕ್ಕೊಂದು ವಿಶೇಷ ಹೆಮ್ಮೆ.
ಅದೆಷ್ಟೋ ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಮುಡಿಗೇರಿಸಿಕೊಂಡ ರಮೇಶ್ ಆಚಾರ್ ಅವರ ಸರಳತನದ ನುಡಿಗಳನ್ನಾಲಿಸಿದರೆ, ಅವರಿಗಿರುವ ಮಗುವಿನ ಮುಗ್ದತೆಯ ಅರಿವಾಗದಿರದು. ಮಗು ಮನಸಿನ, ಮುಗ್ಧ ಹಾಗೂ ಅಪ್ಪಟ ಕಲಾವಿದ, ಪ್ರಸಂಗಕರ್ತರಾದ ಹಿರಿಯ ವ್ಯಕ್ತಿ ಹಾಗೂ ವ್ಯಕ್ತಿತ್ವದ ರಮೇಶ್ ಆಚಾರ್ ಅವರು ನಮ್ಮ ಪ್ರೀತಿಯ ಹೆಮ್ಮೆ.

ನಮ್ಮ ನಿಜ ಜೀವನದಲ್ಲಿ ನಾವು ಸಭ್ಯರು, ಯೋಗ್ಯರಾಗಿ ಬದುಕುವುದಕ್ಕೆ ಯಕ್ಷಗಾನ ಸಹಕಾರಿಯಾಗುತ್ತದೆ. ಪುರಾಣ ಪುರುಷರ ಕಥೆಗಳಿಂದ ಕಷ್ಟ ಸಹಿಸುವ ಶಕ್ತಿ ನಮ್ಮಲ್ಲಿ ಬಂದು ತಾಳ್ಮೆ, ತ್ಯಾಗ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯಕ್ಷಗಾನ ಸಹಕಾರಿ.