Monday, August 8, 2022

ಹಾಡುಗಾರ ಶಾಮ!

Follow Us

ಈ ಹಕ್ಕಿಯ ಹೆಸರೇ ಶಾಮ. ಹಾಡುವುದು ಇದರ ಜಾಯಮಾನ. ಹೀಗಾಗಿ ಇದು ಹಾಡುಗಾರ ಶಾಮ. ಕಾಡಿನ ಈ ಹಾಡು ಹಕ್ಕಿ ಕೀಟಾಹಾರಿ. ಹೆಸರೇ ಹೇಳುವಂತೆ ಕಪ್ಪು ಬಣ್ಣದ ಹಕ್ಕಿ. ಭಾರತ, ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾಗಳಲ್ಲಿ ಇದರ ವಾಸ.

     ಪಕ್ಷಿನೋಟ 21     


♦ ಕಲ್ಗುಂಡಿ ನವೀನ್

ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರ: ಜಿ.ಎಸ್. ಶ್ರೀನಾಥ
newsics.com@gmail.com
ksn.bird@gmail.com


 
ಮ್ಮಲ್ಲಿ ಶಾಮ ಎಂಬ ಹೆಸರಿಗೆ ಆಧ್ಯಾತ್ಮಿಕತೆಯಿಂದ ತೊಡಗಿ ಕುಚೋದ್ಯದ (ನಕಲಿ ಶಾಮ!) ಛಾಯೆಗಳಿರುವ ಅರ್ಥಗಳಿವೆ! ಪಕ್ಷಿ ಲೋಕದಲ್ಲಿ ಇದೇ ಹೆಸರಿನ ಹಾಡುಗಾರ ಇದೆ! ಅದೇ ಶಾಮ! ಆದರೆ, ಮನುಷ್ಯ ನಕಲಿಶಾಮನಿಗಿರುವ ಯಾವ ಅವಗುಣಗಳೂ ಈ ಪಕ್ಷಿಗಿಲ್ಲ!
ಇದು ಕಾಡಿನ ಹಕ್ಕಿ. ಪ್ರಧಾನವಾಗಿ ಕಪ್ಪುಬಣ್ಣದ ಹಕ್ಕಿ (ಗಂಡು, ಹೆಣ್ಣು ಈ ಕಪ್ಪುಬಣ್ಣದ ಬದಲಾಗಿ ಬೂದುಬಣ್ಣವನ್ನು ಹೊಂದಿರುತ್ತದೆ). ಹೊಟ್ಟೆಯ ಮೇಲಿನ ಕೆಂಗಂದು ಬಣ್ಣದಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಹಾಗೆಯೇ, ಬಾಲದ ಮೇಲ್ಭಾಗದ ಬಿಳಿಯ ಬಣ್ಣ. ಇದರ ಬಾಲವೂ ಗುರುತಿಸಲು ಸಹಾಯಕ, ಇದರ ಊರಿನ ನೆಂಟ ಮಡಿವಾಳ ಹಕ್ಕಿಗೆ ಹೋಲಿಸಿದರೆ ಬಹಳ ಉದ್ದವಾದ ಬಾಲ. ಭಾರತದಾದ್ಯಂತ ಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಬಾಂಗ್ಲಾದೇಶ, ಮಯನ್ಮಾರ್ ಮತ್ತು ಶ್ರೀಲಂಕಾಗಳಲ್ಲಿಯೂ ಇದೆ. ಒಟ್ಟು ನಾಲ್ಕು ಬಗೆಯ ಪಂಗಡಗಳಿವೆ. ಅಂಡಮಾನ್’ನಲ್ಲಿ ಕಂಡುಬರುವುದನ್ನು ಬೇರೆ ಪ್ರಭೇದ ಎನ್ನಲಾಗುತ್ತಿದೆ. ಇದು ಹಾಡಿಗೆ ಪ್ರಸಿದ್ಧವಾದ ಪಕ್ಷಿ.
ವನ್ಯಜೀವಿ ಸಪ್ತಾಹ…
ಪ್ರಧಾನವಾಗಿ ಕೀಟಾಹಾರಿ ಹಕ್ಕಿ. ಕೀಟಗಳ ನಿಯಂತ್ರಣದಲ್ಲಿ ಇದರ ಪಾತ್ರವಿದೆ. ಇಷ್ಟೊಂದು ಹಕ್ಕಿಗಳು, ಕಪ್ಪೆಗಳು, ಜೇಡ ಇತ್ಯಾದಿಗಳಿಗೆ ಆಹಾರವಾಗುವ ಕೀಟಗಳ ಸಂಖ್ಯೆ ಎಷ್ಟಿರಬಹುದು?! ಒಂದು ವೇಳೆ ಈ ಹಕ್ಕಿ ಉಭಯವಾಸಿಗಳು, ಜೇಡ (ಇದು ಕೀಟವಲ್ಲ. ಏಕೆಂದರೆ ಇದರ ದೇಹರಚನೆ ಕೀಟಕ್ಕಿಂತ ವಿಭಿನ್ನವಾಗಿದ್ದು ಎರಡು ಭಾಗಗಳಿರುತ್ತವೆ. ಕೀಟಗಳಿಗೆ ಮೂರು ಭಾಗವಿರುತ್ತದೆ. ಹಾಗೆಯೇ ಕಾಲುಗಳು. ಕೀಟಗಳಿಗೆ ಸಾಮಾನ್ಯವಾಗಿ ಮೂರು ಜೊತೆ ಕಾಲುಗಳಿದ್ದರೆ, ಜೇಡಗಳಿಗೆ ನಾಲ್ಕು ಜೊತೆ ಇರುತ್ತದೆ. ಜೇಡಗಳು ಸೇರುವಾ ಅರಿಖ್ನಿಡ ಗಣದಲ್ಲಿ 75,000ಕ್ಕೂ ಹೆಚ್ಚು ಸದಸ್ಯರಿದ್ದು ಚೇಳುಗಳು ಈ ವಿಭಾಗಕ್ಕೆ ಸೇರುತ್ತವೆ) ಇಲ್ಲದಿದ್ದಿದ್ದರೆ ಕೀಟಗಳ ಸಂಖ್ಯೆ ಎಷ್ಟಾಗುತ್ತಿತ್ತು! ಪ್ರಕೃತಿಯ ಸಮತೋಲನವನ್ನು ನೋಡಿ. ಮಾನವ ಇದನ್ನು ಯಾವ ಪ್ರಮಾಣದಲ್ಲಿ ಹಾಳುಗೆಡುಹುತ್ತಿದ್ದಾನೆ ಎಂದು ಯೋಚಿಸಿದಾಗ ಭಯವೇ ಆಗುತ್ತದೆ. ನಾವೆಲ್ಲರೂ ಈ ಕುರಿತಾಗಿ ಯೋಚಿಸಬೇಕಲ್ಲವೆ? ಮುಂದಿನ ವಾರ ಅಂದರೆ ಆಕ್ಟೋಬರ್ 2ರಿಂದ ವನ್ಯಜೀವಿ ಸಪ್ತಾಹ. ಇವುಗಳ ಬಗ್ಗೆ ಯೋಚಿಸಲು ಸಕಾಲ.
ನಿಮ್ಮ ಚಾರಣ ಪ್ರಯಾಣಗಳಲ್ಲಿ ಈ ‘ಹಾಡುಗಾರ ಶಾಮ’ ಕಂಡರೆ ನಮಗೂ ತಿಳಿಸಿ.

ಮತ್ತಷ್ಟು ಸುದ್ದಿಗಳು

vertical

Latest News

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು...

ಏಳು ವರ್ಷದ ಮಗುವಿನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣ ಪತ್ತೆ

newsics.com ತಿರುವನಂತಪುರಂ: ಕೇರಳದಲ್ಲಿ ಏಳು ವರ್ಷದ ಮಗುವಿನಲ್ಲಿ  ಮಂಕಿ ಫಾಕ್ಸ್ ರೋಗದ ಲಕ್ಷಣ ಕಂಡು ಬಂದಿದೆ. ಇದೀಗ ಸ್ಯಾಂಪಲ್ ನ್ನು  ಉನ್ನತ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮಗುವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ  ದಾಖಲಿಸಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ ಬ್ರಿಟನ್ ನಿಂದ...

ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ

newsics.com ಶ್ರೀನಗರ: ಭಯೋತ್ಪಾದಕ ಸಂಘಟನೆಗಳಿಗೆ ಕೆಲವು ವ್ಯಕ್ತಿಗಳು  ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ ನಡೆಸಿದೆ. ಸ್ಥಳೀಯರು ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಶಂಕಿಸಲಾಗಿದೆ. ಈ...
- Advertisement -
error: Content is protected !!