Wednesday, May 25, 2022

ಕೊರೋನಾ ನಿಲ್ಲಲ್ಲ; ಆನ್ಲೈನ್ ಸಂಕಷ್ಟವೂ…

Follow Us

ದೊಡ್ಡ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಚಿಕ್ಕ ಮಕ್ಕಳಿಗೆ ಮನೆ ಶಿಕ್ಷಣ ಎನ್ನುವ ಕಾಲ ಈಗ ಬಂದಿದೆ. ಕೊರೋನಾ ಮಹಾಮಾರಿಗೆ ಲಸಿಕೆ ಬರುವವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚು. ಇನ್ನು, ಆನ್’ಲೈನ್ ಶಿಕ್ಷಣವೂ ಅಂದುಕೊಂಡಷ್ಟು ಸುಲಭವಾಗಿ ನಡೆಯುತ್ತಿಲ್ಲ. ಮೂಲಸೌಕರ್ಯದ ಕೊರತೆ ಇರುವಾಗ ಪರಿಣಾಮ ಸರಳವೇನಲ್ಲ ಎನ್ನುವುದು ಸಾಬೀತಾಗುತ್ತಿದೆ.

newsics.com Feature Desk

 ರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಕಂಪನಿಗಳು ನೀಡತೊಡಗಿದಾಗ ಎಲ್ಲರೂ ಇದೊಂದು ಉತ್ತಮ ವ್ಯವಸ್ಥೆ ಎನ್ನುವಂತೆ ಸ್ವಾಗತಿಸಿದ್ದೆವು. ಅದೇ ರೀತಿಯ ಆನ್ ಲೈನ್ ಶಿಕ್ಷಣ ಈಗ ಮನೆ ಬಾಗಿಲಿಗೆ ಬಂದೇ ಬಿಟ್ಟಿದೆ. ಸಾಕಷ್ಟು ಪಾಲಕರಿಗೆ ಇದು ಉಗುಳುವ ಹಾಗಿಲ್ಲ, ನುಂಗುವ ಹಾಗಿಲ್ಲ ಎನ್ನುವ ಪರಿಸ್ಥಿತಿಯನ್ನು ನಿರ್ಮಿಸಿದ್ದರೆ, ಅನೇಕ ಬಡ ಕುಟುಂಬಗಳ ಪಾಲಿಗೆ ತಲೆನೋವಾಗಿದೆ. ಅಷ್ಟೇ ಅಲ್ಲ, ಬೆಂಗಳೂರಿನಂಥ ನಗರಗಳಲ್ಲೂ ಅಂತರ್ಜಾಲದ ಕನೆಕ್ಟಿವಿಟಿ ಸಮಸ್ಯೆ ಸಾಕಷ್ಟಿರುವುದರಿಂದ ಅಂದುಕೊಂಡಷ್ಟು ಸುಲಭವಾಗಿ ನಡೆಯುತ್ತಿಲ್ಲ.
ಆನ್’ಲೈನ್ ಶಿಕ್ಷಣ ಯಾರಿಗೆ ಬೇಕೋ ಬೇಡವೋ, ಮಕ್ಕಳನ್ನಂತೂ ಖಾಲಿ ಕೂರಿಸಲು ಸಾಧ್ಯವಿಲ್ಲವಲ್ಲ, ಹೀಗಾಗಿಯಾದರೂ ಅನಿವಾರ್ಯ ಎನಿಸುತ್ತಿದೆ. ಆದರೆ, ಮತ್ತೆ ಇಲ್ಲಿ ಉದ್ಭವಿಸುವ ಪ್ರಶ್ನೆ ಚಿಕ್ಕಮಕ್ಕಳಿಗೆ ದೀರ್ಘಕಾಲದ ಆನ್’ಲೈನ್ ಶಿಕ್ಷಣದ ಪರಿಣಾಮವೇನಾಗಬಹುದು ಎನ್ನುವುದು. ಶೈಕ್ಷಣಿಕ ಹಾಗೂ ಮಾನಸಿಕ ತಜ್ಞರು ಚಿಕ್ಕಮಕ್ಕಳಿಗೆ ಆನ್’ಲೈನ್ ಶಿಕ್ಷಣ ಹಾನಿಯುಂಟು ಮಾಡುತ್ತದೆ, ಅವರಿಗೆ ಇದು ಬೇಡ ಎಂದು ಶಿಫಾರಸು ಮಾಡಿದ್ದರು. ಆದರೆ, ಬಳಿಕ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಅವರಿಗೂ ಆನ್’ಲೈನ್ ಶಿಕ್ಷಣ ನೀಡಲಾಗುತ್ತಿದೆ.
ಕೂರಿಸುವುದೇ ಕಷ್ಟ!
“ನನ್ನ ಮಗಳಿಗೆ ದಿನ ಬಿಟ್ಟು ದಿನ ಆನ್’ಲೈನ್ ಕ್ಲಾಸ್ ಇರುತ್ತದೆ. ಅವಳನ್ನು ಸಿಸ್ಟಮ್ ಎದುರು ಕೂರಿಸುವುದೇ ಕಷ್ಟ. ಕುಳಿತರೂ ನಾವೂ ಜತೆಗಿರಲೇಬೇಕು. ಏನಾದರೊಂದು ಮುಟ್ಟುತ್ತ ಆಫ್ ಮಾಡಿಬಿಡುತ್ತಾಳೆ. ಮತ್ತೆ ಕನೆಕ್ಷನ್ ಸಿಗಬೇಕಾದರೆ ಸಮಯವಾಗುತ್ತದೆ. ಆನ್’ಲೈನ್ ಕ್ಲಾಸು ಯಾವತ್ತೂ ಸಂಪೂರ್ಣವಾಗಿ ನಡೆದಿದ್ದಿಲ್ಲ. ಪ್ರತಿ ಬಾರಿ ಏನಾದರೊಂದು ಅಡೆತಡೆ ಬರುತ್ತದೆ’ ಎನ್ನುತ್ತಾರೆ, 2ನೇ ತರಗತಿಯ ಮಗಳನ್ನು ಹೊಂದಿರುವ ಮೇಘನಾ.
“ಚಿಕ್ಕಮಕ್ಕಳಿಗೆ ಆನ್’ಲೈನ್ ಶಿಕ್ಷಣ ಕಷ್ಟ. ಅವರನ್ನು ಟ್ಯಾಬೋ, ಸಿಸ್ಟಮ್ಮೋ, ಮೊಬೈಲ್ ಗಳ ಎದುರು ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ವಿಷಯಗಳನ್ನು ಅರ್ಥೈಸುವುದು ಸಹ ಸುಲಭವಲ್ಲ. ಇದರಿಂದ ಮಕ್ಕಳ ಗ್ರಹಿಕಾ ಶಕ್ತಿಯಲ್ಲೇ ಸಮಸ್ಯೆ ಉಂಟಾಗಬಹುದು,. ಅಲ್ಲದೇ, ಶಿಕ್ಷಕರ ಗುಣಮಟ್ಟ ಚೆನ್ನಾಗಿಲ್ಲ ಅಂತ ಕಂಪ್ಲೇಂಟ್ ಏಳಬಹುದು. ಈಗಾಗಲೇ ಅಂಥವು ಸಂಭವಿಸುತ್ತಿವೆ. ಆದರೆ, ಹೈಸ್ಕೂಲ್ ಮಕ್ಕಳಿಗೆ ಈ ವ್ಯವಸ್ಥೆ ವರ್ಕ್ ಆಗುತ್ತಿದೆ’ ಎನ್ನುತ್ತಾರೆ ಮೈ ಲ್ಯಾಂಗ್ಸ್ ಆನ್’ಲೈನ್ ಪುಸ್ತಕ ಮಳಿಗೆಯ ಸ್ಥಾಪಕ ವಸಂತ ಶೆಟ್ಟಿ.
ಗುಣಮಟ್ಟದ ಕನೆಕ್ಟಿವಿಟಿ ಸಮಸ್ಯೆ
“ದೊಡ್ಡ ಮಟ್ಟದ ಕನೆಕ್ಟಿವಿಟಿ ಸಮಸ್ಯೆ ಬಗೆಹರಿಸದೆ, ಗುಣಮಟ್ಟದ ಅಂತರ್ಜಾಲ ಸೇವೆ ಸಿಗದೆ ಆನ್ ಲೈನ್ ಶಿಕ್ಷಣ ಪರಿಣಾಮಕಾರಿಯಾಗುವುದು ಸಾಧ್ಯವೇ ಇಲ್ಲ. ಅಂತರ್ಜಾಲ ಸೇವೆಗೆ ಸಂಬಂಧಿಸಿ ನಮ್ಮ ದೇಶದಲ್ಲಿ ಬಹಳಷ್ಟು ಸಮಸ್ಯೆ ಇದೆ. ಸರ್ಕಾರವೇ ಮನೆಮನೆಗೂ ಗ್ಯಾಜೆಟ್ ಪೂರೈಕೆ ಮಾಡಲು ಸಾಧ್ಯವೇ? ಇಬ್ಬರು, ಮೂವರು ಮಕ್ಕಳಿದ್ದಾಗ ಎಲ್ಲರಿಗೂ ಮೊಬೈಲ್ ತೆಗೆಸಿಕೊಡಲು ಪಾಲಕರಿಗೆ ಸಾಧ್ಯವಿಲ್ಲ. ಈಗಾಗಲೇ ಇದರ ಪರಿಣಾಮವನ್ನು ಅಲ್ಲಲ್ಲಿ ಕಾಣುತ್ತಿದ್ದೇವೆ’ ಎನ್ನುವುದು ಇನ್ನೋರ್ವ ಪಾಲಕ ಸುಬ್ರಹ್ಮಣ್ಯ ಅವರ ಅಭಿಪ್ರಾಯ.
ಡಿಜಿಟಲ್ ಮೂಲಸೌಕರ್ಯ ಕೊರತೆ ಅಪಾರ
ತಜ್ಞರ ಪ್ರಕಾರ, ನಮ್ಮ ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯದ ಕೊರತೆ ಇದೆ. ಹಳ್ಳಿಗಾಡಿನ ಮಕ್ಕಳು ಅಂತರ್ಜಾಲ ಪಡೆಯಲು ಎಲ್ಲೆಲ್ಲೋ ಅಡ್ಡಾಡುತ್ತಾರೆ. ಗುಡ್ಡ ಬೆಟ್ಟಗಳನ್ನು ತಿರುಗುವ ಪ್ರಸಂಗ ಬಂದಿದೆ. ಸಂಪರ್ಕ ಸಿಗಲೆಂದು ಬಿಸಿಲಿನಲ್ಲಿ, ಬಯಲಿನಲ್ಲಿ ಓಡಾಡುವುದು ಕಂಡುಬಂದಿದೆ. 2017-18ನೇ ಸಾಲಿನ ನ್ಯಾಷನಲ್ ಸ್ಯಾಂಪಲ್ ಸರ್ವೇ ವರದಿ ಪ್ರಕಾರ, ನಮ್ಮ ದೇಶದ ನಗರದ ಪ್ರದೇಶದಲ್ಲಿ ಕೇವಲ ಶೇ.42 ರಷ್ಟು ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ ಶೇ.15ರಷ್ಟು ಮಾತ್ರವೇ ಕುಟುಂಬಗಳು ಅಂತರ್ಜಾಲದ ಸೇವೆಯನ್ನು ಹೊಂದಿವೆ. ಆನ್ ಲೈನ್ ಶಿಕ್ಷಣದ ಸಮಸ್ಯೆ ಆಳವಾಗಲು ಇದೊಂದೇ ಮುನ್ನೋಟ ಸಾಕು.
ಇನ್ನು, ದೇಶದಲ್ಲಿ ವಿವಿಧ ಹಂತದ 35 ಕೋಟಿಗೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಎಷ್ಟು ಜನರ ಬಳಿ ಡಿಜಿಟಲ್ ಸಾಧನಗಳಿವೆಯೋ, ಅಂತರ್ಜಾಲ ಸಂಪರ್ಕ ಇದೆಯೋ ಗೊತ್ತಿಲ್ಲ. ಡಿಜಿಟಲ್ ಮೂಲಸೌಕರ್ಯದ ಕೊರತೆಯು ಮಕ್ಕಳನ್ನು ಒಂದು ರೀತಿಯ ಅಸಹಾಯಕತೆಗೆ ತಳ್ಳಬಹುದು. ಈಗಾಗಲೇ ರಾಜ್ಯದಲ್ಲಿ ಇಂಥ ಘಟನೆಗಳು ನಡೆದಿವೆ. ಇದು ಇನ್ನೂ ಹೆಚ್ಚಾಗಬಹುದು. ಇಂಥ ಘಟನೆಗಳು ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆಯಂತಿವೆ.
ಹೀಗಾಗಿ, ಆನ್ ಲೈನ್ ಶಿಕ್ಷಣವೂ ಅಂದುಕೊಂಡಷ್ಟು ಸರಳವಾಗಿ ನಡೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಇನ್ಯಾವ ಮಗ್ಗುಲಿಗೆ ಹೊರಳುತ್ತದೆಯೋ ಎನ್ನುವುದನ್ನು ಕಾಲವೇ ಉತ್ತರ ನೀಡಲಿದೆ.

ಅಡುಗೆ ಮನೆಗಳಲ್ಲಿ ಉರಿಯಲಿವೆ ವಿದ್ಯುತ್ ಒಲೆಗಳು

ಮತ್ತಷ್ಟು ಸುದ್ದಿಗಳು

Latest News

ರಾಜಸ್ಥಾನ ತಂಡವನ್ನು ಮಣಿಸಿ ಫೈನಲ್ಸ್ ಗೆ ಎಂಟ್ರಿಕೊಟ್ಟ ಗುಜರಾತ್

newsics.com ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2022ರ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ಸ್...

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ. ಇದೀಗ ಆ ಮಗು ಆತನದ್ದೇ ಎಂದು...

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...
- Advertisement -
error: Content is protected !!