Monday, August 8, 2022

ಕೊರೋನಾದಿಂದ ಡಿಜಿಟಲ್ ಉದ್ಯೋಗಕ್ಕೆ ಬೇಡಿಕೆ!

Follow Us

ಕೊರೋನಾ ಎನ್ನುವ ಮೂರಕ್ಷರ ಜಗತ್ತಿನ ಹೊಟ್ಟೆಯ ಮೇಲೆ ತಣ್ಣೀರು ಎರಚಿದೆ. ಉನ್ನತ ಸ್ತರದ ಉದ್ಯೋಗಿಗಳಿಂದ ಹಿಡಿದು ಕೂಲಿ ಕಾರ್ಮಿಕರವರೆಗೆ ಯಾರ್ಯಾರು ಎಲ್ಲೆಲ್ಲಿ ಹೇಗೆಲ್ಲ ಕೆಲಸ ಕಳೆದುಕೊಂಡಿದ್ದಾರೆ ಎನ್ನುವ ಲೆಕ್ಕಾಚಾರ ಪೂರ್ತಿ ಇನ್ನೂ ಸಿಕ್ಕಿರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಕೊರೋನಾ ದುಡಿಯುವ ಕೈಗಳಿಂದ ಕೆಲಸವನ್ನು ಕಿತ್ತುಕೊಂಡಿದೆ. ಆದರೆ, ಅಚ್ಚರಿ ಎಂಬಂತೆ ಡಿಜಿಟಲ್ ಕ್ಷೇತ್ರದ ಕೆಲವು ಉದ್ಯೋಗಗಳಿಗೆ ಈಗ ಬೇಡಿಕೆ ಬಂದಿದೆ.

newsics.com
Feature Desk

 ಗತ್ತು ಇಂಥ ಸ್ಥಿತಿಯನ್ನು ಯಾವ ಸಮಯದಲ್ಲಿಯೂ ಅನುಭವಿಸಿರಲಿಲ್ಲ. ಎಷ್ಟು ಯುದ್ಧಗಳಾದರೂ, ಆಂತರಿಕ ಕಲಹಗಳಾದರೂ, ಧಾರ್ಮಿಕತೆಯ ಆಧಾರದ ಮೇಲೆ ಭೀತಿ ಸೃಷ್ಟಿಯಾದರೂ ಈ ಪ್ರಮಾಣದ ಕೋಲಾಹಲ ಎಂದಿಗೂ ಆಗಿರಲಿಲ್ಲ. ಕೊರೋನಾ ಪರಿಣಾಮ, ಇಂದು ವಿಶ್ವದಲ್ಲಿ ಹಸಿದು ತಿನ್ನುವ ಹೊಟ್ಟೆಗಳಿವೆ, ದುಡಿಯುವ ಕೈಗಳೂ ಇವೆ, ಆದರೆ, ಕೆಲಸವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಕೊರೋನಾ ಎನ್ನುವ ಜಾಗತಿಕ ಮಹಾಮಾರಿ.
ಹೌದು, ಆರೋಗ್ಯದ ಮೇಲೆ ಕೊರೋನಾ ಸೃಷ್ಟಿಸಿರುವ ಪರಿಣಾಮವಷ್ಟೇ ಈಗ ನಮ್ಮ ದೃಷ್ಟಿಗೆ ನಿಲುಕುತ್ತಿದೆ. ವಾಣಿಜ್ಯ, ಆರ್ಥಿಕ ಪರಿಣಾಮಗಳನ್ನು ತಜ್ಞರು ಲೆಕ್ಕಾಚಾರ ಹಾಕಿ ಹೇಳುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಕಲಶವಿಟ್ಟಂತೆ ಮುಂದಿನ ದಿನಗಳಲ್ಲಿ ಕೆಲಸದ ಕೊರತೆ ಅತ್ಯಂತ ಭೀಕರ ಪ್ರಮಾಣದಲ್ಲಿರಲಿದೆ ಎನ್ನುವ ಸುದ್ದಿಯೂ ಇದೆ. ಇದರಿಂದ ಜನ ಸಾಕಷ್ಟು ಭೀತರಾಗಿರುವುದು ಕಂಡುಬರುತ್ತಿದೆ. ಆದರೆ, ಅಷ್ಟೆಲ್ಲ ಭಯಪಡುವ ಅಗತ್ಯವಿಲ್ಲ ಎಂದು ಟೈಮ್ಸ್ ಸಮೀಕ್ಷೆ ಹೇಳುತ್ತಿದೆ.
ಮನೆಯಿಂದಲೇ ಕೆಲಸ…
ಸಂಬಳ ಕಡಿತವಾದರೂ ಪರವಾಗಿಲ್ಲ, ಉದ್ಯೋಗ ಉಳಿದರೆ ಸಾಕು ಎನ್ನುವಂತಾಗಿದೆ ಬಹುತೇಕರ ಪರಿಸ್ಥಿತಿ. ಆದರೆ, ಇದೇ ಸಮಯದಲ್ಲಿ ಒಂದಷ್ಟು ಉದ್ಯೋಗಗಳಿಗೆ ಅತ್ಯಂತ ಹೆಚ್ಚು ಬೇಡಿಕೆ ಬಂದಿದೆ ಎಂದು ಟೌಮ್ಸ್ ಜಾಬ್ಸ್ ನ ಸಮೀಕ್ಷೆಯೊಂದು ಹೇಳುತ್ತಿದೆ.
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕೆಲವು ಡಿಜಿಟಲ್ ಕ್ಷೇತ್ರದ ಕೆಲಸಗಳಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದೆ. ಉದ್ಯೋಗಗಳ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಅರಿಯುವುದಕ್ಕೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.
ರಿಮೋಟ್ ವರ್ಕಿಂಗ್ ಅಂದರೆ, ಕಚೇರಿಯಿಂದ ದೂರವಾಗಿದ್ದುಕೊಂಡು, ಮನೆಯಲ್ಲೇ ಅಥವಾ ಇನ್ಯಾವುದಾದರೂ ಖಾಸಗಿ ಸ್ಥಳದಿಂದ ಕೆಲಸ ಮಾಡುವವರಿಗೆ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ದೇಶದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್ ಆರ್ ವೃತ್ತಿಪರರಿಂದ 1,345 ಪ್ರತಿಕ್ರಿಯೆಗಳು ಬಂದಿದ್ದು, ಕಚೇರಿಯಿಂದ ದೂರವಾಗಿದ್ದುಕೊಂಡು ಕೆಲಸ ಮಾಡುವ ವೃತ್ತಿಪರರ ಬೇಡಿಕೆ ಹೆಚ್ಚಿದೆ ಎಂದು ಶೇ.55 ರಷ್ಟು ಮ್ಯಾನೇಜರ್ ಗಳು ಹೇಳಿದ್ದಾರೆ. ಸಮೀಕ್ಷೆ ಪ್ರಕಾರ, ಮಾರ್ಚ್ ನಿಂದ ಏಪ್ರಿಲ್ ವರೆಗೆ ಇಂತಹ ಉದ್ಯೋಗಿಗಳ ಬೇಡಿಕೆಗೆ ಶೇ.20-30 ವರೆಗೆ ಏರಿಕೆಯಾಗಿರುವುದು ಕಂಡುಬಂದಿದೆ. ಶೇ.24ರಷ್ಟು ಎಚ್ ಆರ್ ವೃತ್ತಿಪರರ ಪ್ರಕಾರ, ಲಾಕ್ ಡೌನ್ ಮುಕ್ತಾಯಗೊಂಡ ನಂತರವೂ ಕಚೇರಿಯಿಂದ ದೂರವಾಗಿದ್ದುಕೊಂಡು ಕೆಲಸ ಮಾಡುವ ಉದ್ಯೋಗಿಗಳ ಬೇಡಿಕೆ ಶೇ.10-20 ರಷ್ಟು ಏರಿಕೆಯಾಗಿದೆ.
ಯಾವೆಲ್ಲ ಕ್ಷೇತ್ರದಲ್ಲಿ ಉದ್ಯೋಗಾವಕಾಶ?
ಟೈಮ್ಸ್ ಜಾಬ್ಸ್ ಅಂದಾಜಿಸಿರುವಂತೆ, ಐಟಿ, ಸಂಶೋಧನೆ ಮತ್ತು ಅಭಿವೃದ್ಧಿ ಮಾರುಕಟ್ಟೆ ವಿಭಾಗಗಳಲ್ಲಿ ಈ ರೀತಿಯ ಉದ್ಯೋಗಗಳು ಹೆಚ್ಚಲಿವೆ. ಇದರೊಂದಿಗೆ, ಕಂಟೆಂಟ್ ರೈಟರ್, ಡಿಜಿಟಲ್ ಮಾರ್ಕೆಟಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಲಾಜಿಸ್ಟಿಕ್ಸ್ ಮ್ಯಾನೇಜರ್, ಸಿಸ್ಟಂ ಆಪರೇಟರ್ ಗಳ ಹುದ್ದೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಉದ್ಯೋಗ ಮಾರುಕಟ್ಟೆ ಅಲ್ಲಾಡುತ್ತಿರುವ ಮಧ್ಯವೇ, ಕೊರೋನಾ ಹೊಸ ಉದ್ಯೋಗಗಳ ಅವಕಾಶ ನೀಡುತ್ತಿರುವುದನ್ನು ಬಳಸಿಕೊಳ್ಳಲು ನಾವೂ ಸ್ವಲ್ಪ ಅಪ್ ಡೇಟ್ ಆಗಬೇಕಾದ ಸಮಯ ಬಂದಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...
- Advertisement -
error: Content is protected !!