Sunday, May 29, 2022

ಮಗಳೆನ್ನುವ ವಿಸ್ಮಯ…

Follow Us

ಇಂದು (ಸೆ.27) ವಿಶ್ವ ಮಗಳ ದಿನ. ಮಗಳ ಚಟುವಟಿಕೆ, ಆಕೆಯ ಬೆಳವಣಿಗೆಯನ್ನು ಕಣ್ತುಂಬ ತುಂಬಿಕೊಳ್ಳುತ್ತ, ಅವಳ ಮೂಲಕ ದಿನವೂ ಬೆಳೆಯುವ ಪಾಲಕರೇ ಧನ್ಯರು.

    ಇಂದು ವಿಶ್ವ ಮಗಳ ದಿನ    

 
♦ ಸಂಕ್ರಾಂತಿ
newsics.com@gmail.com


 ವಳು ಹುಟ್ಟಿದ ಮೇಲೆ ಆತ ಬದಲಾಗಿದ್ದಾನೆ. ಮೊದಲೆಲ್ಲ ಹೆಂಡತಿಯ ಮೇಲೆ ಸಣ್ಣದಕ್ಕೂ ಮುನಿಸಿಕೊಳ್ಳುತ್ತಿದ್ದವನು ಈಗ ಆಕೆಯ ಮುಖ ನೋಡಿದಾಕ್ಷಣ ತಣ್ಣಗಾಗುತ್ತಾನೆ. ತನ್ನ ಬಾಲ್ಯವೇ ಮರಳಿ ಬಂದಂತೆ ಅವಳೊಂದಿಗೆ ಕುಣಿದು ಕುಪ್ಪಳಿಸುತ್ತಾನೆ. ಜೀವನದಲ್ಲಿ ಏನೋ ಬದಲಾವಣೆಯ ಗಾಳಿ ಬೀಸಿದಂತಿದೆ. ಅವಳು ಹಾಗೆಯೇ…ಎಲ್ಲವನ್ನೂ ಬದಲಿಸುವ ಶಕ್ತಿ ಹೊಂದಿದ್ದಾಳೆ. ಏಕೆಂದರೆ, ಅವಳು “ಮಗಳು’. ಅವನನ್ನು ಅಪ್ಪನನ್ನಾಗಿ ಮಾಡಿದ್ದಾಳೆ.
ಆಕೆ… ಚಿಕ್ಕಂದಿನಲ್ಲಿ ತನ್ನ ಹಾಗೂ ಅಣ್ಣತಮ್ಮಂದಿರ ಮಧ್ಯೆ ಅಪ್ಪ-ಅಮ್ಮ ಮಾಡುತ್ತಿದ್ದ ತಾರತಮ್ಯವನ್ನೆಲ್ಲ ಮರೆತಿದ್ದಾಳೆ. ಏಕೆಂದರೆ, ಆಕೆ “ಮಗಳು’. ಇಳಿವಯಸ್ಸಿನ ತಾಯ್ತಂದೆಯರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾಳೆ.
ಏಕಾಂಗಿತನ ದೂರ…
ಇವಳು ವೈದ್ಯೆ. ಎಂಥದ್ದೇ ಗಡಿಬಿಡಿಯ ಸನ್ನಿವೇಶವಿರಲಿ. ಊರಿನಲ್ಲಿರುವ ಅಪ್ಪನ ಜತೆ ದಿನಕ್ಕೊಮ್ಮೆಯಾದರೂ ಮಾತನಾಡಿ “ನಾನಿದ್ದೇನೆ’ ಎನ್ನುವ ಭರವಸೆ ಮೂಡಿಸುತ್ತಾಳೆ. ಸಮಯ ಸಿಕ್ಕಾಗಲೆಲ್ಲ ಊರಿಗೆ ಹೋಗಿ ಅಪ್ಪನ ಜತೆಗಿದ್ದು ಅವರ ಏಕಾಂಗಿತನ ಕಳೆದು ಬರುತ್ತಾಳೆ. ಬ್ಯುಸಿಯ ನೆಪ ಹೇಳಿಕೊಂಡು ವಯಸ್ಸಾದವರಿಂದ ದೂರವೇ ಉಳಿಯುವ ಗಂಡು ಮಕ್ಕಳಿಗೆ ಈಕೆಯದ್ದೊಂದು ಉದಾಹರಣೆ ನೀಡಬೇಕು. ಏಕೆಂದರೆ, ಇವಳು “ಮಗಳು’. ಸಂಬಂಧದ ಅರ್ಥವನ್ನು ಈಕೆಗೆ ಯಾರೂ ಹೇಳಿಕೊಡಬೇಕಿಲ್ಲ.
ಮೈದುಂಬುವ ಭಾವುಕತೆ…
ಹೌದು, ಮಗಳೆಂದಾಕ್ಷಣ ಎಲ್ಲರಿಗೂ ಅದೇನೋ ಭಾವುಕತೆ ಮೈದುಂಬಿಕೊಳ್ಳುತ್ತದೆ. ಪುಟ್ಟ ಹೂವಿನಂತೆ ಅವಳನ್ನು ಎದೆಗೊತ್ತಿಕೊಳ್ಳಬೇಕು ಎನಿಸುತ್ತದೆ. ಪ್ರೀತಿಯ ಬಂಧದಲ್ಲಿ ಬೆಳೆಯುವ ಅವಳು “ಮಗಳೆನ್ನುವ’ ಸ್ಥಾನಕ್ಕೆ ಎಂದೂ ಕುತ್ತು ತರುವ ಕೆಲಸ ಮಾಡುವುದಿಲ್ಲ. ಬದುಕಿನಲ್ಲಿ ತನ್ನದೇ ನಿರ್ಧಾರಗಳನ್ನು ಕೈಗೊಂಡು ದೂರ ಸಾಗಬಹುದಾದರೂ ಅಪ್ಪ-ಅಮ್ಮನ ತೆಕ್ಕೆಯಲ್ಲಿರಲು ಸದಾ ಬಯಸುತ್ತಳೇ ಇರುತ್ತಾಳೆ. ಏಕೆಂದರೆ, ಆಕೆ ಮಗಳು.
ಮಗಳೆನ್ನುವ ಕನಸು…
ಹೆಣ್ಣುಮಗುವನ್ನು ಬಯಸುವ ಎಲ್ಲರಿಗೂ ದೇವರು ಮಗಳನ್ನು ಕರುಣಿಸುವುದಿಲ್ಲ. ಹೀಗಾಗಿ, ಹಲವರಿಗೆ ಮಗಳೆನ್ನುವುದು ಒಂದು ಕನಸು. “ಮಗಳಿರಬೇಕಿತ್ತು’ ಎನ್ನುವ ಆಸೆಯಲ್ಲೇ ಜೀವನ ಕಳೆಯುವ ಅದೆಷ್ಟೋ ಪಾಲಕರು ನಮ್ಮೊಂದಿಗಿದ್ದಾರೆ. ಮಗಳನ್ನು ಹೊಂದಿರುವವರು ಈ ಅರ್ಥದಲ್ಲಿ ಅದೃಷ್ಟವಂತರು.
* * *
ಇಂದು “ಮಗಳ’ ದಿನವಂತೆ. ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರವನ್ನು “ಮಗಳ ದಿನ’ವೆಂದು ಆಚರಿಸಲಾಗುತ್ತದೆ. ಮಗಳನ್ನು ಹೊಂದಿರುವವರಿಗೆ ದಿನವೂ ಮಗಳ ದಿನವೇ. ಏಕೆಂದರೆ, ಪಾಲಕರನ್ನು ಸುಮ್ಮನೆ ಕೂರಲು ಮಗಳು ಬಿಡುವುದಿಲ್ಲ. ಸದಾ ಏನಾದರೊಂದು ಮಾತನಾಡುತ್ತ, ಚಟುವಟಿಕೆಯಿಂದಿರುತ್ತ, ಅವರನ್ನೂ ಚಟುವಟಿಕೆಯಲ್ಲಿರಿಸುತ್ತ ಮನೆಯನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತಾಳೆ. ಈ ದಿನದ ನೆಪದಲ್ಲಿ ಸಂಕೋಚದ ಗೋಡೆ ಕಳಚಿ ಆಕೆಗೊಂದು ವಿಶ್ ಹೇಳಿಬಿಡಿ.

ಮತ್ತಷ್ಟು ಸುದ್ದಿಗಳು

Latest News

ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

newsics.com ಬೆಂಗಳೂರು: ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನಸೇವೆ ಮಾಡುವ...

ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 11 ಗಂಟೆಗೆ ಮಾತನಾಡಲಿದ್ದಾರೆ. 88 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಿಂದಿನ ಪ್ರಧಾನಿಗಳು ದೇಶಕ್ಕಾಗಿ ಮಾಡಿದ ಸೇವೆಯನ್ನು...

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಐರಿಷ್ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ ಸಮಸ್ಯೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ...
- Advertisement -
error: Content is protected !!