Wednesday, November 30, 2022

ಪ್ರಮುಖ ಪಕ್ಷಿತಾಣಗಳ ನಿರ್ದೆಶಿಕೆಗಳು- ಪ್ರಾದೇಶಿಕ ಮಟ್ಟ

Follow Us

ಬಿ ಗುಂಪಿನ ನಿರ್ದೇಶಿಕೆಗಳು ಪ್ರಾದೇಶಿಕವಾಗಿ ಪ್ರಮುಖವಾದ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿದೆ. ಇದು ಎ ವಿಭಾಗದಲ್ಲಿರುವಂತೆಯೇ ಕೇವಲ ವಿಂಗಡಣೆಗಾಗಿ ಮಾಡಿರುವುದೇ ಹೊರತಾಗಿ ಒಂದು ದೊಡ್ಡದು ಮತ್ತೊಂದು ಚಿಕ್ಕದು ಎಂಬುದು ಇಲ್ಲಿ ಮುಖ್ಯವಾಲ್ಲ. ಮುಖ್ಯವಾಗುವುದು ಪಕ್ಷಿಗಳ ಸಂರಕ್ಷಣಾ ಸೂತ್ರ.
.

ಪಕ್ಷಿ ಸಂರಕ್ಷಣೆ 28

♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
newsics.com@gmail.com
ksn.bird@gmail.com
www.facebook.com/ksn.bird

ಪ್ರಮುಖ ಪಕ್ಷಿ ತಾಣಗಳ ನಿರ್ದೇಶಿಕೆಗಳನ್ನು ಕುರಿತಾಗಿ ಯೋಚಿಸುತ್ತಿದ್ದೆವು. ಕಳೆದ ಬಾರಿ ಎ ಗುಂಪಿನ ನಿರ್ದೇಶಿಕೆಗಳನ್ನು ನೋಡಿದೆವು. ಅದು ಜಾಗತಿಕ ಮಟ್ಟದ ಪ್ರಮುಖ ಪಕ್ಷಿ ತಾಣಗಳನ್ನು ಕುರಿತಾಗಿ ಆಗಿತ್ತು. ಈ ಬಾರಿ ಬಿ ಗುಂಪಿನ ನಿರ್ದೇಶಿಕೆಗಳನ್ನು ನೋಡೋಣ. ಇವು ಪ್ರಾದೇಶಿಕವಾಗಿ ಪ್ರಮುಖವಾದ ಸಂರಕ್ಷಣಾ ಅವಶ್ಯಕತೆಗಳತ್ತ ಕೇಂದ್ರೀಕೃತವಾಗಿದೆ. ಇದು ಎ ವಿಭಾಗದಲ್ಲಿರುವಂತೆಯೇ ಕೇವಲ ವಿಂಗಡಣೆಗಾಗಿ ಮಾಡಿರುವುದೇ ಹೊರತಾಗಿ ಒಂದು ದೊಡ್ಡದು ಮತ್ತೊಂದು ಚಿಕ್ಕದು ಎಂಬುದು ಇಲ್ಲಿ ಮುಖ್ಯವಾಲ್ಲ. ಮುಖ್ಯವಾಗುವುದು ಪಕ್ಷಿಗಳ ಸಂರಕ್ಷಣಾ ಸೂತ್ರ.

ಬಿ ವಿಭಾಗದಲ್ಲಿ ಮೂರು ಮುಖ್ಯವಿಭಾಗಗಳಿದ್ದು ವಿಭಾಗಗಳಿದ್ದು ಅವನ್ನು ಸೂಚ್ಯವಾಗಿ ಬಿ1, ಬಿ2, ಮತ್ತು ಬಿ3 ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ ಈ ಎಲ್ಲವೂ ಮತ್ತೆ ವಿಂಗಡನೆಗೆ ಒಳಗಾಗಿ ಬಿ1ಎ, ಬಿ1ಬಿ ಹೀಗೆ ಅಗತ್ಯಾನುಸಾರ ವಿಂಗಡಿಸಲಾಗಿದೆ.

ಬಿ1ಬಿ:
ಈ ಪ್ರದೇಶವು ಸಂರಕ್ಷಣೆ ಅತ್ಯಗತ್ಯವಾಗಿ ಆಗಬೇಕಾದ ಪ್ರಭೇದಗಳಿರುವ ಸ್ಥಳವಾಗಿರುತ್ತದೆ ಆದರೆ, ಸಂರಕ್ಷಣೆಗೆ ಅಗತ್ಯವಾದ ಪರಿಸ್ಥಿತಿ ಇರುವುದಿಲ್ಲ. ಅಂತಹಸ್ಥಳಗಳನ್ನು ಗುರುತಿಸಿ ಸಂರಕ್ಷಣೆಗೆ ಒಳಪಡಿಸಬೇಕಾಗಿರುತ್ತದೆ. ಅಂತಹ ಸ್ಥಳಗಳನ್ನು ಈ ಬಿ1ಬಿ ಎಂದು ವಿಂಗಡಿಸಲಾಗುವುದು.

ಬಿ2:
ಇದು ಸಂರಕ್ಷಣೆಗೆ ಸೂಕ್ತವಾದ ಪರಿಸ್ಥಿತಿಯನ್ನು ಹೊಂದಿರುವ ಪ್ರದೇಶವಾಗಿದ್ದರೂ ಒಂದೇ ಸ್ಥಳದಲ್ಲಿ ಜಾಗತಿಕ ವಲಯವು ಈ ಪ್ರದೇಶಕ್ಕೆ ಸೀಮಿತವಾಗಿರುವಂತಹ ಪ್ರದೇಶವಾಗಿರುತ್ತದೆ. ಇದು ಹಾಗೂ ಬಿ1 ಯೂರೋಪ್‍ ಮತ್ತು ಮಧ್ಯಪ್ರಾಚ್ಯಗಳಲ್ಲಿ ಮಾತ್ರ ಅನ್ವಯವಾಗುವಂತಹ ನಿಯಮ.

ಬಿ3:
ಇದು ಪ್ರಾದೇಶಿಕವಾಗಿ ಮುಖ್ಯವಾದ ಗುಂಪುಗಳಿರುವ ಪ್ರದೇಶಗಳಿಗೆ ಅನ್ವಯವಾಗುತ್ತದೆ.

ಬಿ3ಎ: ಇದು ನಿಯಮಿತವಾಗಿ ಗುಂಪುಗೂಡುವ ನೀರ ಹಕ್ಕಿಗಳ ಇಲ್ಲವೆ ಮರಿಮಾಡುವ ಕಾಲದ ಸಾಗರದ ಅಥವಾ ಇತರೆ ಹಕ್ಕಿಗಳ ಅಥವಾ ಶೇ 1ರಷ್ಟು ಅಥವಾ ಇನ್ನು ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಭೂಪ್ರದೇಶ.

ಬಿ3ಬಿ:
ಪ್ರಾದೇಶಿಕವಾಗಿ ಮುಖ್ಯವಾದ ಗುಂಪುಗಳು – ವಿವಿಧ ಪ್ರಭೇದಗಳ ಒಟ್ಟುಗೂಡುವಿಕೆ. ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ನೀರಹಕ್ಕಿಗಳು ಇಲ್ಲವೇ 6700 ಜೋಡಿಗಳಿಗಿಂತಲೂ ಹೆಚ್ಚು ಒಂದು ಇಲ್ಲವೇ ಹೆಚ್ಚು ಸಾಗರದ ಹಕ್ಕಿಗಳು ಸೇರುವ ಸ್ಥಳವಾಗಿರುತ್ತದೆ.

ಬಿ3ಸಿ:
ಕಿಕ್ಕಿರಿದು ತುಂಬಿರುವಂತಹ ಪ್ರದೇಶಿಕವಾಗಿ ಮುಖ್ಯವಾದ ತಾಣಗಳು. ಈ ತಾಣಗಳು ಭರಿಸಬಹುದಾದಕ್ಕಿಂತಲೂ ಹೆಚ್ಚು ಹಕ್ಕಿಗಳು ಇಲ್ಲಿ ಕಿಕ್ಕಿರುತ್ತವೆ ಎಂದು ತಿಳಿದಿರುವ ಅಥವಾ ಹಾಗೆಂದು ನಂಬಲಾದ ತಾಣಗಳಾಗಿರುತ್ತವೆ. ಅಂತಹ ಮುಖ್ಯ ಸ್ಥಳಗಳು ಈ ಗುಂಪಿಗೆ ಬರುತ್ತವೆ.

ಮುಂದಿನ ಬಾರಿ ಸಿ ವಿಭಾಗವನ್ನು ತಿಳಿಯೋಣ. ಇವು ನೀರಸ ಎನಿಸಬಹುದು. ಆದರೆ, ಸಂರಕ್ಷಣೆಗೆ ಬಹಳ ಮುಖ್ಯ. ಮುಂದಿನ ವಾರ ವಿಂಗಡಣೆಗಳು ಮುಗಿಯುತ್ತವೆ. ಆನಂತರ ಉದಾಹರಣೆಗಳನ್ನು ಚರ್ಚಿಸುವಾಗ ಇವು ಅರ್ಥವಾಗಿ ಇವುಗಳ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಧನ್ಯವಾದಗಳು.

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!