Tuesday, October 4, 2022

ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

Follow Us

ಕೆಜಿಎಫ್ 2 ನಾಯಕಿ ಕೇಳುತ್ತಾಳೆ “ನನ್ನನ್ನು ಇಲ್ಲಿಗೆ ಯಾಕೆ ಕರೆದುಕೊಂಡು ಬಂದೆ?”
ರಾಕಿ ಹೇಳುತ್ತಾನೆ “ಇಟ್ಟುಕೊಳ್ಳಕ್ಕೆ ಚಿನ್ನ, enjoy ಮಾಡಕ್ಕೆ. Company ಗೆ. Entertainment ಗೆ” ಎಂದು.
ಹೆಣ್ಣು ಒಂದು entertainment ಎಂಬುದನ್ನು ನಾಯಕನ ಮಾತಿನಲ್ಲಿ ಕೇಳುವುದು ಕಷ್ಟ.

ಧ್ವನಿಬಿಂಬ 16

♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
newsics.com@gmail.com

“ಅಬ್ಬರಿಸಿ ಬೊಬ್ಬಿರಿದ kgf..
ನೆತ್ತರಲ್ಲಿ ಬರೆದ ಚಿನ್ನದ ಚರಿತ್ರೆ..
ದಾಖಲೆಗಳ ಧೂಳೀಪಟ..
ವಿದೇಶದ ನೆಲದಲ್ಲಿ ಯಶ್ ಆರ್ಭಟ..
Bollywood ಚಿಂದಿ ಚಿಂದಿ….

Kgf chapter 2 ಕುರಿತು ಬರುತ್ತಿರುವ ಶೀರ್ಷಿಕೆಗಳು ಮತ್ತು ಸುದ್ದಿಗಳು..
ಜೊತೆಯಲ್ಲಿ ದಿನ ದಿನ ಯಾವ ಯಾವ ಪ್ರದೇಶದಲ್ಲಿ ಎಷ್ಟು ಹಣ ಗಳಿಸಿತು ಎಂಬ ಪರಿಷ್ಕೃತ ಪಟ್ಟಿಗಳು.. 3 ಗಂಟೆಗೆ ಒಮ್ಮೆ..!
ವ್ಯಾಪಾರ ಮತ್ತು ಜನಪ್ರಿಯತೆ ದೃಷ್ಟಿಯಿಂದ ಇದು ದೊಡ್ಡ ಸಾಧನೆಯೇ ಸರಿ.
ಯಶ್ ಕನ್ನಡಕ್ಕೆ ವಿಶ್ವ ಮಟ್ಟದ canvass ಕೊಟ್ಟಿದ್ದಾರೆ. ಹಿಂದಿ ತಮಿಳು ತೆಲುಗು ಚಿತ್ರರಂಗದ ಹೀರೋಗಳು ಹುಬ್ಬೇರಿಸಿ ನೋಡುವ ಹಾಗೆ ಚಿತ್ರ ಮಾಡಿದ್ದಾರೆ.
ಹೊಂಬಾಳೆ ತಂಡ ನಿಜಕ್ಕೂ ಅಭಿನಂದನಾರ್ಹ.
ಯಶ್ ಹೊಸ ಪೀಳಿಗೆಯ stylish ನಾಯಕ.
ಒಪ್ಪಲೇಬೇಕಾದ ಮಾತು.
ಪ್ರಶಾಂತ್ ನೀಲ್ ಅವರ ನಿರ್ದೇಶನ, ರವಿ ಬಸ್ರೂರ್ ಅವರ ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್ ಕಟ್ಟಿಕೊಟ್ಟಿರುವ ದೃಶ್ಯವೈಭವ ಸಾಮಾನ್ಯವಾದದ್ದಲ್ಲ.
Simply superb. ಎರಡು ಮಾತಿಲ್ಲ.
ತೆರೆಯ ಮೇಲೆ ರಾಕಿ ಭಾಯ್ ಹೆಚ್ಚು ಸಂಭಾಷಣೆ ಇಲ್ಲದೆ “ಡಿಷಕಾಂ.. ಡಿಷಕಾಂ.. ಡಿಶ್ ಡಿಶ್..” ಎಂದು ದುಷ್ಮನ್‌ಗಳನ್ನು ಬಾಯಿ ಬಿಡೋ ಮೊದಲೇ ಬಂದ್ from ಬಂದೂಕ್ .. ಮಾಡಿಬಿಡುವ ರೋಚಕ action ಗಳು ಮನಸಿನಲ್ಲಿ ನಿಲ್ಲುತ್ತವೆ.
Stylish hero, smart ಕನ್ನಡಿಗ “ಯಶ್”
ಓ. ಗಾಥೆ ಗೆ ಅಭಿನಂದನೆಗಳು ಸಲ್ಲಲೇಬೇಕು.
ಇದು ಕನ್ನಡದ ಹೆಮ್ಮೆ ದಾಖಲೆಗಳ ಮಟ್ಟಿಗೆ.
ಆದರೆ ಚಿತ್ರಕಥೆ ಏನು?
ದೃಶ್ಯಾವಳಿಗಳ ತಾಂತ್ರಿಕತೆ ಅಬ್ಬರದಲ್ಲಿ, ಕಥೆ ಏನನ್ನು ಹೇಳುತ್ತಿದೆ?
ಸಂಭಾಷಣೆ ಹೇಗಿದೆ?
ಎಂಬುದನ್ನು ಯಾವ ವಿಮರ್ಶೆಯಲ್ಲೂ ಕಾಣಲಾಗಲಿಲ್ಲ.
ಹಿಂದೆ, ಡಾ. ರಾಜ್ ಅವರನ್ನು ಹೀರೋ ಮಾಡಲೆಂದೇ ಒಂದು ಪಾತ್ರ ಸೃಷ್ಟಿ ಮಾಡಿ ನಂತರ ಅದಕ್ಕೆ ಸರಿಯಾಗಿ ಕಥೆ ಬರೆಸಲಾಗುತ್ತಿತ್ತು. ಕೆಲವು ಚಿತ್ರಗಳು ಇಷ್ಟು fight, ಒಂದು rape, ಎರಡು murder , ಒಂದು chase.. ಹೀಗೆ ಸೂತ್ರ ಹೊತ್ತು ಕಥೆ ಹೆಣೆಸಿಕೊಳ್ಳುತ್ತಿದ್ದವು.
ಇಲ್ಲಿಯೂ ತಾಂತ್ರಿಕತೆ, ವೈಭವ ಎತ್ತಿ ಹಿಡಿಯಲು ಕಥೆ ಗೌಣ ಮಾಡಿದ್ದಾರೆಯೇ?
ಚಿತ್ರಕ್ಕೆ ಕಥೆ ಸಂಭಾಷಣೆಗಿಂತ ತಾಂತ್ರಿಕ ಮಾಯಾ ಜಾಲ ಹೆಚ್ಚು ಆಕರ್ಷಕವೇ?
ಈ ಪ್ರಶ್ನೆಯನ್ನು ಕೂಡ ಕೇಳಿಕೊಳ್ಳುವ ಹಾಗಾಗುತ್ತದೆ.
ನಾಯಕಿ ಕೇಳುತ್ತಾಳೆ “ನನ್ನನ್ನು ಇಲ್ಲಿಗೆ ಯಾಕೆ ಕರೆದುಕೊಂಡು ಬಂದೆ?”
ರಾಕಿ ಹೇಳುತ್ತಾನೆ “ಇಟ್ಟುಕೊಳ್ಳಕ್ಕೆ ಚಿನ್ನ, enjoy ಮಾಡಕ್ಕೆ. Company ಗೆ. Entertainment ಗೆ. ” ಎಂದು.
ಹೆಣ್ಣು ಒಂದು entertainment ಎಂಬುದನ್ನು ನಾಯಕನ ಮಾತಿನಲ್ಲಿ ಕೇಳುವುದು ಕಷ್ಟ.
ಇಷ್ಟಕ್ಕೂ ರೌಡಿಗಳ ಕಥೆಗಳು ಬೇಕಾದಷ್ಟು ಬಂದಿವೆ. ರೌಡಿ ರಂಗಣ್ಣನಿಂದ ಹಿಡಿದು ಕೇಡಿ ನಂ.1
ಆ ದಿನಗಳು, ಜೋಗಿ, ಓಂ, ವೀರಪ್ಪನ್ ವರೆಗೂ ಹೀಗೆ.. ವಿವಿಧ ಚರ್ಚಾವಳಿ ಹುಟ್ಟಿದೆ.
ಮುಕ್ತ ಮಾತುಕತೆ ನಡೆದಿದೆ.
ರೌಡಿ ಒಬ್ಬನ ದೃಷ್ಟಿಕೋನ ಹೇಗೆ ಮುಖ್ಯ , ಅವನು ಹಾಗೆ ಆಗಲು ನಾವು ನೀವು ಹೇಗೆ ಕಾರಣ ಎಂಬುದನ್ನು ಹೇಳುತ್ತಾ ..ಕೊನೆಗೆ ನ್ಯಾಯ ಗೆಲ್ಲುವುದು ಒಂದು ಸಾಮಾನ್ಯ ಹಂದರವಾಗಿತ್ತು.
ಈಗ ಕಥೆಯಲ್ಲಿ change.
ಇದು ಒಬ್ಬನ ಕಥೆಯಲ್ಲ.
ಒಂದು ಅಧಿಪತ್ಯದ ಕಥೆ.
ಅಂದರೆ…
ರಾಜಮಹಾರಾಜ, ಚಕ್ರವರ್ತಿ ಕಥೆ ಗಳ ಹಾಗೆ . ಒಂದು ಚಿನ್ನದ ಊರಿನ ಚಕ್ರಾಧಿಪತ್ಯ ಪಡೆಯಲು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶ ಕೊಡುವ ಚಿತ್ರ. ಮತ್ತು ಅದು ನ್ಯಾಯವೇ ಎಂದು ನಾವೆಲ್ಲ ಹೇಳಬೇಕು.
Gang war ಅಂದರೆ ಅದು ಒಂದು ಧರ್ಮಯುದ್ಧ.
ನನ್ನನ್ನು ಬೆಂಬಲಿಸಲು ಸಾವಿರ ಮಂದಿ ಇದ್ದರೆ ನಾನು ಎಷ್ಟು ಕೊಲೆ ಬೇಕಾದರೂ ಮಾಡಬಹುದು, ನನ್ನ ತಾಯಿಗೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಲು ನಾನು ಏನು ಬೇಕಾದರೂ ಮಾಡುತ್ತೇನೆ.
ಇದೇ ಚಿತ್ರದ ಉದ್ದಕ್ಕೂ ಕಂಡುಬರುವ ಕಥೆ.
ಇಷ್ಟಕ್ಕೂ ಜಗತ್ತಿನ ಬಂಗಾರ ಎಲ್ಲ ನಿನಗೇ ತಂದುಕೊಡುತ್ತೇನೆ, ಎಂಬುದೇ ತಾಯಿಗೆ ಕೊಟ್ಟಿರುವ ವಾಗ್ದಾನವೋ? ಅಥವಾ ಬೇರೆ ಏನಾದರೂ ಮೌಲಿಕ ವಾಗ್ದಾನ ಇದೆಯೋ?
ಚಿಕ್ಕಂದಿನಲ್ಲಿ ಸಮಾಜದಿಂದ ಹೊಡೆಸಿಕೊಂಡ ಹುಡುಗರು ಶಕ್ತಿ ಇದ್ದರೆ ಸಮಾಜಕ್ಕೆ ತಿರುಗಿ ಬೀಳಬಹುದು ಮತ್ತು ಅದೇ ನ್ಯಾಯ.
ಎಂಥದ್ದೇ crime ಅಪರಾಧ ಮಾಡಿದರೂ
ಅದು ಸಾಮಾಜಿಕ ನ್ಯಾಯಕ್ಕಾಗಿ ಎಂದು ಕೊನೆಯಲ್ಲಿ ಸಣ್ಣ ಎಳೆ ಮೂಲಕ ತಿರುಗಿಸುತ್ತಿದ್ದ ಕಥೆಗಳು ಇದ್ದವು.
ಹೀರೋ ಒಳ್ಳೆಯದೇ ಮಾಡಿದ ಎಂಬ ಸಮಾಧಾನ ಮೂಡಿಸುತ್ತಿದ್ದ.
Kgf ನಲ್ಲಿ ಅಂತಹ ಸಮಾಧಾನ ಸಿಗುವುದಿಲ್ಲ.
Kgf ಭಾಗ ಒಂದು ವಿಭಿನ್ನ ಕಥೆ, ಮತ್ತು ಒಬ್ಬ ಶೋಷಿತ ವ್ಯಕ್ತಿ ಶೋಷಣೆಗೆ ಒಳಗಾದವರ ರಕ್ಷಣೆಗೆ ಮುಂದಾಗಿ ಆ ಸಾಮ್ರಾಜ್ಯ ಕೈಗೆ ತೆಗೆದುಕೊಳ್ಳುತ್ತಾನೆ ಎಂಬ ಎಳೆ ಇತ್ತು.
ನಂತರ ಆತ ಏನಾಗುತ್ತಾನೆ, ಅವನ ಸಾಮ್ರಾಜ್ಯ ಹೇಗೆ ಸಾಗುತ್ತದೆ ಮತ್ತು ಅವನ ಹೋರಾಟ, ಅವನ ಬಾಲ್ಯ ಇವೆಲ್ಲಾ ಭಾಗ ಎರಡು ತರುತ್ತದೆ ಎಂಬ ಊಹೆ ಇತ್ತು. ಆದರೆ ಯಾವುದಕ್ಕೂ ಇಲ್ಲಿ ಆಸ್ಪದ ಇಲ್ಲ.
ಕಥೆ ಇಲ್ಲಿ ಏನೂ ಅಲ್ಲ.
ಸಂಭಾಷಣೆ ಬೇಕಾಗಿಲ್ಲ.
ಹೆಚ್ಚು ಮಾತಾಡಿದರೆ.. ಎಲ್ಲೋ ಇಲ್ಲೇ ಪಕ್ಕದಲ್ಲಿ ಗುಂಡು ಹಾರಿದ ಶಬ್ದ ಕೇಳಿಸುತ್ತದೆ.
“ಒಬ್ಬ” ರೌಡಿ ಕಥೆಗಳು ಜನರಿಗೆ ಬೋರ್ ಆಗಿದೆ.
ಅದಕ್ಕೇ ಈಗ ರೌಡಿ ಸಾಮ್ರಾಜ್ಯಗಳ ಇತಿಹಾಸ ತೆರೆದುಕೊಳ್ಳಲಿದೆ. ಕೋಟಿ ಕೋಟಿ ಕಥೆಗಳು..
ಅಂದ ಹಾಗೆ ಈ ವಾರ ಓದಿದ ಕೆಲವು ಸುದ್ದಿ ಗಳು ನೆನಪಾಗುತ್ತಿದೆ..
ಉಪಾಹಾರ ನೀಡದೆ ಇದ್ದ ಕಾರಣ ಸೊಸೆಯನ್ನು shoot ಮಾಡಿದ ಮಾವ,
ತಿಂಡಿಗೆ ಉಪ್ಪು ಜಾಸ್ತಿ ಆಗಿದ್ದಕ್ಕೆ ಪತ್ನಿಯನ್ನು ಕೊಂದ ಪತಿ, ಉಪಾಧ್ಯಾಯರನ್ನು ಕೂಡಿ ಹಾಕಿದ ಮಕ್ಕಳು,
ಇಂತಹ ಸುದ್ದಿಗಳನ್ನು ಓದಿದಾಗ ಆಯಾ ಮನೆಯ ಮತ್ತು ಮನದ ಅಧಿಪತ್ಯಕ್ಕಾಗಿ ಇಂತಹ ಘಟನೆಗಳು ನಡೆದುಬಿಡುತ್ತವೆ ಎನಿಸುತ್ತದೆ. ಒಟ್ಟಿನಲ್ಲಿ ಅಧಿಪತ್ಯಕ್ಕಾಗಿ ಏನಾದರೂ ಮಾಡಬಹುದು.
ತಪ್ಪೇನಿಲ್ಲ. ಬೆಂಬಲ ಗಳಿಸಬೇಕು.
ಜೈಲಿಗೇ ಬೆಂಕಿ ಹಾಕೋ ಸಾಮರ್ಥ್ಯ ಇರಬೇಕು ಅಷ್ಟೇ.
ಜಯಶಾಲಿಗಳಾಗಿ ಎಂದು ತಾಯಿ ಹಾರೈಸುತ್ತಾಳಾ..?
ಆಯಾ ತಾಯಂದಿರಿಗೆ ಬಿಟ್ಟ ಸಂಗತಿ

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಸ್ವಾರ್ಥದ ಬದುಕು ನಮ್ಮದು …

ಮತ್ತಷ್ಟು ಸುದ್ದಿಗಳು

vertical

Latest News

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ...

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...

ಜಮ್ಮು, ರಜೌರಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

newsics.com ಶ್ರೀನಗರ: ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ರಜೌರಿಯಲ್ಲಿ ಇಂಟರ್ ನೆಟ್ ಸೇವೆಯನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಮಿತ್ ಈಗಾಗಲೇ ಜಮ್ಮು...
- Advertisement -
error: Content is protected !!