Tuesday, August 9, 2022

ನಾವು ಏನೋ ಮಾಡಲು ಸಾಧ್ಯ…

Follow Us

ಸಮಯವೇ ಇಲ್ಲ ನಮಗೆ ಎನ್ನುತ್ತಾ ದರ್ಶಿನಿ ಬಳಿ ಕಾಫಿ ಕುಡಿಯುತ್ತಾ , “ಎಲ್ಲ ಹಾಳಾಗೋಯ್ತು, ನಾವೇನು ಮಾಡಲು ಆಗುತ್ತೆ” “ಛೇ ಸರ್ಕಾರ hopeless ಮಾರಾಯ್ರೆ, ಮೋದಿ ಕೆಲಸನೇ ಮಾಡಲ್ಲ “
ಮಾಧ್ಯಮ ಸರಿ ಇಲ್ಲ ಅಂತ ತೀರ್ಪು ಹೇಳ್ತಾ ನಾವೇನು ಮಾಡಲು ಸಾಧ್ಯ ಇಲ್ಲ ಅಂತ ತೀರ್ಮಾನ ತೆಗೆದುಕೊಂಡುಬಿಟ್ಟಿದ್ದೇವೆ.
ಬದುಕು ಸಹನೀಯವಾಗಲು ಸುಂದರವಾಗಲು, ವೈಚಾರಿಕವಾಗಲು ನಾವು “ಏನೋ” ಮಾಡಲು ಸಾಧ್ಯವಿದೆ.

ಧ್ವನಿಬಿಂಬ 17


♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
newsics.com@gmail.com
“ನಾನೇನು ಮಾಡಲು ಸಾಧ್ಯ?”
“ನಾನು ಒಬ್ಬ, ಏನು ತಾನೇ ಆದೀತು ನನ್ನ ಕೈಯ್ಯಲ್ಲಿ?”
“ನಾವು ಸಾಮಾನ್ಯರು.. ಏನು ಮಾಡೋದು, ಏನೂ ಸುಧಾರಿಸಲ್ಲ, ಇಷ್ಟೇ..”
ನಿತ್ಯವೂ ಇಂಥ ಮಾತುಗಳನ್ನು ನಾವು ಆಡುತ್ತಲೇ ಇರುತ್ತೇವೆ. ಹೌದಾ.. ನಮ್ಮಿಂದ ಏನೂ ಮಾಡಲು ಆಗುವುದಿಲ್ಲವಾ?
ಕುಂದಾಪುರದ ಗಂಗೊಳ್ಳಿ ಗ್ರಾಮದ ಕಂಚಿಗೂಡು ನಿವಾಸಿ ಅಶ್ವಥ್ಥಮ್ಮ. ಭಿಕ್ಷೆ ಬೇಡಿ ಜೀವನ ಮಾಡುತ್ತಾರೆ. ಇತ್ತೀಚೆಗೆ ಅವರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಅನ್ನದಾನ ನಡೆಯುತ್ತಿತ್ತು.
ಪ್ರಭಾವಿತರಾದ ಅವರು ತಾವು ಭಿಕ್ಷೆ ಬೇಡಿ ಕೂಡಿ ಇಟ್ಟಿದ್ದ ಒಂದು ಲಕ್ಷ ರೂಪಾಯಿ ಮೊತ್ತದ ಹಣವನ್ನು ದೇವಾಲಯದ ಅನ್ನದಾನಕ್ಕೆ ಕೊಟ್ಟುಬಿಟ್ಟರು. ಬೇಡಿ ಬಂದ ದುಡ್ಡು ಸಂಗ್ರಹ ಮಾಡಿ ಕುಟುಂಬಕ್ಕೆ ಕೊಡಲಾರೆ ಎಂದಿದ್ದಾಳೆ ಈಕೆ.
ಡಿ ವಿ ಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಯಲ್ಲಿ, ಕೃಷ್ಣಪ್ಪ ಎಂಬ ವ್ಯಕ್ತಿಯ ಪ್ರಸ್ತಾಪ ಮಾಡುತ್ತಾರೆ. ಅವರು ಹಳ್ಳಿಯಲ್ಲಿ ಬಡವರಲ್ಲಿ ಬಡವರು. ಕೆಲಸ ಮುಗಿಸಿ ಊರಿನ ಕಟ್ಟೆ ಬಳಿ ಕೂತು, ಊರಲ್ಲಿ ಯಾರಿಗೆ ಏನು ಕಷ್ಟ,
ಯಾರ ಮನೆಯಲ್ಲಿ ಏನು ಸಂಭ್ರಮ , ಯಾರ ಎಮ್ಮೆ ಎಷ್ಟು ಹಾಲು ಕರೆಯಿತು ..ಹೀಗೆ ಎಲ್ಲರ ಬಳಿ ಮಾತಾಡಿ ಮಾತಾಡಿ ಅಲ್ಲೇ ಪರಿಹಾರ ಸಹಾಯ ಸಾಂತ್ವನ ಕೊಡುತ್ತಿದ್ದರು.
ಕೃಷ್ಣಪ್ಪನವರ ಬಳಿ ಮಾತಾಡಿದರೆ ಏನೋ ಸಮಾಧಾನ ಅನ್ನುವ ಭಾವ ಮೂಡಿಸುತ್ತಿದ್ದರು, ಇವರು ಎಲ್ಲರಿಗೂ ಸಮಾಧಾನ ಹಂಚುತ್ತಿದ್ದರು ಎನ್ನುತ್ತಾರೆ
ಡಿ ವಿ ಜಿ.
ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಎಲ್ಲಿ ಯಾವ ವಿಭಾಗ ಇದೆ, ಎಲ್ಲಿ ಏನಿದೆ, ಚೀಟಿ ಎಲ್ಲಿ ಬರೆಸಿಕೊಳ್ಳಬೇಕು, lift ಎಲ್ಲಿದೆ, ಶೌಚಾಲಯ ಎಲ್ಲಿದೆ, ರಕ್ತಪರೀಕ್ಷೆ ಎಲ್ಲಿ, x ray ಎಲ್ಲಿ ..
ಏನೂ ತಿಳಿಯದೆ ಹುಡುಕಾಡುತ್ತೇವೆ. ಫಲಕಗಳು ಅರ್ಥ ಆಗುವುದಿಲ್ಲ, may i help you board ಅಷ್ಟೇ ಕಾಣುತ್ತದೆ, ಎಂದೂ ಅಲ್ಲಿ help ಸಿಗುವುದೇ ಇಲ್ಲ.
ರೋಗಿಗಳು, ಪಾಲಕರು, ಪೋಷಕರು, ಎಲ್ಲೆಲ್ಲಿಂದಲೋ ಬಂದಿರುತ್ತಾರೆ. ಅಂತಹ ಮಂದಿ ಒದ್ದಾಡುವುದನ್ನು ನೋಡಿ ಹೈದರಾಬಾದ್‌ನ ವಿದ್ಯಾರ್ಥಿನಿ ಒಬ್ಬಳು ನಿತ್ಯವೂ ಎರಡು ಗಂಟೆ ಆಸ್ಪತ್ರೆಯಲ್ಲಿ ದಾರಿ ದೀವಿಗೆಯಾಗಿ ಕೆಲಸ ಮಾಡುತ್ತಾಳೆ.
ಬಾಗಿಲ ಬಳಿ ನಿಂತು ಗಾಬರಿಯಲ್ಲಿ ಇರುವ ಮಂದಿಗೆ ಮೆಟ್ಟಿಲು ಎಲ್ಲಿದೆ, ಔಷಧ ಎಲ್ಲಿ ಕೊಡುತ್ತಾರೆ, ಯಾವ doctor ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಹೇಳುತ್ತಾ ಆ ಸಮಯದಲ್ಲಿ ಅವರಿಗೆ ತುರ್ತಾಗಿ ಏನು ಬೇಕೋ ಆ ಸಹಾಯ ನೀಡುತ್ತಾಳೆ. ಮತ್ತೆ ಸರಿಯಾಗಿ ತನ್ನ ಕಾಲೇಜು ಸಮಯಕ್ಕೆ ಆಸ್ಪತ್ರೆಯಿಂದ ಹೊರಟುಬಿಡುತ್ತಾಳೆ.
ಅವರು ಹೇಳುವ thanks ಅಷ್ಟೇ ಇವಳ ಆದಾಯ.
ಆ ಕ್ಷಣದಲ್ಲಿ ಅವಳ ಸೇವೆ ambulance ಸೇವೆಯಷ್ಟೇ ಮಹತ್ವದ್ದು ಎನ್ನುತ್ತಾರೆ ಜನರು.
ಮೊನ್ನೆಯಷ್ಟೇ ನಿವೃತ್ತರಾದ ಸ್ನೇಹಿತರು ಒಬ್ಬರು ಮನೆಯಲ್ಲಿ ಬೇಜಾರು, ಇನ್ನೂ ದುಡಿಯಲು ಆಗುತ್ತೆ ಎಂದು ಕಂಪನಿ ಒಂದಕ್ಕೆ ಸಲಹೆಗಾರರಾಗಿ ಸೇರಿಕೊಂಡು ಮತ್ತೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ.
ಮತ್ತೊಬ್ಬರು ಗೆಳೆಯರು ಒಂದು ಅನಾಥಾಶ್ರಮದಲ್ಲಿ ಮೂರು ಗಂಟೆ ಲೆಕ್ಕ ಪತ್ರ ಕೆಲಸ ಮಾಡಿಕೊಟ್ಟು ಬರುತ್ತಾರೆ ಸಂಬಳ ಬೇಡ ಎಂದಿದ್ದಾರೆ.
ಸಮಯವೇ ಇಲ್ಲ ನಮಗೆ ಎನ್ನುತ್ತಾ ದರ್ಶಿನಿ ಬಳಿ ಕಾಫಿ ಕುಡಿಯುತ್ತಾ , “ಎಲ್ಲ ಹಾಳಾಗೋಯ್ತು, ನಾವೇನು ಮಾಡಲು ಆಗುತ್ತೆ” “ಛೇ ಸರ್ಕಾರ hopeless ಮಾರಾಯ್ರೆ, ಮೋದಿ ಕೆಲಸನೇ ಮಾಡಲ್ಲ ”
ಮಾಧ್ಯಮ ಸರಿ ಇಲ್ಲ ಅಂತ ತೀರ್ಪು ಹೇಳ್ತಾ ನಾವೇನು ಮಾಡಲು ಸಾಧ್ಯ ಇಲ್ಲ ಅಂತ ತೀರ್ಮಾನ ತೆಗೆದುಕೊಂಡುಬಿಟ್ಟಿದ್ದೇವೆ.
ಬದುಕು ಸಹನೀಯವಾಗಲು ಸುಂದರವಾಗಲು, ವೈಚಾರಿಕವಾಗಲು ನಾವು “ಏನೋ” ಮಾಡಲು ಸಾಧ್ಯವಿದೆ.
ರವೀಂದ್ರನಾಥ ಟಾಗೋರ್ ಅವರ ಕವನದ ಸಾಲು ಇದು:
ಸೂರ್ಯ ಹೇಳುತ್ತಾನೆ, “ನಾನು ಇಲ್ಲ ಅಂದರೆ ಜಗತ್ತೆಲ್ಲ ಕತ್ತಲು”. ಹಣತೆ ಹೇಳುತ್ತದೆ ” ನಾನು ನನ್ನ ಸುತ್ತ ಬೆಳಕು ಕೊಡಬಲ್ಲೆ”

ನಾವೇನು ಮಾಡಲು ಸಾಧ್ಯ?

ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಸ್ವಾರ್ಥದ ಬದುಕು ನಮ್ಮದು …

ಮತ್ತಷ್ಟು ಸುದ್ದಿಗಳು

vertical

Latest News

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...

ಖೋ ಖೋ ಆಟಗಾರ ತೀರ್ಥಹಳ್ಳಿಯ ವಿನಯ್ ಇನ್ನಿಲ್ಲ

newsics.com ಶಿವಮೊಗ್ಗ: ತೀರ್ಥಹಳ್ಳಿಯ ಕ್ರೀಡಾ ಸಾಧಕ ಖೋ ಖೋ ಆಟಗಾರ ವಿನಯ್ (33) ಸಾವನ್ನಪ್ಪಿದ್ದಾರೆ. ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ಮಣಿಪಾಲದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರು ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವಿನಯ್...
- Advertisement -
error: Content is protected !!