Thursday, May 26, 2022

‘ಪಾಳಿ’ಗೆ ಬರಲಿ ಪಂಚಾಮೃತ…

Follow Us

ಹೊತ್ತು ಗೊತ್ತು ಇಲ್ಲದೆ ಪಾಳಿ ಕೆಲಸಗಳಲ್ಲಿ ಅಂದರೆ shift dutyಗಳಲ್ಲಿ ದುಡಿಯುವ ಮಂದಿ ಬಗ್ಗೆ ಹೇಳುತ್ತಿದ್ದೇನೆ. ಆನಂದ್ ಎಂಬುವರು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಹೆಡ್ ಕಾನ್‌ಸ್ಟೇಬಲ್ ಘಟಕದ ಚಾಲಕ.
ಏಪ್ರಿಲ್ ತಿಂಗಳ 25ನೇ ತಾರೀಕು ಅವರು
ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿ ಜತೆ ವಾಕಿಂಗ್ ಹೋಗಬೇಕು, ಒಂದು ಸಿನೆಮಾ ನೋಡಬೇಕು, ದಯವಿಟ್ಟು ರಜೆ ಮಂಜೂರು ಮಾಡಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.

ಧ್ವನಿಬಿಂಬ 18

♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
newsics.com@gmail.com

“ಮನೆಗೆ ಯಾರೋ ಬಂದರು, ಹರಟೆ ಹೊಡೆಯುತ್ತ ಕುಳಿತು ಅಕಸ್ಮಾತ್ ಮಲಗುವುದು ತಡವಾಯಿತು, ಎಂದಿಟ್ಟುಕೊಳ್ಳಿ, ಮುಂದಿನ ದಿನ ಪೂರ್ತಿ ಅಯೋಮಯ!
ಒಂದು ದಿನ ಊಟ ಸ್ವಲ್ಪ ತಡ ಆಯಿತೋ
ಹೊಟ್ಟೆ upset ಆಗಿಬಿಡುತ್ತೆ!
ಬೆಳಗ್ಗೆ ಎದ್ದ ಕೂಡಲೇ ಕಾಫಿ ಇಲ್ಲಾಂದ್ರೆ
ತಲೆನೇ ಓಡಲ್ಲ!
ಹೌದಲ್ಲ, ಹೊತ್ತಿಗೆ ಸರಿಯಾಗಿ ಎಲ್ಲ ಆಗಲೇಬೇಕು. ಒಂದು ಹದಿನೈದು ನಿಮಿಷ ತಡವಾದರೆ ಅಬ್ಬಾ ಅದೊಂದು ಘನ ಘೋರ ಯಾತನೆ ಕೆಲವರಿಗೆ.
ಹಾಗೆ ಯಾರೂ ಯಾತನೆ ಅನುಭವಿಸದಿರಲಿ ಎಂದು ಹಗಲೂ ರಾತ್ರಿ ದುಡಿದು ಜಗತ್ತನ್ನು ಕಾಪಾಡುವ ಅಯೋಮಯ ಅಗೋಚರ ಜೀವಿಗಳು ಇದ್ದಾರೆ. ಅವರು ದೇವರುಗಳು, ದೇವತೆಗಳು ಅಲ್ಲ. ಅನ್ಯಗ್ರಹ ಜೀವಿಗಳೂ ಅಲ್ಲ.
ಇಂದಿನ ವೇಗದ ಜಗತ್ತಿನಲ್ಲಿ ನೀವು ಅವರನ್ನು ನೋಡಿರುವುದೇ ಇಲ್ಲ.
ನೀವು ಅವರು ಭೇಟಿ ಆಗುವುದೇ ಕಡಿಮೆ.
ನೀವು ಆರಾಮವಾಗಿ ಸರಿಯಾದ ಸಮಯಕ್ಕೆ ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯಾಗಿ ಹೊದಿಗೆ ಎಳೆದುಕೊಂಡು ಮಲಗುವಾಗ, ಅವರು dutyಗೆ report ಮಾಡಿಕೊಳ್ಳುತ್ತಾರೆ.
ನೀವು ಬೆಳಗ್ಗೆ ಬಿಸಿ ಬಿಸಿ ಕಾಫಿ ಕುಡಿಯುವಾಗ ಅವರು ಒಂದು ಲೋಟ ನೀರೂ ಇಲ್ಲದೆ ಶೌಚಾಲಯಕ್ಕೆ ಹೋಗಲು ಸರಿಯಾದ ಸ್ಥಳ ಇಲ್ಲದೆ ನರಳುತ್ತಿರುತ್ತಾರೆ.
ಇವರಿಗೆ ವೀಕೆಂಡ್ ಇಲ್ಲ.
ಇವರಿಗೆ ಸರಿಯಾದ ಹೊತ್ತು ಎಂದರೆ ಏನು ಎಂದು ಗೊತ್ತೇ ಇಲ್ಲ.
ಇವರೂ ನಮ್ಮ ಜತೆ ಇದ್ದಾರೆ, ಇವರೂ ಮನುಷ್ಯರು ಎಂದು ಯಾರಿಗೂ ಅನ್ನಿಸುವುದೇ ಇಲ್ಲ.!
ಹೌದು.
ಹೊತ್ತು ಗೊತ್ತು ಇಲ್ಲದೆ ಪಾಳಿ ಕೆಲಸಗಳಲ್ಲಿ ಅಂದರೆ shift duty ಗಳಲ್ಲಿ ದುಡಿಯುವ ಮಂದಿ ಬಗ್ಗೆ ಹೇಳುತ್ತಿದ್ದೇನೆ.
ಆನಂದ್ ಎಂಬುವರು ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಹೆಡ್ ಕಾನ್‌ಸ್ಟೇಬಲ್ ಘಟಕ ಚಾಲಕ.
ಏಪ್ರಿಲ್ ತಿಂಗಳ 25 ನೇ ತಾರೀಕು ಅವರು
ರಜೆ ಕೋರಿ ಅರ್ಜಿ ಸಲ್ಲಿಸಿದ್ದರು.
ಪತ್ನಿ ಜತೆ ವಾಕಿಂಗ್ ಹೋಗಬೇಕು, ಒಂದು ಸಿನೆಮಾ ನೋಡಬೇಕು, ದಯವಿಟ್ಟು ರಜೆ ಮಂಜೂರು ಮಾಡಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.
ಈ ಬಗ್ಗೆ ಓದಿ ನಕ್ಕವರು ಎಷ್ಟು ಮಂದಿಯೋ?
ಪೊಲೀಸ್ ವ್ಯವಸ್ಥೆ ಬಗ್ಗೆ ಕೋಪ ಮಾಡಿಕೊಂಡವರು ಎಷ್ಟು ಮಂದಿಯೋ?
ಅನುಕಂಪ ತೋರಿಸಿದವರು ಯಾರೋ?
ಗೊತ್ತಿಲ್ಲ.
ಆದರೆ ಆನಂದ್ ಹಾಗೆ ಅರ್ಜಿ ಬರೆಯಬೇಕಾದರೆ ಎಷ್ಟು ರೋಸಿ ಹೋಗಿರಬೇಕು, ಅವರ ಮನಸ್ಥಿತಿ ಎಷ್ಟು ದಿನದಿಂದ ಹಾಗಿದ್ದಿರಬೇಕು, ಅವರು ಹೆಂಡತಿ ಮಕ್ಕಳ ಜೊತೆ ಇರದೇ , ಉತ್ತಮ ಸಮಯ ಕಳೆಯದೆ ಎಷ್ಟು ಹಪಹಪಿಸಿರಬಹುದು..!!
ಸರಿಯಾಗಿ ಎಂಟೂವರೆಗೆ ಊಟ ಮುಗಿಸಿ,
9 ರಿಂದ 10 ಗಂಟೆವರೆಗೆ ನ್ಯೂಸ್ ವೀಕ್ಷಿಸಿ,
10 15 ಗೆ ಸಣ್ಣ ಚರ್ಚೆ ಫೋನ್, whats app ನೋಡಿ, 10 40 ಕ್ಕೆ ಗೊರಕೆ ಹೊಡೆಯುವ, ಸೂರ್ಯನೇ ಅಲಾರಂ ಎನ್ನುವ fixed time ಮಂದಿ ಗೆ ಆನಂದ್ ಕಷ್ಟ ಅರ್ಥ ಆಗಲು ಸಾಧ್ಯವೇ ಇಲ್ಲ.
April 22. ಬೆಳಗ್ಗೆ 5 25 ರ ಸಮಯ.
ಬಿಹಾರದ ಸಿಸ್ವಾನ್ ಎಂಬ ರೈಲು ನಿಲ್ದಾಣ.
ರೈಲು ಸಂಖ್ಯೆ 11123. 91A.
ಓಡುತ್ತಿದ್ದ ರೈಲು, ನಿಧಾನವಾಗಿ ನಿಲುಗಡೆ ಮಾಡಿತು. ರೈಲ್ವೆ ಗಾರ್ಡ್ ಒಬ್ಬ ಇಳಿಜಾರಿನಲ್ಲಿ ಇಳಿದು ಬಂದು, ಅಲ್ಲೇ ಇದ್ದ ಒಂದು ಚಹಾ ಅಂಗಡಿಯಲ್ಲಿ ಎರಡು ಕಪ್ ಚಹಾ ತೆಗೆದುಕೊಂಡು ಬಂದು ರೈಲಿನ ಚಾಲಕನಿಗೆ ಕೊಟ್ಟ. ಚಾಲಕ ಚಹಾ ಕುಡಿದು ರೈಲು ಓಡಿಸಿದ.
ಒಂದು ಕಪ್ ಚಹಾ ಕುಡಿಯಲು ಎಷ್ಟು ಹೊತ್ತು ಹಿಡಿಯುತ್ತದೆ ?
ರೈಲು ನಿಲ್ಲಿಸಿ, ಚಹಾ ಕುಡಿಯಬೇಕು ಅನ್ನಿಸಿದ್ದರೆ ಅವನಿಗೆ ಏನಾಗಿರಬೇಕು?
ಅಕಸ್ಮಾತ್ ಬೇಕೆನಿಸಿದಾಗ ಚಹಾ ಕುಡಿಯದೆ ಹೋಗಿದ್ದರೆ, ಅವನ ಮನಸ್ಸು ಹೇಗಿರುತ್ತಿತ್ತು ?
ದೇವರಾಣೆ, fixed time ಮಂದಿಗೆ ಈ ನಿಟ್ಟಿನಲ್ಲಿ ಯೋಚಿಸಲೂ ಬರುವುದಿಲ್ಲ.
ಅವನು ಚಹಾ ಕುಡಿಯದೆ ಸುಸ್ತಾಗಿ train ಅಪಘಾತ ಆಗಿದ್ದಿದ್ದರೆ, ಆಗ ಸಹ ಚಾಲಕನದ್ದೇ ತಪ್ಪು ಆಗಿರುತ್ತಿತ್ತು.
ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಯಾಕಾಗಿ ಇದು ನಡೆಯಿತು ತಿಳಿದಿಲ್ಲ.
ಆದರೂ .. ಒಂದು ಕ್ಷಣ ಯೋಚಿಸಬಹುದು.
ಚಾಲಕರು, ನಿರ್ವಾಹಕರು, ಆಸ್ಪತ್ರೆ ಸಿಬ್ಬಂದಿ, ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿ, ತಯಾರಿಕಾ ಘಟಕ ಗಳಲ್ಲಿ ದುಡಿಯುವ ಕಾರ್ಮಿಕ ಸಿಬ್ಬಂದಿ, ರಕ್ಷಣಾ ಪಡೆ, ಹಾಲು ಹಾಕುವ ಡೈರಿ ಸಿಬ್ಬಂದಿ, ಪೇಪರ್ ಹಾಕುವ ಹುಡುಗರು,
ಇವರೆಲ್ಲ ದುಡಿಯುವುದರಿಂದಲೇ ಬೇರೆಯವರು ನೆಮ್ಮದಿ ಇಂದ ಮಲಗಲು ಸಾಧ್ಯ.
ಇವರಿಗೆಲ್ಲ ಒಂದು ನಿಯಮಿತ shift ಇರುತ್ತದೆ.
ಮಾಧ್ಯಮದಲ್ಲಿ ದುಡಿಯುವ ಮಂದಿ , ಸುದ್ದಿ ಬೆನ್ನು ಹತ್ತಿ ಎಲ್ಲೋ ಯಾವಾಗೋ ಅನ್ನುವ ಸ್ಥಿತಿಯಲ್ಲಿ ಇರುತ್ತಾರೆ.
ವಿವಿಐಪಿಗಳ ಸರ್ಕೀಟು ಹಿಡಿದು ಹೋಗಬೇಕು.
ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ಟುಡಿಯೋಗಳಲ್ಲಿ ಕುಳಿತು ಉದ್ಘೋಷಣೆ ಕೊಡುತ್ತ ಬೆಳಗ್ಗೆ 5 ಗಂಟೆ ಇಂದ ಭಕ್ತಿ ಗೀತೆಗಳನ್ನು ಕೇಳಿಸುತ್ತಾರಲ್ಲ, ಅವರು ಬೆಳಗ್ಗೆ 4 30 ಕ್ಕೆ ಸ್ಟುಡಿಯೋ ಬಾಗಿಲಲ್ಲಿ ಇರುತ್ತಾರೆ.
ಹಾಗಾದರೆ ಅವರು ಮಲಗಿದ್ದು ಯಾವಾಗ ಎದ್ದಿದ್ದು ಯಾವಾಗ ?
Fixed ಮಂದಿಗೆ ಅದು ಎಂದೂ ಕಾಣದು.
ಚುನಾವಣೆ ಇರಲಿ, ಕೊರೋನಾ ಇರಲಿ, ಪ್ರಧಾನಿ ಮೋದಿ ಜೀ ತುರ್ತು ಭಾಷಣ ಇರಲಿ,
ಸಾವಿರಲಿ, ನೋವಿರಲಿ, ತಮ್ಮ ನೋವು ನಲಿವು ಒದ್ದು ಒದಗಿ ಬರುವವರು fixed time ಜನ ಅಲ್ಲ.
ಅಪ ಸಮಯದಲ್ಲಿ ಒಂದು ಕ್ಯಾಂಟೀನ್ ಇರುವುದಿಲ್ಲ. ಬೇಕೆಂದಾಗ ಏನೂ ಸಿಗುವುದಿಲ್ಲ.
ಆದರೂ ತಮ್ಮದೇ ಮಿತಿ ಪರಿಮಿತಿ ವ್ಯವಸ್ಥೆ ಗಳಲ್ಲಿ ಇಂತಹ “ಬುದ್ಧರು ” ಕೆಲಸ ಮಾಡುತ್ತಾರೆ.
ಬುದ್ಧರನ್ನು ಆಡಿಕೊಂಡು, ಹಾಸ್ಯ ಮಾಡುತ್ತ ನಗುತ್ತಾರೆ ಪ್ರ-ಬುದ್ಧರು.
ಚಹಾ ಕುಡಿದರೆ ಪ್ರಶ್ನೆ ಮಾಡುತ್ತಾರೆ.
ಪತ್ನಿ ಜೊತೆ ಸಿನೆಮಾ ಹೋಗಬೇಕು ಎಂದರೆ ವ್ಯಂಗ್ಯ ನೋಟ ದಯಪಾಲಿಸುತ್ತಾರೆ.
ಪಾಳಿ ಕೆಲಸ ಮಾಡುವವರಿಗೆ ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಿದೆ.
ಆದರೆ ಬಹುತೇಕ ಸ್ಥಳಗಳಲ್ಲಿ ನಿಯಮ ಮಾಡಿದವರೇ ಅವುಗಳನ್ನು ಮುರಿದು , ಎಲ್ಲ ಸರಿಯಾಗಿದೆ ಎಂದು ಅವರೇ ಕಾಗದ ಪತ್ರಗಳಿಗೆ ಸಹಿ ಹಾಕುತ್ತಾರೆ.
ಎಂಬಲ್ಲಿಗೆ ಈ ಜಾಗರ ಜಗದ ಜೀವ ಕೋಟಿಯ ಕಥೆ ಮುಕ್ತಾಯ ಮಾಡಬೇಕಾಗುತ್ತದೆ.
ಮುಖ್ಯ ಕಚೇರಿಗಳಲ್ಲಿ ಬಹು ದೊಡ್ಡ meeting ಮಾಡಿದಾಗ,
ಆಗಸ್ಟ್ ಹದಿನೈದು ರಾಷ್ಟ್ರ ಧ್ವಜ ಹಾರಿಸಿ ತಿಂಡಿ ತಿನ್ನುವಾಗ, ಯಾರದೋ ಮದುವೆಗೆ ಸಿಬ್ಬಂದಿ ಎಲ್ಲ ಕಚೇರಿ ಸಮಯದಲ್ಲಿ ಹೋಗಿ ಭೋಜನ ಮಾಡಿ ಬಂದಾಗ, ಅದೇ ಕಛೇರಿಯಲ್ಲಿ ಜತೆ ಜತೆಗೇ ಪಾಳಿಗಳಲ್ಲಿ ದುಡಿಯುತ್ತ ಇರುವವರನ್ನು ಒಮ್ಮೆ ನೆನಪಿಸಿಕೊಳ್ಳಲು ಆದರೆ ?
ಭಾನುವಾರದ ರಜೆಯಲ್ಲಿ ಮಕ್ಕಳ ಜೊತೆ outing ಹೋದಾಗ ಪಾಳಿ ಕೆಲಸ ಮಾಡುತ್ತಿರುವವರ ಸ್ನೇಹಿತರನ್ನು ನೆನಪು ಮಾಡಿಕೊಳ್ಳಲು ಆಗುತ್ತದೆಯೇ ?
ಗದರುವ ಮುನ್ನ ಅವಲೋಕಿಸಬಹುದೇ ?
ಆಲೋಚಿಸಿ. ಅವರು ಅನ್ಯಗ್ರಹ ಜೀವಿಗಳು ಪರಿಚಯವೇ ಇಲ್ಲ ಎಂಬಂತೆ ಕಾಣದೆ ಗೌರವಿಸಿದರೆ ಮಾತನಾಡಿಸಿದರೆ,
“ಪ್ರಬುದ್ಧರು ಬುದ್ಧರಾಗುತ್ತಾರೆ.”
ಅಂದ ಹಾಗೆ ಎಲ್ಲರಿಗೂ ಮೇ ಒಂದರ ಶುಭಾಶಯಗಳು.
ಒಳ್ಳೆಯ ದಿನಗಳು ಬರುತ್ತವೆ.
ಸೂರ್ಯ ಚಂದ್ರ ಕೂಡ ಪಾಳಿಗಳಲ್ಲಿ ದುಡಿಯುತ್ತಾರೆ ಅಲ್ಲವೇ?
“ಪಾಳಿ”ಗೆ ಬರಲಿ ಪಂಚಾಮೃತ.

ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಸ್ವಾರ್ಥದ ಬದುಕು ನಮ್ಮದು …

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!