Wednesday, May 31, 2023

ಅಮ್ಮಂದಿರ‌ ದಿನವೂ… ವಿಶ್ವ ಕತ್ತೆಗಳ‌ ದಿನವೂ…

Follow Us

ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ ?

ಧ್ವನಿಬಿಂಬ 19

♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
newsics.com@gmail.com

“ಬನ್ನಿ, meet ಮಾಡಿ ಇವತ್ತಿನ ವಿಶೇಷ ಅತಿಥಿಯನ್ನು. ಇವರು ಎಲ್ಲ ಕಡೆ ಇದ್ದಾರೆ. ಸರ್ವಾಂತರ್ಯಾಮಿ.
ಸಾಧುಂಗೆ ಸಾಧು, ವೈರಿಗೆ ವೈರಿ ಅಂತಾರಲ್ಲ, ಹಾಗೆ. ಇವರು ಮಾಡೋ ಕೆಲಸದಲ್ಲಿ ಶೇ. 25 ಭಾಗದಷ್ಟು ನಾವೂ ಮಾಡಿದ್ರೆ
ಯಶಸ್ಸು ಖಂಡಿತ.
ಯಾರು?
ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನಾ?
ಅಂತ ಕೇಳುತ್ತೀರಿ.
ಇವತ್ತು world donkey day.
ವಿಶ್ವ ಕತ್ತೆಗಳ ದಿನ.
Mr. Donkey Day
ಕಟ್ಟಪ್ಪ ಅಲ್ಲ ಕತ್ತೆಪ್ಪ ದಿನ.
ರಾಯರ ರಾಯ ಕತ್ತೆರಾಯ. ಆದರೂ ಕತ್ತು ಎತ್ತುವ ಹಾಗಿಲ್ಲ ಮಾರಾಯ.
ಥೇಟ್ ಅಮ್ಮನ ಹಾಗೆ,
24 ಗಂಟೆ ದುಡೀತಾನೆ. ಹೇಳಿಕೊಳ್ಳಲ್ಲ.
ಭಾರ ಎತ್ತುವುದು, ಗಾಡಿ ಎಳೆಯುವುದು, ಕೆಲಸ ಏನೇ ಇರಲಿ, ಹಗಲಿರಲಿ, ರಾತ್ರಿಯೇ ಇರಲಿ,
ಕಷ್ಟ ಅಂದರೆ ಒದಗಿ ಬರುತ್ತಾನೆ.
ಥೇಟ್ ಅಮ್ಮನ ಹಾಗೆ.
” ಏನು ಕತ್ತೆ ಥರ ಕಿರುಚತೀಯಾ?”
” ಕತ್ತೆ ಥರ ದುಡೀತೀಯ”
“ಕತ್ತೆ ಥರ ವದೀತ ಪ್ರಾಣಿಗಳು..
ಥೇಟ್ ಅಮ್ಮಂದಿರ ಹಾಗೆ.
ಕತ್ತೇರಾಯರ ಕಥೆಗಳು ಒಂದೇ ಎರಡೇ?
ಮಕ್ಕಳ ಕಥೆಗಳಲ್ಲಿ, ವಿಶ್ವ ಸಾಹಿತ್ಯದಲ್ಲಿ, ಕತ್ತೆ ಕಥೆಗಳಿವೆ. ಬೈದರೂ ಬೈಸಿಕೊಂಡರೂ ಕತ್ತೆ ತುಂಬಾ popular. ಕತ್ತೆ ಹೀರೋನೇ.
ಆದರೆ ಸಿನೆಮಾ ಗೋತಾ.
ಕತ್ತೆ ಮತ್ತು ಧರ್ಮ ಅಂತ ದಲಿತ ಕವಿ ಸಿದ್ಧಲಿಂಗಯ್ಯ ಕವನ ಬರೆದಿದ್ದಾರೆ. ದಡ್ಡ ಮತ್ತು ರಾಜಕುಮಾರಿ ಕಥೆಯಲ್ಲಿ ಕತ್ತೆಠVGM ಲಲಗೆ ಮುಖ್ಯ ಪಾತ್ರ ಇದ್ದರೂ ಗೆಲ್ಲೋದು ದಡ್ಡನೇ.
ಕತ್ತೆ ಯಾವಾಗಲೂ ಉಪಯೋಗಿಸಲ್ಪಡುತ್ತದೆ ಮಾತ್ರ.

ಥೇಟ್ ಅಮ್ಮನ ಹಾಗೆ.
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ಓಡಿ ಹೋಗೋ ಕುದುರೆ ಅಗಬೇಡ, ಹೊತ್ತು ತಿರುಗೋ ಕತ್ತೆ ಆಗು, ಕತ್ತೆಗಳ ಜಾತ್ರೇಲಿ ಕೋಗಿಲೆಗೆ ಏನು ಕೆಲಸ, ಕತ್ತೆತ್ತಿ ಕಿರುಚಿದರೂ ಕತ್ತೆ ಆನೆ ಯಾದೀತೇ..?
ಹೀಗೆಲ್ಲ ರೂಢಿ ಮಾತು ಇವೆ.
ತುಂಬಾ ಬುದ್ಧಿವಂತ. ಹಾಡಲು ಇಷ್ಟ ಅದಕ್ಕೆ.
ತುಂಬಾ ಭಾವುಕ. ಮಕ್ಕಳು ಅಂದರೆ ಕತ್ತೆಗೆ ತುಂಬಾ ಪ್ರಿಯ. ಹೊಸ ಮನುಷ್ಯರ ಜೊತೆ, ಹೊಸ ಸಂಗತಿಗಳ ಜೊತೆ ಬೇಗ ಹೊಂದಿಕೊಳ್ಳುವುದಿಲ್ಲ. ನಿಧಾನವಾಗಿ ಕಲಿಯುತ್ತಾ, ಅರ್ಥ ಮಾಡಿಕೊಳ್ಳುತ್ತ, ಎಲ್ಲರಿಗೂ ಸಂತೋಷ ಕೊಡಬೇಕು ಎಂದುಕೊಳ್ಳುತ್ತದೆ.
ಅಮ್ಮನೂ ಹಾಗೇ ಅಲ್ಲವಾ?
ಆಗಸ ಮತ್ತು ಕತ್ತೆ ಅಂತ ಹೇಳುತ್ತಿದ್ದೆವು.
ಆಗಸ ಈಗ ಕತ್ತೆಯನ್ನು ಮೂಲೆಗುಂಪು ಮಾಡಿದ್ದಾನೆ. Washing machine ಉಪಯೋಗಿಸುತ್ತಾನೆ.
ಆದರೂ ಕತ್ತೆ ಗಳು ನಿರುದ್ಯೋಗಿ ಆಗಿಲ್ಲ.ಉಪಯೋಗಿಸಲ್ಪಡುತ್ತವೆ.
ಕತ್ತೆ ಹಾಲು ಅಮ್ಮನ ಹಾಲು ಒಂದೇ ತರ.
ಪೌಷ್ಟಿಕಾಂಶ ಇದೆ, ವಿಟಮಿನ್ ಗಳು ಇವೆ.
ಬೇಗ ಜೀರ್ಣ ಆಗುತ್ತದೆ. ಹುಟ್ಟಿದ ಮಕ್ಕಳಿಗೆ ಕತ್ತೆ ಹಾಲು ಕುಡಿಸುತ್ತಾರೆ.
ಒಂದು ಲೀಟರ್ ಕತ್ತೆ ಹಾಲು 1000 ರೂ ಗೂ ಹೆಚ್ಚು. ಕತ್ತೆ ಹಾಲಿನದ್ದು ಒಂದು ದೊಡ್ಡ ಉದ್ಯಮ.ಔಷಧಿಗಾಗಿ , ಸೌಂದರ್ಯವರ್ಧಕ ಗಳ ತಯಾರಿಕೆಯಲ್ಲಿ ಇದರ ಹಾಲು ಬಳಸುತ್ತಾರೆ.
ಇಷ್ಟಾದ್ರೂ.. ಏನಾದ್ರೂ ಪ್ರತಿಭಟನೆ,
ಮೌನ ಮೆರವಣಿಗೆ, ಎಲ್ಲಕ್ಕೂ ಇವೇ ಬೇಕು.
ಮಳೆ ಬರದಿದ್ರೆ ಕತ್ತೆ ಮದುವೆ ಮಾಡಿಸುತ್ತಾರೆ.
ಕ್ರಿ. ಪೂ. 4000 ವರ್ಷಗಳಿಂದ ಮನುಷ್ಯನ ಏಳಿಗೆಗಾಗಿ, ಕತ್ತೆ ಸಂತತಿ, ಮಿಶ್ರ ತಳಿಗಳು, ದುಡಿಯುತ್ತಲೇ ಇವೆ.
ಕತ್ತೆಗಳ ಸಹಕಾರ ಇಲ್ಲದೆ ಮನುಷ್ಯ ಇಷ್ಟು ಅಭಿವೃದ್ಧಿ ಸಾಧಿಸಲು ಆಗುತ್ತಿರಲಿಲ್ಲ ಎನ್ನುತ್ತಾರೆ ತಜ್ಞರು.
ಹಿಂದೆ ಯುದ್ಧ ಸಮಯದಲ್ಲಿ ಇವುಗಳನ್ನು ಗೆಲುವಿನ ಸಂಕೇತವಾಗಿ ತೆಗೆದುಕೊಂಡು ಬೀಗುತ್ತಿದ್ದರು.
ಹೆಣ್ಣನ್ನೂ ಹಾಗೇ ಭಾವಿಸಿದ್ದರು ಅಲ್ಲವೇ..?
ಮೊದಲ ಮಹಾಯುದ್ಧ ಸಮಯದಲ್ಲಿ ರಾಜರ ಬಳಿ 2,50,000 ಕತ್ತೆಗಳಿದ್ದವು.
ತನ್ನ ಉಪಯೋಗಕ್ಕಾಗಿ ಮನುಷ್ಯ ಮೊದಲು ಪಳಗಿಸಿದ ಪ್ರಾಣಿ ಕತ್ತೆ ಎನ್ನುತ್ತಾರೆ.
ಹೆಣ್ಣು ಅಮೇಲೊ ಮೊದಲೋ… ಯಾಕೋ ಈ ಬಗ್ಗೆ ಎಲ್ಲೂ ಉಲ್ಲೇಖ ಕಾಣಲಿಲ್ಲ.
ಇವತ್ತು may 8. ಅಮ್ಮ ಮತ್ತು ಕತ್ತೆ ದಿನ.
ಅಮ್ಮನೂ ಓಂದು ರೀತಿ ಕತ್ತೆ ಹಾಗೇ.
ಕತ್ತೆ ಇದ್ದರೇನೇ ಪ್ರಪಂಚದಲ್ಲಿ ಎಷ್ಟೋ ಕೆಲಸಗಳು ನಡೆಯುವುದು.
ಅಮ್ಮ ಇದ್ದರೇನೇ ಸಂಸಾರ ಚೆಂದ.
ಅಲ್ಲವೇ?
Happy donkey day
Happy mothers day.

ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಸ್ವಾರ್ಥದ ಬದುಕು ನಮ್ಮದು …

ಮತ್ತಷ್ಟು ಸುದ್ದಿಗಳು

vertical

Latest News

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ 4 ವಾರಗಳ ತಾತ್ಕಾಲಿಕ ರಿಲೀಫ್

newsics.com ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್...

ಸಾಮಾಜಿಕ ಜಾಲತಾಣಗಳಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್‌ ಆದೇಶ

newsics.com ನವದೆಹಲಿ: ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು...

ಪತಿಯ ಮೃತದೇಹವನ್ನು ಮನೆಯೊಳಗೆ ದಹನ ಮಾಡಿದ ಮಾನಸಿಕ ಅಸ್ವಸ್ಥ ಹೆಂಡತಿ

newsics.com ಕರ್ನೂಲು: ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಹಿಳೆಯೊಬ್ಬರು ತಮ್ಮ ಪತಿಯ ಮೃತದೇಹವನ್ನು ಏಕಾಂಗಿಯಾಗಿ ಮನೆಯಲ್ಲಿಯೇ ದಹನ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಾತಿಕೊಂಡ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಲಿತಮ್ಮ ಎಂಬವರ ಪತಿ...
- Advertisement -
error: Content is protected !!