Tuesday, July 5, 2022

ಆತ್ಮವಿಶ್ವಾಸದ ಕೊರತೆಯೋ, ಅಹಂಕಾರವೋ…

Follow Us

ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.

ಧ್ವನಿಬಿಂಬ 20

♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
newsics.com@gmail.com

“ಇಂಗ್ಲಿಷಿನ ಪ್ರಸಿದ್ಧ ಕಾದಂಬರಿಕಾರ ಕಾಫ್ಕಾ .
ಸಣ್ಣ ಕಥೆಗಳನ್ನು ಬರೆದಿದ್ದಾನೆ. ಅವನ
ಕಥೆಗಳು ಗೂಢವಾಗಿರುತ್ತಿತ್ತು ಸುಲಭವಾಗಿ ಅರ್ಥವಾಗುತ್ತಿರಲಿಲ್ಲ ಎಂಬ ವಿಶ್ಲೇಷಣೆಗಳು ಇವೆ. ಕಾಫ್ಕಾ ನ ಕಥೆಗಳಲ್ಲಿ ಒಂದು ಗೂಢ ಮಾತು ಕಾಣುತ್ತಿತ್ತು. ಪಾತ್ರಗಳು ಯಾವುದೋ ಒಂದು ಕೊಂಡಿಗೆ ಸಿಕ್ಕಿಕೊಂಡು ಒಂದಕ್ಕೊಂದು ಸಂಪರ್ಕಕ್ಕೆ ಬರದೆ ಹುಡುಕಾಟ ನಡೆಸುವುದು ತಡಕಾಡುವುದು ಇವು ಹೆಚ್ಚಾಗಿ ಕಂಡು ಬರುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಕಾಫ್ಕಾನ ಬಾಲ್ಯ ಮತ್ತು ಯೌವನ ಸ್ವಲ್ಪ ಕಷ್ಟಕರವಾಗಿತ್ತು, ಬಹಳಷ್ಟು ತೊಡಕುಗಳನ್ನು ಅವನು ಅನುಭವಿಸುತ್ತಿದ್ದ ಎಂದು ಹೇಳಲಾಗುತ್ತದೆ. ಅಪರಿಮಿತ ಆತ್ಮವಿಶ್ವಾಸ ಮತ್ತು ಶ್ರೇಷ್ಠತೆಯ ಹಂಬಲ ಹೊಂದಿದ್ದ ಕಾಫ್ಕಾ,
ಈತ ಬರೆದದ್ದು ಬಹಳ ಜನಪ್ರಿಯವೂ ಆಯಿತು.
ಆದರೂ ಅವನು ಸಾಯುವಾಗ ತನ್ನ ಬರಹಗಳೆಲ್ಲವನ್ನೂ ಸುಟ್ಟು ಬಿಡಬೇಕು ಎಂದು ಬೇಡಿಕೊಂಡನಂತೆ. ಎಷ್ಟರ ಜನಪ್ರಿಯನಾದರೂ ಅವನಿಗೆ ತನ್ನ ಬರಹಗಳ ಬಗ್ಗೆ ವಿಶ್ವಾಸ ಇರಲಿಲ್ಲ ಎಂದು ಹೇಳುವವರು ಇದ್ದಾರೆ.
ಕನ್ನಡದ ಪ್ರಸಿದ್ಧ ನಾಟಕಕಾರರಾದ ಸಂಸ ಅವರು “ಐತಿಹಾಸಿಕ ನಾಟಕಗಳ ಪಿತಾಮಹ ” ಎಂದೇ ಕರೆಸಿಕೊಂಡವರು.
ಚಿಂತಕರು ಅವರನ್ನು ಕನ್ನಡ ನಾಟಕಗಳ ಷೇಕ್ಸ್ ಪಿಯರ್ ಎಂದು ಹೊಗಳುತ್ತಿದ್ದರು.
ಇಂತಹ ಸಂಸ ಸದಾ ಏನೋ ಕೊರತೆ ಏನೋ ತೊಂದರೆಗಳಿಂದ ನರಳುತ್ತಿದ್ದರು. ಅವರು ಯಾರನ್ನೂ ನಂಬುತ್ತಿರಲಿಲ್ಲ. ಅವರು ಒಂದು ರೀತಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು ಎಂದು ಅವರನ್ನು ಬಲ್ಲವರು ಹೇಳುತ್ತಾರೆ. ಸದಾ ಯಾವುದೋ ಅವ್ಯಕ್ತ ಭಯದಿಂದ ಅವರು ಸಂಕಟಪಡುತ್ತಿದ್ದರು. ಏನೋ ತಪ್ಪು ಮಾಡಿದವರಂತೆ, ಯಾರೋ ಬಂದು ತಮ್ಮನ್ನು ಹಿಡಿದುಕೊಂಡು ಹೋದಂತೆ ಹೀಗೆಲ್ಲಾ, ಅವರಿಗೆ ಅವರೇ ಯೋಚಿಸುತ್ತ ಕಳವಳಕ್ಕೆ ಈಡಾಗುತ್ತಿದ್ದರು.
ಆತ್ಮವಿಶ್ವಾಸ ಇರಲಿಲ್ಲ.
ಕೊನೆಗೂ ತಮ್ಮ 41ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇಂತಹ ಘಟನೆಗಳನ್ನು ಓದಿದಾಗ ಅರ್ಥೈಸಿಕೊಳ್ಳಲು ಪ್ರಯತ್ನಿಸಿದಾಗ ಆಶ್ಚರ್ಯಗಳ ಬಾಗಿಲು ತೆರೆದುಕೊಳ್ಳುತ್ತವೆ.
ಅಪರಿಮಿತ ಆತ್ಮವಿಶ್ವಾಸವೂ ಕಷ್ಟ.
ಹಾಗೇ ಆತ್ಮವಿಶ್ವಾಸ ಇಲ್ಲವೇ ಇಲ್ಲ ಎಂದರೂ ಕಷ್ಟ. ಇಷ್ಟಕ್ಕೂ ಬಹಳಷ್ಟು ಸಂದರ್ಭಗಳಲ್ಲಿ ನಾವು ಆತ್ಮ ವಿಶ್ವಾಸ ಅನ್ನುವ ಪದವನ್ನು ಬಳಸುತ್ತಲೇ ಇರುತ್ತೇವೆ.
ಹಾಗಾದರೆ ಏನಿದು ಆತ್ಮವಿಶ್ವಾಸ ?
ನಾನು ಇಂತಹ ಕೆಲಸ ಮಾಡಬಲ್ಲೆ ಎಂಬ ನಂಬಿಕೆ ನಮಗೆ ಇರಬೇಕು ಮತ್ತು ಆ ಕೆಲಸವನ್ನು ನಾವು ಸರಿಯಾಗಿ ನಿರ್ವಹಣೆ ಮಾಡಬೇಕು. ಅದೇ ಆತ್ಮವಿಶ್ವಾಸ.
ಕೈ, ಕಾಲುಗಳು ಇಲ್ಲದವರು ಕೆಲಸಗಳನ್ನು ಮಾಡುವುದು, ಕಾಲಿನಲ್ಲಿ pencil ಹಿಡಿದು ಚಿತ್ರ ಬರೆಯುವುದು, ಆತ್ಮವಿಶ್ವಾಸ ಮತ್ತು ಕೆಲಸವಂತಿಕೆ ಸೂಚಿಸುತ್ತದೆ.
ಇತ್ತೀಚೆಗೆ ಅಮೆರಿಕಾದ ಡಾನ್ ಪಾರ್ಕರ್ 339 ಕಿ.ಮೀ.ವೇಗದಲ್ಲಿ ಕಾರು ಓಡಿಸಿ ದಾಖಲೆ ಸ್ಥಾಪಿಸಿದರು. ಅವರು car racer.
ಆದರೆ 10 ವರ್ಷಗಳ ಕೆಳಗೆ ಅಪಘಾತದಿಂದ ಕಣ್ಣು ಕಳೆದುಕೊಂಡಿದ್ದಾರೆ.
ಕಣ್ಣು ಹೋಯಿತು ಎಂದು ಅಳದೆ, ವಯಸ್ಸಾಯಿತು ಎಂದು ಸಮಜಾಯಿಶಿ ಕೊಡದೆ, ಗಿನೀಸ್ ದಾಖಲೆ ಪುಸ್ತಕ ಸೇರಿದರು.
ಅತಿಯಾದ ಆತ್ಮವಿಶ್ವಾಸ ಜಂಭ ಅಹಂಕಾರ ಎಂದು ಅನಿಸಿಕೊಳ್ಳುತ್ತದೆ.
ಮಾತನಾಡಿಯೂ ಕೃತಿ ಇಲ್ಲದೆ ಇದ್ದಾಗ ಅದು ಪೊಳ್ಳು ಸುಳ್ಳು ಆಗುತ್ತದೆ.
ಮಹಾಭಾರತದಲ್ಲಿ ಉತ್ತರ ಕುಮಾರ ಮಾತನಾಡಿದ್ದು ನಗೆಪಾಟಲಿಗೆ ಈಡಾಯಿತು.
ಅವನ ಮಾತುಗಳನ್ನು ಯಾರೂ ಆತ್ಮವಿಶ್ವಾಸ ಎಂದು ಕರೆಯುವುದಿಲ್ಲ.
ಅದೇ ಅರ್ಜುನನಿಗೆ ಶಕ್ತಿ ಇದ್ದು ಕೆಲವೊಮ್ಮೆ ಅವನು ಕೆಲಸ ಮಾಡಲಿಲ್ಲ. ಅದನ್ನು ಆತ್ಮವಿಶ್ವಾಸದ ಕೊರತೆ ಎಂದು ಯಾರೂ ಹೇಳುವುದಿಲ್ಲ. ಬದಲಾಗಿ ಅದು ಅಹಂಕಾರ ಎಂದು ಅರ್ಥೈಸಲ್ಪಡುತ್ತದೆ.
ಕೆಲಸವನ್ನು ಮಾಡಬೇಕು, ನಂಬಿಕೆಯಿಂದ ಯಶಸ್ವಿಯಾಗಿ ಪೂರೈಸಬೇಕು. ಇದೇ ಆತ್ಮವಿಶ್ವಾಸ.
ಆತ್ಮವಿಶ್ವಾಸ ಇರುವವರು ಬೆಳೆಸಿಕೊಂಡವರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ.
ಶಕ್ತಿಯ ಮಿತಿ ಮತ್ತು ಅರಿವು ಇದ್ದಾಗ ಆತ್ಮವಿಶ್ವಾಸ ತನ್ನಿಂತಾನೇ ಮುನ್ನಡೆಸುತ್ತದೆ.
ವಿವೇಚನೆ ಮಾಡುವ , ಚಿಂತನೆ ಮಾಡುವ ಪ್ರವೃತ್ತಿ ನಮಗೆ ಆತ್ಮವಿಶ್ವಾಸ ತುಂಬುತ್ತದೆ.
ವಾಸ್ತವದ ಬೆಳಕು ಕಾಣಿಸುತ್ತದೆ.
ಭ್ರಮೆಗಳನ್ನು , ಹುಸಿ ವಿಶ್ವಾಸಗಳನ್ನು ಒಡೆದು ಬಿಸಾಡುತ್ತದೆ.
ಈಗ್ಯಾಕೆ ಈ ಮಾತು?
ಮೇ ತಿಂಗಳು ಶಂಕರ ,ರಾಮಾನುಜ , ಬಸವ ಗುರುನಾನಕ್ ಮುಂತಾದ ಜ್ಞಾನಿಗಳು ಜನಿಸಿದ ತಿಂಗಳು.
ಚಿಂತಕ ಜಿದ್ದು ಕೃಷ್ಣಮೂರ್ತಿ ಕೂಡ ಜನಿಸಿದ್ದು ಮೇ ತಿಂಗಳಲ್ಲಿ .
ಶಂಕರರು ಹುಟ್ಟಿದ ದಿನ ತತ್ತಜ್ಞಾನ ದಿನ ಎಂದು ಆಚರಿಸಲ್ಪಡುತ್ತದೆ..
ನಾವು ಇಂದು ಪ್ರಭಾವಗಳಿಗೆ ಒಳಗಾಗುತ್ತಿದ್ದೇವೆ.
ಸ್ವಂತವಾಗಿ ಯೋಚಿಸುವುದನ್ನು ಚಿಂತನೆ ಮಾಡುವುದನ್ನು ಬಿಟ್ಟುಬಿಡುತ್ತಾ ಇದ್ದೇವೆ.
ಅಸಹಾಯಕತೆಗೆ ಬೀಳುತ್ತಿದ್ದೇವೆ.
ಯಾರೋ ಹೇಳುವುದನ್ನು , ಮಾಧ್ಯಮದಲ್ಲಿ ಬಂದದ್ದನ್ನು , ಸಾಮಾಜಿಕ ಜಾಲತಾಣಗಳಲ್ಲಿ ಕಂಡದ್ದನ್ನು , ಪರಾಮರ್ಶೆಗೆ ಒಳಪಡಿಸದೆಯೇ ನಂಬುತ್ತೇವೆ.
ದಾಸ್ಯ ಎಂದರೆ ಅದು ವಿಚಾರಗಳನ್ನು ಅರ್ಥೈಸದೇ ಆರಾಧಿಸುವುದು ಆಗಬಹುದು ಎನ್ನುತ್ತಾರೆ ಜಿದ್ದು ಕೃಷ್ಣಮೂರ್ತಿ.
ಅಹಂ ಬ್ರಹ್ಮೋ ಸ್ಮಿ! ನೀನೇ ಯೋಚಿಸಿ ಬ್ರಹ್ಮನಾಗು ಜ್ಞಾನತೇಜ ಸಂಪಾದಿಸು ಎಂದು ಹೇಳುತ್ತಾರೆ ಶಂಕರಾಚಾರ್ಯರು.
ಜಗತ್ತಿಗೆ ಒಳ್ಳೆಯದು ಮಾಡುತ್ತೇನೆ ಎಂದು ತಮಗೆ ಹೇಳಿಕೊಟ್ಟ ಉಪದೇಶವನ್ನು ಕಂಬದ ಮೇಲೆ ಹತ್ತಿ ಎಲ್ಲರಿಗೂ ಬೋಧಿಸುತ್ತಾರೆ ರಾಮಾನುಜರು .
ಜ್ಞಾನದ ಹಾದಿಯೇ ಆತ್ಮವಿಶ್ವಾಸದ ಹಾದಿ. ಅಲ್ಲವೇ?

ನೋಡುಗನ ಲೆಕ್ಕಾಚಾರ ತಪ್ಪಿಸಿತಾ ಕೆಜಿಎಫ್ 2

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಸ್ವಾರ್ಥದ ಬದುಕು ನಮ್ಮದು …

ಮತ್ತಷ್ಟು ಸುದ್ದಿಗಳು

vertical

Latest News

ಫ್ಲ್ಯಾಟ್​ ವಾಪಸ್ ಕೊಡಿ ಎಂದಿದ್ದಕ್ಕೆ ಗುರೂಜಿ ಹತ್ಯೆ..?

newsics.com ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಇದೀಗ ಕೊಲೆಗಾರರು ಯಾರು ಎಂಬುದೂ ಸಹ ಬಯಲಾಗಿದೆ. ಗುರೂಜಿಗಳ ಆಪ್ತರೇ ಆಗಿದ್ದ ಮಹಂತೇಶ್​...

ಆಗಸ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ

newsics.com ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆ ಸಂಬಂಧ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 6 ರಂದು  ಮತದಾನ ನಡೆಯಲಿದೆ. ಪ್ರಸಕ್ತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಪೂರ್ಣಗೊಳಿಸುತ್ತಿರುವ ಕಾರಣ ನೂತನ ಉಪ ರಾಷ್ಟ್ರಪತಿ...

ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿನೆರಳು..?

newsics.com ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ ಶೇಖರ್ರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಈ...
- Advertisement -
error: Content is protected !!