Sunday, May 22, 2022

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

Follow Us

ನಡೆ ಮುಂದೆ… Forward it…. like, forward, subscribe ಹಾದಿಯಲ್ಲಿ ಹಿಂದೆ ಮುಂದೆ ಹಾದು, ಒದೆಸಿಕೊಳ್ಳದೆ, ಒತ್ತದೆಯೆ, ಬತ್ತದೆಯೆ, ಒರೆಸಿ ನಡೆ ಮುಂದೆ, ಸರಿಸಿ ನಡೆ ಮುಂದೆ ….. ಎಂದು ಸಾಗುತ್ತಿದೆ ಸಮಸ್ತ ಜೀವನ.

ಧ್ವನಿಬಿಂಬ 4

♦ ಬಿ ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು

“ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆ ಮುಂದೆ..”
Forward it….
ಅಷ್ಟೇ. ಕೆಲಸ ಮುಗಿಯಿತು.
ಒಂದು ಗೀತೆ, ಯಾರೋ ಹಾಡಿ ಕಳಿಸುತ್ತಾರೆ. ಕಳಿಸುವುದಷ್ಟೇ ಅಲ್ಲ, ಅವರು like it subscribe ಎಂದೂ ಕೇಳಿರುತ್ತಾರೆ.
ಕೂಡಲೇ ಅಲ್ಲಿ Iike ಹಾಕಿ ನಡೆ ಮುಂದೆ ನಡೆ ಮುಂದೆ ಎಂದು ಸಾಗುವ ಮಂದೆ ಮಂದಿ ಮಂಡೆಬಿಸಿ ಮಾಡಿಕೊಳ್ಳುವುದಿಲ್ಲ.
ಮುಂದೆ ಅಂದರೆ?
ನಡೆ ಮುಂದೆ… Forward it…. like, forward, subscribe ಹಾದಿಯಲ್ಲಿ ಹಿಂದೆ ಮುಂದೆ ಹಾದು, ಒದೆಸಿಕೊಳ್ಳದೆ, ಒತ್ತದೆಯೆ, ಬತ್ತದೆಯೆ, ಒರೆಸಿ ನಡೆ ಮುಂದೆ, ಸರಿಸಿ ನಡೆ ಮುಂದೆ ….. ಎಂದು ಸಾಗುತ್ತಿದೆ ಸಮಸ್ತ ಜೀವನ.
“ಅದೃಷ್ಟವನ್ನು ಹಂಗಿಸಿ ಮುಂದೆ ನಡೆ
ನಿದ್ದೆ ಬಿಟ್ಟು ಮುಂದೆ…”
ಎಂದರು ಕುವೆಂಪು. ಆದರೆ, ಈಗ
ಮಂದೆ ಬಿಟ್ಟು
ಮುಂದೆ ನಡೆ,
ನಿಂದೆ ಜೊತೆ
ಮುಂದೆ ನಡೆ
ನಿಂದೇ ಮುಂದೆ ನಡೆ…
ನಡೆ ಮುಂದೆ ನಡೆ ಮುಂದೆ…
ಎಂದುಕೊಳ್ಳಬೇಕಾಗಿದೆ. ಮುಂದೆ ನಡೆಯುವುದು ಸುಲಭವಲ್ಲ,
ಒಮ್ಮೆ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಜತೆಯಲ್ಲಿ ಹೇಮಗಿರಿ ಬೆಟ್ಟವನ್ನು ಹತ್ತುತ್ತಿದ್ದರು. ಪ್ರಕೃತಿ ಸೊಬಗನ್ನು ಆನಂದಿಸುತ್ತಾ ಸಾಗುವಾಗ ಹಾಗೇ ತಮಾಷೆಗಾಗಿ ಸ್ವಾಮಿಗಳಿಗೆ ಹೇಳಿದರು. “ಈ ಎಲ್ಲ ಮೆಟ್ಟಿಲುಗಳನ್ನು ಹತ್ತಿ ಗವಿಯ ಶಿವಲಿಂಗ ದರ್ಶನ ಪಡೆದು ಯಾರು ಮೊದಲು ಘಂಟಾನಾದ ಮಾಡುತ್ತಾರೋ ನೋಡೋಣ” ಎಂದು.
ಸ್ವಾಮಿಗಳು ನಕ್ಕರು. ಪಂದ್ಯ ಚೆನ್ನಾಗಿದೆ, ಎಂದು ಹೇಳಿದರು, ಮುಂದೆ ಮುಂದೆ ಸಾಗಿದರು.
ಶಾಸ್ತ್ರಿಗಳು ಸ್ವಲ್ಪ ಮಟ್ಟಿಲು ಹತ್ತಿ ಸುಸ್ತಾಗಿ ಬಂಡೆ ಬಳಿ ವಿಶ್ರಮಿಸುತ್ತಿದ್ದರು.
ಸ್ವಾಮಿಗಳು ಘಂಟಾನಾದ ಮಾಡಿ ಶಾಸ್ತ್ರಿಗಳ ಬಳಿ ಬಂದು ನೀರು ಕೊಟ್ಟು “ಸುಸ್ತಾಯಿತೇ” ಎಂದು ಕೇಳಿದರು. ಆಗ ಶಾಸ್ತ್ರಿಗಳು “ನಾನು ಸೋತೆ” ಎಂದರು.
ಮುಕುಂದೂರು ಸ್ವಾಮಿಗಳು “ನೀನು ಗೆದ್ದೆ, ಸುಸ್ತಾಗೋ ಗಂಟ, ಯಾರು ಕೆಲಸ ಮಾಡುತ್ತಾರೋ ಅವರೇ ಗೆದ್ದವರು. ನಾನು ಬರೇ ಮುಂದೆ ಹೋದೆ. ಅಷ್ಟೇ, ಸೋತವನು ನಾನು” ಅಂದರು. ಎಂಥಾ ಚಿಂತನೆ!
ಒಟ್ಟಾಗಿ ಸೇರಿ ಮುಂದೆ ಸಾಗೋಣ ಎಂಬ ಮಾತಿದೆ.

forward ಅಂದರೆ ಈಗ ಮುಂದೆ ನಡೆಯುವುದಲ್ಲ, ಆಲೋಚನೆ ಮಾಡುವುದು ಅಲ್ಲ, ಚಿಂತನೆ ಅಲ್ಲ, ವಿವೇಚನೆ ಅಲ್ಲವೇ ಅಲ್ಲ, Forward ಮಾಡುವುದು ಅಷ್ಟೇ.
ಹಂಚಿಕೊಳ್ಳುವುದು ಒಂದು ಆನಂದ.
ಒಂದು ಹಾಡು ಇಷ್ಟ ಆದಾಗ ಸವಿದು ಸಪ್ಪಳಿಸುವುದು ಸೊಗಸಾದ ಸಮಾಜ ಸಂತಸ. ತುಂಬಿ ಬರುವ ಸಂತಸದಲ್ಲಿ ಭಾವನಾತ್ಮಕ ಅನುಭೂತಿ ಆಗಬೇಕಾಗಿರುವುದು ಇಂದು forward ಕ್ರಿಯೆ ಆಗಿದೆ.
ತೆರೆಯದೆಯೇ ಅಳಿಸಿ ಹೋಗುವ ಸಂದೇಶಗಳು ಅವೆಷ್ಟೋ..
forward ಆಜ್ಞೆಗೆ ಬೆದರಿ ಓಡುವ ವೇಗ ಸಂದೇಶಗಳು ಮೇಘ ಸಂದೇಶಗಳಾದರೆ ಎಂಥ ಚೆಂದ.
ಸಂವಹನ ಒಂದು ಸಾಮಾಜಿಕ ಸಂತಸ, ಒಟ್ಟಾಗಿಸುವ ಸುಂದರ, ಮಧುರ ಕ್ರಿಯೆ. ಒಂದು ಅತಂತ್ರ ಭಾವ, ಸ್ವತಂತ್ರವಾಗಲು ಹವಣಿಸುವಾಗ ಬೇಡುವ ಆಶ್ರಯ. ಮನಸ್ಸು ತೆರೆದುಕೊಳ್ಳುವ ಮಾಯೆ.
Forward ಮುಕ್ತ “ನಡೆ ಮುಂದೆ ”
ಸಾಧ್ಯ ಇದೆಯೇ? space ಇದೆಯೇ?
ಅಂದಹಾಗೆ ಮನಸ್ಸು ಏನನ್ನಾದರೂ Save ಮಾಡುತ್ತದೆಯೇ?
ಗೊತ್ತಿಲ್ಲ.
ನಡೆ ಮುಂದೆ …. ನಡೆ ಮುಂದೆ…

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!