Monday, October 2, 2023

ಸ್ವಾರ್ಥದ ಬದುಕು ನಮ್ಮದು …

Follow Us

ನಾವು ಬುದ್ಧಿವಂತರು,
ನಾವು ಕೊಬ್ಬು ಇಲ್ಲದ ಎಣ್ಣೆ ಸೇವಿಸುತ್ತೇವೆ.
ಸಿಹಿ ಇಲ್ಲದ ಸಕ್ಕರೆ ತಿನ್ನುತ್ತೇವೆ.
ಕೆನೆ ಇಲ್ಲದ ಹಾಲು ಕುಡಿಯುತ್ತೇವೆ. ಜಿಡ್ಡು ಇಲ್ಲದ ತುಪ್ಪ ಆಸ್ವಾದಿಸುತ್ತೇವೆ.
ಈಗ ಬಂದಿದೆ. ಖಾರ ಇಲ್ಲದ ಮೆಣಸಿನಕಾಯಿ, ಕಣ್ಣೀರು ತರಿಸದ ಈರುಳ್ಳಿ … ನಾವು ಇವೆಲ್ಲವನ್ನೂ ಪ್ರತಿ ದಿನ ಸವಿದು ಸವಿದು ತಿನ್ನುತ್ತೇವೆ.
ಅದಕ್ಕೆ ….
ನಾನು ಮನುಷ್ಯತ್ವ ಇಲ್ಲದ ಮಾನವನಾಗಿದ್ದೇನೆ.
ನಾನು ಮನುಷ್ಯತ್ವ ಇಲ್ಲದ ಮಾನವ
ಆಗಿದ್ದೇನೆ. ನನ್ನತನ ಇಲ್ಲದ ನಾನಾಗಿದ್ದೇನೆ..

ಧ್ವನಿಬಿಂಬ 5


♦ ಬಿ. ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ ಬೆಂಗಳೂರು
“ಹೀಗೆ ಒಬ್ಬ ವ್ಯಕ್ತಿ ವೇದಿಕೆಯಲ್ಲಿ ಮಾತಾಡುತ್ತಿದ್ದಾನೆ.
“ಸಿನಿಮಾಗೆ ಹೋಗುತ್ತಿದ್ದೇನೆ. ಇನ್ನೇನು ಐದೇ ನಿಮಿಷ ಉಳಿದಿದೆ ! ತಲುಪುತ್ತೇನೆ, ಈಗ ನನ್ನ ನೆಚ್ಚಿನ ಸಿನಿಮಾ ನೋಡುತ್ತೇನೆ, ಕಾತರ ಹೆಚ್ಚು ಹೆಚ್ಚಾಗುತ್ತಿದೆ.
ಆದರೆ…
ದುರದೃಷ್ಟವಶಾತ್ ಟ್ರಾಫಿಕ್ Jam ಆಗಿಬಿಟ್ಟಿದೆ..
ಎರಡೂ ಕಡೆ ವಾಹನ ಸಂಚಾರಕ್ಕೆ ಸಂಪೂರ್ಣ ತಡೆ ಒಡ್ಡಲಾಗಿದೆ…
ಛೆ ಛೆ….
ಯಾರೋ ರಾಜಕಾರಣಿ ಒಬ್ಬರ ವಾಹನ ಬರುತ್ತಿದೆ, ಅವರು VIP…
ಬಹಳ ಬೇಸರವಾಯಿತು. ಸಿನಿಮಾ ಸಮಯ ಸಮೀಪಿಸುತ್ತಿದೆ, ತಲುಪಲು ಆಗುತ್ತಿಲ್ಲ ಎಂದು.
ಇದೇ ಸಮಯದಲ್ಲಿ ತುಂಬಾ ಸಂತೋಷವಾದ ಸಂಗತಿ ಒಂದು ಜರುಗಿತು. ಆಹಾ!…
ಒಂದು ಆಂಬುಲೆನ್ಸ್ ಬಂದಿತು. ಒಳಗಿದ್ದ ವ್ಯಕ್ತಿ ಈಗಲೋ ಆಗಲೋ ಎನ್ನುವಂತಿದ್ದ. ಕೂಡಲೇ ದಾರಿ ನಿರ್ಬಂಧ ತೆರೆಯಲ್ಪಟ್ಟಿತು. ನಾನು ದೇವರನ್ನು ನಂಬುವುದಿಲ್ಲ .. ಆದರೆ ಇಂದು ನಾನು ಸಿನಿಮಾ ನೋಡಲಿಕ್ಕಾಗಿಯೇ ದೇವರು ಆಂಬುಲೆನ್ಸ್ ಕಳುಹಿಸಿದ ಮತ್ತು ರಸ್ತೆ ಬಿಡುವಾಯಿತು ಎಂದು ತುಂಬಾ ಸಂತೋಷವಾಯಿತು…”

ಇದು comedy ಅಂತೆ..
ಆತ ಹೇಳುತ್ತಿದ್ದಾನೆ…
ಜನ ಜೋರಾಗಿ ಕೈತಟ್ಟಿ ನಗುತ್ತಿದ್ದಾರೆ. ವೇದಿಕೆಯಲ್ಲಿದ್ದ ಮಾತುಗಾರ ಆಂಬುಲೆನ್ಸ್‌ನಲ್ಲಿ ಇದ್ದ ವ್ಯಕ್ತಿ ಹೇಗೆ ಉಸಿರೆಳೆಯುತ್ತಿದ್ದ, ಗೋರ್ ಗೊರ್ ಎಂದು ಶಬ್ದವನ್ನು ಅನುಕರಣೆ ಮಾಡಿ ತೋಡರಿಸುತ್ತಿದ್ದಾನೆ, ಜನ ಇನ್ನೂ ಜೋರಾಗಿ ನಗುತ್ತಾ ಇದ್ದಾರೆ.
ಇದು standup Comedy ಅಂತೆ,.
ವ್ಯಕ್ತಿಯೊಬ್ಬ ambulenceನಲ್ಲಿ ಒದ್ದಾಡುತ್ತಾ ಸಾವು ಬದುಕಿನ ಅಂಚಿನಲ್ಲಿ ಇರುವಾಗ, ಸಿನಿಮಾ ನೋಡಲು ರಸ್ತೆ ಬಿಡುವಾಯಿತು, ಸಂತೋಷವಾಯಿತು, ಎನ್ನಲು ಮನಸ್ಸಾದರೂ ಹೇಗೆ ಬರುತ್ತದೆ?
ಅದನ್ನು ಕೇಳುವ ಮಂದಿ ನಗುತ್ತಾರೆ. ಬಿದ್ದು ಬಿದ್ದು ನಗುತ್ತಾರೆ. ಹೇಗೆ ಸಾಧ್ಯ?
ಗೊತ್ತಿಲ್ಲ.

***

ವೇದಿಕೆಯಲ್ಲಿ ಒಂದು ನಾಟಕ ಪ್ರದರ್ಶನ. ಹೆಸರಾಂತ ಕಲಾವಿದರು.
ವೇದಿಕೆಯಲ್ಲಿ ಬೆಂಗಳೂರನ್ನು ನೇರಾನೇರ, ಹಿಗ್ಗಾ ಮುಗ್ಗಾ, ಜಗ್ಗಿ ಜಗ್ಗಿ, ಹಿಗ್ಗಿಸಿ ಹಿಗ್ಗಿಸಿ, ತೆಗಳುತ್ತಾರೆ. ಬೆಂಗಳೂರು ದರಿದ್ರ ನಗರ, ಭಯಾನಕ ಕೊಂಪೆ ಎನ್ನುತ್ತವೆ ಪಾತ್ರಗಳು, ನೋಡುತ್ತಾ ಕುಳಿತಿದ್ದಾರೆ ಸುಶಿಕ್ಷಿತ ಬೆಂಗಳೂರು ಕನ್ನಡ ಜನ!
ಬೆಂಗಳೂರಲ್ಲೇ ಹುಟ್ಟಿ ಬೆಳೆದವರು!
ಚಪ್ಪಾಳೆ ತಟ್ಟಿ ಆಹಾ! ಆಹಾ!
ಎನ್ನುತ್ತಿದ್ದಾರೆ.
ಇದು ಹೇಗೆ ಸಾಧ್ಯ ಆಗುತ್ತದೆ. ?

***
ಪತ್ರಿಕೆಗಳು, ಮೊದಲ ಪುಟದಲ್ಲಿ 2, 3 ನೇ
ಪುಟಗಳಲ್ಲಿ “ನಾವೇ ಮೊದಲು” “ಈ ಸುದ್ದಿ ನಮ್ಮಲ್ಲಿ ಮಾತ್ರ” ಎಂದು seal ಹಾಕಿ ಕೆಂಪಕ್ಷರದಲ್ಲಿ, ಪ್ರಕಟ ಮಾಡಿರುತ್ತವೆ.
No1, ಆಗಲು ಏನು ಮಾಡಬೇಕು? ಎಂದು ಹೇಳುತ್ತಲೇ…
ದಿನದ ಸಂಚಿಕೆ (magazine) ಅಥವಾ city ಪುಟ ಗಳಿಗೆ ಹೋಗುತ್ತಿದ್ದ ಹಾಗೇ..
ಒತ್ತಡ ಯಾಕೆ? ನೀವೇ No1 ಆಗುವ ಆಸೆ ಏಕೆ? ಸಮಾಜದಲ್ಲಿ ಓಟ ಹೆಚ್ಚಾಗುತ್ತಿದೆ, ಓಡಬೇಡಿ, ಶಾಂತಿಯಿಂದ ಇರಿ, ಸ್ಪರ್ಧೆ ಯಾಕೆ? ಎಂದು ಹಿತವಚನ ನೀಡುತ್ತವೆ.
ಓದುಗ ಸುಮ್ಮನಿರುತ್ತಾನೆ.
ಪುಟ ತಿರುವಿ ಸಾಗುತ್ತಾನೆ.
ಏಕೆ ಹೀಗೆ ? ಹೇಗೆ ಸಾಧ್ಯ?

***

ಕಲಾವಿದನೊಬ್ಬ ಇಲಾಖೆಯ ಕಾರ್ಯಕ್ರಮದಲ್ಲಿ ಅವಕಾಶ ಗಿಟ್ಟಿಸಲು,
ಪ್ರಶಸ್ತಿ ಪಡೆಯಲು, ಜನಪ್ರಿಯನಾಗಲು, ಯಾವ ಯಾವ ರೀತಿ ಶಸ್ತ್ರಾಸ್ತ್ರ ಬಳಸುತ್ತಾನೆ, ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದನ್ನು ಹಾಗೇ ಗಮನಿಸಿ ನೋಡಿದರೆ.. ಅನಿಸುತ್ತದೆ…
ಸಮಾಜವನ್ನು ಸುಧಾರಿಸಲು, ಪ್ರಪಂಚವನ್ನು ಅರಳಿಸಲು , ಹೃದಯಗಳನ್ನು ಬೆಸೆಯಲು ಕಲೆ ಇದೆ ಎಂದಾದರೆ,
ಕಲಾವಿದರು ಏಕೆ ಹೇಗೆ?
ಇದು ಹೇಗೆ ಸಾಧ್ಯ?

***

ಟೆಲಿ ವಾಹಿನಿಗಳಲ್ಲಿ, ನಿಧನದ ಸುದ್ದಿಗಳನ್ನು ಕ್ರಿಕೆಟ್‌‌ನ Sixerನಂತೆ ಆನಂದವಾಗಿ
ಸಿಕ್ಕಿ ತಿದೋ ಸುದ್ದಿ ಎಂದು ಚಪ್ಪರಿಸಿ, ಓದಲು ಹೇಗೆ ಸಾಧ್ಯ?

****
ತುಂಬಾ ಓದಿಕೊಂಡವರಿಗೆ, ಸಿದ್ಧಿ ಪ್ರಸಿದ್ಧಿ ಪಡೆದವರಿಗೆ, ಅತಿಯಾದ ಬುದ್ಧಿವಂತರಿಗೆ ಮಾತ್ರ ಇದು ಸಾಧ್ಯವಾಗುತ್ತದೆ..
ಏಕೆಂದರೆ….
ಏಕೆಂದರೆ…..
ನಾವು ಬುದ್ಧಿವಂತರು,
ನಾವು ಕೊಬ್ಬು ಇಲ್ಲದ ಎಣ್ಣೆಯನ್ನು ಸೇವಿಸುತ್ತೇವೆ.
ಸಿಹಿ ಇಲ್ಲದ ಸಕ್ಕರೆಯನ್ನು ತಿನ್ನುತ್ತೇವೆ.
ಕೆನೆ ಇಲ್ಲದ ಹಾಲನ್ನು ಕುಡಿಯುತ್ತೇವೆ. ಜಿಡ್ಡು ಇಲ್ಲದ ತುಪ್ಪವನ್ನು ಆಸ್ವಾದಿಸುತ್ತೇವೆ.
ಈಗ ಬಂದಿದೆ.
ಖಾರ ಇಲ್ಲದ ಮೆಣಸಿನಕಾಯಿ, ಕಣ್ಣೀರು ತರಿಸದ ಈರುಳ್ಳಿ ….
ಅದಕ್ಕೆ … ನಾವು ಇವೆಲ್ಲವನ್ನೂ ಪ್ರತಿ ದಿನ ಸವಿದು ಸವಿದು ತಿನ್ನುತ್ತೇವೆ.
ಅದಕ್ಕೆ ….
ನಾನು ಮನುಷ್ಯತ್ವ ಇಲ್ಲದ ಮಾನವನಾಗಿದ್ದೇನೆ.
ನಾನು ಮನುಷ್ಯತ್ವ ಇಲ್ಲದ ಮಾನವ
ಆಗಿದ್ದೇನೆ. ನನ್ನತನ ಇಲ್ಲದ ನಾನಾಗಿದ್ದೇನೆ..

ಹಕ್ಕಿಯು ಹಾರುತಿದೇ…

ಭಾಷೆ ಎಲ್ಲವನ್ನೂ ಮೀರೀತು, ಹಾರೀತು…

ನಾವೇಕೆ ಓದಬೇಕು… ಬರೆಯಬೇಕು…?

ಫಾರ್ವರ್ಡ್ ಜಗದಲ್ಲಿ ನಡೆ ಮುಂದೆ ನಡೆ ಮುಂದೆ…!

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!