Tuesday, April 13, 2021

ಬರೆದು ಅಭ್ಯಾಸ ಮಾಡಿದರೆಷ್ಟು ಪ್ರಯೋಜನ?

 4 

ಕೆಲವು ಮಕ್ಕಳಿಗೆ ಓದುವುದೆಂದರೆ ಆಲಸ್ಯ ಅಥವಾ ಬೇಸರದ ಕೆಲಸ. ಕುಳಿತಲ್ಲೇ ನಿದ್ದೆ ಬರುತ್ತದೆ ಎನ್ನುತ್ತಾರೆ, ಓದಿದ್ದು ನೆನಪಿನಲ್ಲಿ ಉಳಿಯೋದಿಲ್ಲ ಎನ್ನುತ್ತಾರೆ. ಅಂಥ ಮಕ್ಕಳು ಬರೆಯುವ ಮೂಲಕವೂ ಅಭ್ಯಾಸ ಮಾಡಬಹುದು. ಬರೆಯುವುದರಿಂದಲೂ ಲಾಭವಿದೆ.

             

♦ ಸುಮನಾ ಲಕ್ಷ್ಮೀಶ
ಆಪ್ತ ಸಮಾಲೋಚಕರು
response@134.209.153.225
newsics.com@gmail.com

  ಮ್ಮ ಮನಸ್ಸಿಗೆ ಅದ್ಭುತ ಸಂಕಲ್ಪ ಶಕ್ತಿಯಿದೆ. ಅಂದುಕೊಂಡಿದ್ದನ್ನು ಖಂಡಿತವಾಗಿ ಸಾಧಿಸಿ ತೋರಬಲ್ಲ ಛಾತಿಯಿದೆ. ಆದರೆ, ಅಷ್ಟು ದೃಢವಾಗಿ ಅಂದುಕೊಳ್ಳಬೇಕಷ್ಟೆ. “ಸಾಧ್ಯವಾದರೆ… ಚೆನ್ನಾಗಿ ಬರೆಯುತ್ತೇನೆ, ಸಾಧ್ಯವಾದರೆ ಉತ್ತಮ ಅಂಕ ಗಳಿಸುತ್ತೇನೆ’ ಎಂದುಕೊಂಡರೆ ಖಂಡಿತವಾಗಿ ನೀವು 60ಕ್ಕಿಂತ ಕಡಿಮೆ ಅಂಕ ಪಡೆದು ತೃಪ್ತಿಪಡಬೇಕಷ್ಟೆ.
ಅಂದುಕೊಂಡಿದ್ದನ್ನು ಸಾಧಿಸಬೇಕೆ? ಹಾಗಿದ್ದರೆ ಓದಿದ್ದು ನೆನಪಿನಲ್ಲಿ ಉಳಿಯದವರು, ಓದಲು ಕಷ್ಟವೆನ್ನುವವರು ಬರೆದು ಪ್ರಾಕ್ಟೀಸ್ ಮಾಡಿ.
ಬರೆಯುವುದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ? ಬರೆದು ಅಭ್ಯಾಸ ಮಾಡುವುದರಿಂದ ಸುಂದರ ಅಕ್ಷರಗಳನ್ನು ರೂಢಿಸಿಕೊಳ್ಳಬಹುದು, ಬರವಣಿಗೆಯಲ್ಲಿ ಕಾಗುಣಿತ ದೋಷವಿಲ್ಲದಂತೆ ನೋಡಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬರೆಯುವುದರಿಂದ ದೀರ್ಘ ಕಾಲ ನೆನಪಿಟ್ಟುಕೊಳ್ಳಬಹುದು.
ಪ್ರಮುಖ ಪ್ರಶ್ನೋತ್ತರಗಳನ್ನು ಅಥವಾ ನಿಮಗೆ ಸುಲಭವೆನ್ನಿಸುವ ಪಾಠಗಳನ್ನು ಬಿಟ್ಟು, ಕಷ್ಟವೆನಿಸುವ ಪಾಠಗಳ ಪ್ರಶ್ನೋತ್ತರಗಳನ್ನು ಬರೆದು ಅಭ್ಯಾಸ ಮಾಡಿ. ಓದಲು ಒಂದು ಗಂಟೆ ಸಮಯ ಸಾಕಾದರೆ ಬರೆಯಲು ಎರಡು ಗಂಟೆ ಸಮಯ ಬೇಕಾಗಬಹುದು. ಆದರೆ, ಬರೆಯುವುದರ ಲಾಭ ಒಂದೆರಡಲ್ಲ.

• ದೀರ್ಘ ನೆನಪು
ನೀವು ಯಾವುದನ್ನು ಬರೆಯುತ್ತೀರೋ ಅದು ಶೇ.60ರಷ್ಟು ನೆನಪಿನಲ್ಲಿ ಉಳಿಯುತ್ತದೆ. ಇದು ವೈಜ್ಞಾನಿಕ ಅಧ್ಯಯನದಿಂದಲೂ ದೃಢಪಟ್ಟಿರುವ ಸಂಗತಿ. ಅಲ್ಲದೇ, ಆ ನೆನಪನ್ನು ಬೇಕಾದ ಸಮಯದಲ್ಲಿ ಮಿದುಳಿನಿಂದ ಹೊರತೆಗೆಯಲು ಸಾಧ್ಯ ಎನ್ನುತ್ತಾರೆ ತಜ್ಞರು.

• ಸ್ಪೆಲ್ಲಿಂಗ್ ಸಮಸ್ಯೆ ನಿವಾರಣೆ
ಬಹಳಷ್ಟು ವಿದ್ಯಾರ್ಥಿಗಳು ವಿಷಯವನ್ನೇನೋ ತಿಳಿದುಕೊಂಡಿರುತ್ತಾರೆ. ಗ್ರಹಿಕೆಯಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ, ಅಕ್ಷರಗಳಲ್ಲಿ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಕಾಗುಣಿತ ದೋಷವಿಲ್ಲದ ಶುದ್ಧವಾದ ಭಾಷೆ ನಿಮ್ಮದಾಗಬೇಕಲ್ಲವೇ? ಈ ಸಮಸ್ಯೆಗೆ ದೊಡ್ಡ ಪರಿಹಾರವೆಂದರೆ ಬರೆದು ಪ್ರಾಕ್ಟೀಸ್ ಮಾಡುವುದು. ಕಾಗುಣಿತ ದೋಷವನ್ನು ತಿದ್ದಿಕೊಳ್ಳಬಹುದು. ವ್ಯಾಕರಣ ಶುದ್ಧಿಯೂ ಆಗುತ್ತದೆ.

• ಕೈಬರಹ ಸುಧಾರಣೆ
ಮೌಲ್ಯಮಾಪನದ ಸಮಯದಲ್ಲಿ ನೂರಾರು ಉತ್ತರ ಪತ್ರಿಕೆಗಳನ್ನು ನೋಡುವ ಮೌಲ್ಯಮಾಪಕರಿಗೆ ಸುಂದರ ಅಕ್ಷರಗಳನ್ನು ಹೊಂದಿರುವ ಪತ್ರಿಕೆಯೊಂದು ಕೈಗೆ ಸಿಕ್ಕರೆ ಆನಂದ. ವಿಷಯವನ್ನು ಎಷ್ಟೇ ಚೆನ್ನಾಗಿ ಬರೆದರೂ ಇಲ್ಲದ ಮಹತ್ವ ಸುಂದರ ಕೈಬರಹಕ್ಕಿದೆ. ಉತ್ತಮ ಅಂಕ ಗಳಿಕೆಗೆ ಸುಂದರವಾದ ಅಕ್ಷರಗಳ ಕೊಡುಗೆಯೂ ಇದೆ. ಇಂಥ ಅಕ್ಷರಗಳು ನಿಮ್ಮದಾಗಬೇಕಿದ್ದರೆ ಬರೆದು ಅಭ್ಯಾಸ ಮಾಡುವುದೊಂದೇ ಪರಿಹಾರ.

• ಪರೀಕ್ಷೆ ಬರೆಯಲು ಸಮಯವೆಷ್ಟು ಬೇಕು?
ಹತ್ತು ಪ್ರಶ್ನೆಗಳನ್ನು ಇಟ್ಟುಕೊಂಡು ಬರೆಯಲು ಕುಳಿತುಕೊಳ್ಳಿ. ಎಲ್ಲವನ್ನೂ ನೋಡಿಕೊಂಡು ಬರೆಯಿರಿ. ಇನ್ನೊಮ್ಮೆ ನೋಡದೇ ಬರೆಯಿರಿ. ಆಗ ಅಷ್ಟು ಪ್ರಶ್ನೆಗಳನ್ನು ಬರೆಯಲು ಎಷ್ಟು ಸಮಯ ಬೇಕಾಯಿತು ಎನ್ನುವ ಅಂದಾಜು ನಿಮಗಾಗುತ್ತದೆ. ಅನೇಕ ವಿದ್ಯಾರ್ಥಿಗಳಿಗೆ ಉತ್ತರ ತಿಳಿದಿರುತ್ತದೆ. ಆದರೆ, ಅವುಗಳನ್ನು ಬರೆಯಲು ಸಮಯ ಸಾಕಾಗದೆ ಬಿಟ್ಟು ಬರುತ್ತಾರೆ. ಮತ್ತು ಕೊನೆಯ ಕ್ಷಣದವರೆಗೂ ಬರೆಯುತ್ತಿರುತ್ತಾರೆ. ಪರೀಕ್ಷಾ ಹಾಲ್ ನಲ್ಲಿ ಇಂಥ ಕಿರಿಕಿರಿ ಮಾಡಿಕೊಳ್ಳುವ ಬದಲು ಬರೆದು ಅಭ್ಯಾಸ ಮಾಡಿದರೆ ಈ ಸಮಸ್ಯೆಯೇ ಇರುವುದಿಲ್ಲ. ಮತ್ತು ಇದರಿಂದ ವೇಗವಾಗಿ ಬರೆಯುವುದೂ ತನ್ನಿಂತಾನೇ ರೂಢಿಯಾಗುತ್ತದೆ.

ನಿಮಗೆ ಗೊತ್ತೇ?
ನೂರು ಬಾರಿ ಓದುವುದಕ್ಕಿಂತ ಒಂದು ಬಾರಿ ಬರೆದರೆ ಸಾಕು. ಓದುವುದು ಒನ್ ವೇ ಮಾರ್ಗ. ಅಂದರೆ, ಮಿದುಳು ಒಂದು ಮಾರ್ಗದಲ್ಲಿ ಮಾತ್ರ ಯೋಚಿಸುತ್ತಿರುತ್ತದೆ. ಆದರೆ, ಬರೆಯುವ ಕ್ರಿಯೆಯಲ್ಲಿ ಅದು ಇನ್ನಷ್ಟು ಕ್ರಿಯಾಶೀಲವಾಗಿರುತ್ತದೆ. ಅಗ ಮನನ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಶೈಕ್ಷಣಿಕ ಭಾಷೆಯಲ್ಲಿ ಎಲ್‌ಎಸ್‌ಆರ್‌ಡಬ್ಲ್ಯೂ (ಲಿಸನಿಂಗ್, ಸ್ಪೀಕಿಂಗ್, ರೀಡಿಂಗ್ ಮತ್ತು ರೈಟಿಂಗ್) ಅಂತ ಒಂದು ಸಿದ್ಧಾಂತವೇ ಇದೆ. ಬರೆಯುವುದರಿಂದ ಇವುಗಳ ಮೇಲೆ ಹಿಡಿತ ಬರುತ್ತದೆ.

 ಮುಂದುವರಿಯುವುದು… 
ನಾಳೆ: ಸೋಲಿನ ಭಯ ಬಿಟ್ಟರೆ ಮಾತ್ರ ಗೆಲುವು

http://134.209.153.225/relax-and-get-ready-for-exam/
http://134.209.153.225/exam-guide-what-time-is-best-to-read/
http://134.209.153.225/exam-guide-time-is-yours-dont-let-it-go/

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!