Monday, August 8, 2022

‘ಅಹಿಂಸೆ…’ ಅದನ್ನೇ ಹುಡುಕುತ್ತಿರುವೆ ಮಹಾತ್ಮ…

Follow Us

 ಹೆತ್ತವರನ್ನು ನೋಯಿಸುವ ಮಕ್ಕಳು, ಮಕ್ಕಳನ್ನು ಸರಿಯಾಗಿ ಪೋಷಿಸದ ಪೋಷಕರು, ಅರ್ಥ ಮಾಡಿಕೊಳ್ಳದ ಬಾಳ ಸಂಗಾತಿಗಳು, ದಾಯಾದಿಗಳಾಗುವ ಒಡಹುಟ್ಟಿದವರು… ಇವೆಲ್ಲಾ ಬದುಕಿಗೆ ಹಿಂಸೆಯಾಗಿಯೇ ಎದುರಾಗುತ್ತವೆ.

      ಗಾಂಧಿ ಜಯಂತಿ ವಿಶೇಷ      


♦ ಸುನೀತ ಕುಶಾಲನಗರ

ಶಿಕ್ಷಕಿ, ಲೇಖಕಿ
newsics.com@gmail.com
 
 ಎ ಳೆವೆಯಿಂದಲೂ ಗಾಂಧಿ ಪಾಠವನ್ನು ಕೇಳಿ, ಓದಿ ಅವರು ಸತ್ಯ, ಅಹಿಂಸೆಗಾಗಿ ಹೋರಾಡಿದ ಮಾರ್ಗವನ್ನು ಸಾಧ್ಯವಾದ ಸ್ವಲ್ಪವಾದರೂ ಅನುಸರಿಸಿ ಬಂದವರು ನಮ್ಮಲ್ಲಿ ಬಹುತೇಕರು. ಗಾಂಧಿ ಬದುಕು, ಬರಹ, ತತ್ವಗಳನ್ನು ಅತ್ಯಂತ ಗೌರವದಿಂದಲೇ ಸ್ವೀಕರಿಸಿ ಆ ಹಾದಿಯಲ್ಲೇ ಹೆಜ್ಜೆಯಿಡಬಯಸಿದವರು. ಪುಟಾಣಿ ಮಕ್ಕಳು ಕೂಡ ಗಾಂಧೀಜಿಯವರ ಭಾವಚಿತ್ರವನ್ನು ಗುರುತಿಸಿ ಗಾಂಧಿತಾತ ಎಂದು ಖುಷಿಪಡುತ್ತಾರೆಂದರೆ ಅವರು ಮಹಾತ್ಮರಾಗಿ ಭಾರತೀಯರ ಜನಮನದಲ್ಲಿ ಉಳಿದಿರುವುದು ಮತ್ತು ವಿಶ್ವವೇ ಕೊಂಡಾಡುವ ಭಾರತದ ರಾಷ್ಟ್ರಪಿತನಾಗಿರುವುದಕ್ಕೆ ಅವರಿಗೆ ಅವರೇ ಸಾಟಿ.
ಯಾವುದು ಹಿಂಸೆ…
ಗಾಂಧೀಜಿ ಅನುಸರಿಸಿದ ಬದುಕಿನ ಮಾರ್ಗ ಮತ್ತು ತ್ಯಾಗ ಇವೆಲ್ಲವನ್ನೂ ಅವಲೋಕಿಸುವಾಗ ಪ್ರಸ್ತುತ ಅಹಿಂಸೆ ಎನ್ನುವ ಪದದಿಂದ ಅ ಸರಿದು ಹಿಂಸೆಯೇ ಒಂದಿಲ್ಲೊಂದು ರೀತಿಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ರಾರಾಜಿಸುತ್ತಿರುವುದನ್ನು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ.
ಹಿಂಸೆ ಎಂದರೆ ಶಾರೀರಿಕ ಪೀಡನೆ ಮಾತ್ರವೇ? ಪರಸ್ಪರ ದ್ವೇಷದ ಕೆಸರೆರಚಾಟ, ಅವಮಾನ, ನಿಂದನೆ, ಅಸೂಯೆ, ಅವ್ಯಾಚ ಬೈಗುಳ, ಅಸಭ್ಯ ವರ್ತನೆ, ಮನಸ್ಸಿನ ಕೊಳಕು ಚಿಂತನೆ ಎಲ್ಲವೂ ಅವನ್ನು ಬಾಧಿಸುವವರಿಗೆ ಹಿಂಸೆಯಾಗಿಯೇ ಪರಿಣಮಿಸುತ್ತದೆ. ಇನ್ನೊಬ್ಬನ ವ್ಯಕ್ತಿತ್ವವನ್ನು ಗೌರವಿಸದೆ ಇರುವುದು ಕೂಡ ಒಂದು ರೀತಿಯ ಹಿಂಸೆಯೇ ಆಗುತ್ತದೆ. ಸಮಾಜದ  ಪ್ರತಿಯೊಬ್ಬನ ಒಡನಾಟವನ್ನು ಪ್ರೀತಿಯಿಂದ ಸ್ವೀಕರಿಸಿದಾಗ ಹಿಂಸೆ ಸುಳಿಯಲು ಅವಕಾಶವೆಲ್ಲಿ?
ಮಾನಸಿಕ ಹಿಂಸೆ…
ಜಾಗತಿಕ ಮಟ್ಟದಿಂದ ಪ್ರಾರಂಭವಾಗುವ ಅನಗತ್ಯ ವೈಮನಸ್ಯಗಳು, ರಾಷ್ಟ್ರ, ರಾಜ್ಯ, ಜಿಲ್ಲೆ, ಸಮಾಜ ಅಷ್ಟೇ ಏಕೆ, ಮನೆ ಮನೆಯೊಳಗೂ ಹಿಂಸೆ ಎನ್ನುವ ಪದವನ್ನು ಧಾರಾಳವಾಗಿ ವಿಧಿಯಿಲ್ಲದೆ ಎದುರಿಸುತ್ತೇವೆ. ಕೆಲವೊಮ್ಮೆ ಎದುರಿಸಲಾರದೆ ಮುಗ್ಗರಿಸುತ್ತೇವೆ. ಪ್ರತಿಯೊಬ್ಬರೂ ತಮ್ಮ ಪಾಲಿನ ಕರ್ತವ್ಯವನ್ನು ಇನ್ನೊಬ್ಬರಿಗೆ ಹೊರೆಯಾಗದೆ ಆಶ್ರಯಿಸಿದವರನ್ನು ಗುರಿ ಮಾಡದಂತೆ ನೋಡಿಕೊಂಡರೆ ಅಲ್ಲೇ ಅಹಿಂಸೆಯನ್ನು ಆಚರಿಸಿದಂತಾಗುತ್ತದೆ. ಏಕೆಂದರೆ ಸಂಬಂಧದಲ್ಲಿ, ಅಧಿಕಾರದಲ್ಲಿ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸುವಾಗ ವರ್ತನೆಯು ಮಿತಿ ಮೀರಿ ಮಾನವೀಯತೆಯೇ ಮರೆಯಾಗಿ ಮನಸ್ಸನ್ನು ಘಾಸಿಗೊಳಿಸುವ ಅಧಿಕಾರದ ದರ್ಪ ಸಿಡಿಮದ್ದಿನಂತೆ ಅವತಾರ ತಾಳಿ ಸಂಬಂಧಿಸಿದ ಎಲ್ಲರಿಗೂ ಮಾನಸಿಕ ಹಿಂಸೆಯನ್ನು ವಿಸ್ತರಿಸಿಬಿಡುತ್ತದೆ.
ಪ್ರತಿಯೊಬ್ಬ ಭಾರತೀಯನಿಗೂ ತನ್ನ ಧರ್ಮ, ಜಾತಿ, ಭಾಷೆ, ಸಂಸ್ಕೃತಿಯಂತೆ ಬದುಕುವ ಸ್ವಾತಂತ್ರ್ಯವಿದೆ. ತನ್ನ ತೆಕ್ಕೆಗೆ ಬಿದ್ದವರು ಹೀಗೆಯೇ ಇರಬೇಕೆನ್ನುವ ಸ್ವಾರ್ಥ, ಅಂಧಪ್ರಜ್ಞೆಯ ಮೂಲಕ ನಿರಂತರ ಪೀಡನೆ ನೀಡುವ ಸ್ವೇಚ್ಛಾಚಾರದ ವರ್ತನೆಯಿಂದ ಹಿಂಸೆ ಎಂಬ ಪದ ನುಂಗಿ ಜೀವನ ಪರ್ಯಂತ ಮೌನ ಹೋರಾಟ ನಡೆಸುವವರು ನಮ್ಮನಿಮ್ಮೊಳಗೆಷ್ಟೋ ಇದ್ದಾರೆ.
ದ್ವೇಷ ಏಕೆ…?
ಹೆತ್ತವರನ್ನು ನೋಯಿಸುವ ಮಕ್ಕಳು, ಮಕ್ಕಳನ್ನು ಸರಿಯಾಗಿ ಪೋಷಿಸದ ಪೋಷಕರು, ಅರ್ಥ ಮಾಡಿಕೊಳ್ಳದ ಬಾಳ ಸಂಗಾತಿಗಳು, ದಾಯಾದಿಗಳಾಗುವ ಒಡಹುಟ್ಟಿದವರು… ಇವೆಲ್ಲಾ ಬದುಕಿಗೆ ಹಿಂಸೆಯಾಗಿಯೇ ಎದುರಾಗುತ್ತವೆ.
ನಮ್ಮ ಆಸುಪಾಸಿನವರನ್ನು ಗೌರವಿಸಿ, ಪ್ರೀತಿಸಲಾಗದಿದ್ದರೂ ದ್ವೇಷಿಸದೆ ಇದ್ದಾಗ ಸಮಾಜವು ಸುಸ್ಥಿತಿಯಲ್ಲಿರುತ್ತದೆ. ಆಗಷ್ಟೇ
ಹಿಂಸೆ ಎಂಬ ಪದವನ್ನು ದೂರ ತಳ್ಳಿದಂತಾಗುತ್ತದೆ. 
ಪರಸ್ಪರ ಕೇಡು ಬಯಸಿ ನಂಜು ಕಾರುವುದರಿಂದ ಪ್ರಯೋಜನವಾದರೂ ಏನು? ಒಂದೆಡೆ ರೋಗಗಳು, ಪ್ರಕೃತಿ ವಿಕೋಪಗಳು ಹಿಂಸೆಯಾಗಿ ಎರಗುತ್ತಿದ್ದರೆ ಅದಕ್ಕೂ ಮಿಗಿಲಾಗಿ ನಮಗೆ ನಾವೇ ಹಿಂಸೆಯಾಗುತ್ತೇವೆ. ಮತ್ಸರ ತೊರೆದು ಒಬ್ಬರಿಗೊಬ್ಬರು ಸ್ಪಂದಿಸಿ ಬದುಕುವುದರಿಂದ ನಿಶ್ಕಲ್ಮಷ ಪ್ರೀತಿ ವ್ಯಾಪಿಸಿ ಹಿಂಸೆ ದೂರ ಸರಿಯುತ್ತದೆ. ಆಗ ಗಾಂಧಿ ತೋರಿದ ಮಾರ್ಗಕ್ಕೆ ಅರ್ಥ ಬರುತ್ತದೆ. ಇಲ್ಲವಾದರೆ ಮನದೊಳಗೆ ಗಾಂಧೀಜಿಯವರ ಮುಖ ಮೂಡಿದಾಗಲೆಲ್ಲಾ “ಅಹಿಂಸೆ” ಅದನ್ನೇ ಹುಡುಕುತ್ತಿರುವೆ ಮಹಾತ್ಮ… ಎಂದು ಪರಿತಪಿಸಬೇಕಾಗುತ್ತದೆ.
 

ಮತ್ತಷ್ಟು ಸುದ್ದಿಗಳು

vertical

Latest News

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...
- Advertisement -
error: Content is protected !!