Monday, October 3, 2022

ಮೂಷಿಕ, ನನ್ನ ಕಷ್ಟ ಕೇಳು…

Follow Us

ಪದ ಭಟ್

newsics.com@gmail.com
ಅರೇ ವ್ಹಾ ಮೂಷಿಕ, ಕೊನೆಗೂ ಮತ್ತೆ ನಾನು ಭೂಮಿಗೆ ಬಂದಿದ್ದೇನೆ. ಬಾ ಈ ಬಾರಿ ಹೊಟ್ಟೆ ತುಂಬಾ ತಿಂದು ಭೂಲೋಕದ ಜನರನ್ನು ಹಾರೈಸಿ ಬರೋಣ.
ನೋಡು ಮೂಷಿಕ ಎಲ್ಲೆಲ್ಲೂ ನಾನೇ ಎನ್ನುವಂತೆ ಜನ ಎಷ್ಟು ಚೆನ್ನಾಗಿ ನನ್ನನ್ನು ಪೂಜಿಸ್ತಾ ಇದ್ದಾರೆ. ಆದ್ರೆ ಯಾಕೋ ಮೊದಲಿನಷ್ಟು ಖುಷಿ ಇಲ್ಲ ಮೂಷಿಕ. ನಾನ್ಯಾಕೆ ಈ ಚೌತಿಯ ದಿನದಂದೇ ನನ್ನ ಕಷ್ಟಗಳನ್ನು ಹೇಳಿಕೊಳ್ಳಬಾರದು…?
ಆಗಲಿ ದೇವ, ನಿಮ್ಮಿಚ್ಛೆಯಂತೆಯೇ ಆಗಲಿ.

‘ರಾಸಾಯನಿಕ ಬಣ್ಣಗಳಿಂದ ನನ್ನನ್ನು ಅಲಂಕರಿಸಿ ಪೂಜಿಸುತ್ತೀರಿ. ಆ ಬಣ್ಣದ ಘಾಟು ತೃಪ್ತಿಯ ಭೋಜನಕ್ಕೆ ಕಷ್ಟವಾಗುತ್ತದೆ. ಅದೂ ಅಲ್ಲದೆ ನೀರಿಗೆ ನನ್ನನ್ನು ಹಾಕುವಾಗ ಪ್ರತೀ ಕಷ್ಟಕ್ಕೆ ನನ್ನನ್ನೇ ಸ್ಮರಿಸುವ ಜೀವಿಗಳ ಜೀವಕ್ಕೆ ನನ್ನ ಮೈ ಬಣ್ಣದಿಂದ ಕುತ್ತಾಗುತ್ತೇನೆ. ಪಿಒಪಿಯಿಂದ ನೀರಲ್ಲಿ ಕರಗುವುದೂ ಇಲ್ಲ.
ನಿನ್ನ ಸಂಕಲ್ಪಕ್ಕೆ, ಪ್ರಾರ್ಥನೆಗೆ ವರ ನೀಡುವ ಶಾಂತ ಮನಸ್ಥಿತಿಗೆ ಡಿಜೆ ಹಾಡುಗಳು ವಿಚಲಿತನನ್ನಾಗಿಸಿದೆ. ಸದ್ಬುದ್ಧಿಯ ನೀಡು ಎಂದು ಕೇಳುವ ನೀನೇ ನನ್ನ ಮುಂದೆ ಪಾನಮತ್ತನಾಗಿ ಬಂದು ತಾಳ ಇಲ್ಲದೆ ಹಾಡಿಗೆ ಹೆಜ್ಜೆ ಹಾಕುವೆ. ನನಗೆ ಕೋಪವೇ ಬರುವುದಿಲ್ಲವೆಂದಲ್ಲ. ಚಂದ್ರನಿಗೆ ಶಾಪ ಕೊಟ್ಟಿದ್ದು ಕೋಪದಿಂದಲೇ ಅಲ್ಲವೇ? ಆದರೆ ನೀನು ನನ್ನ ಭಕ್ತ. ನಿನಗೇನಾದರೂ ಆದರೆ ನನ್ನನ್ನೇ ಹುಡುಕಿ ಬರುವೆ. ಹೀಗಾಗಿ ನಿನ್ನ ಕಷ್ಟಕ್ಕೆ ನಾನಿರುವೆ.
ಆದರೆ ನನ್ನ ಕೋರಿಕೆಯ ಈಡೇರಿಸು….ನಾನು ಭೂಮಿಗೆ ಬಂದಾಗ ಆಡಂಬರದ ಬದಲಿಗೆ ಭಕ್ತಿ ಕಾಣಿಸಲಿ. ಡಿಜೆ ಬದಲಿಗೆ ಸುಶ್ರಾವ್ಯ ಸಂಗೀತ ಕೇಳಿಸಲಿ. ಪಿಒಪಿ ಬದಲಿಗೆ, ಬಣ್ಣದ ಬದಲಿಗೆ ಪ್ರಕೃತಿ ಮಾತೆಯೂ ನನ್ನನ್ನು ಅಪ್ಪಿ, ಒಪ್ಪಿಕೊಳ್ಳುವಂತೆ ರಾಸಾಯನಿಕ ಮುಕ್ತವಾಗಿಡು. ಪಾನಮತ್ತನಾಗಿ ನನ್ನ ಮುಂದೆ ಕುಣಿಯುವ ಬದಲು ಬಗೆಬಗೆಯ ಭಕ್ಷ್ಯಗಳ ನೀಡು. ಅನ್ನದಾತೋ ಸುಖೀಭವ ಎನ್ನುವಂತೆ ಹೊಟ್ಟೆ ಬಿರಿಯುವಷ್ಟು ತಿನ್ನುವೆ. ನಿನ್ನ ಹರಸಲು, ವಿಘ್ನ ನಿವಾರಿಸಲು ಸದಾ ಸಿದ್ಧನಾಗಿರುವೆ’.

ಇಂತಿ… ನಿಮ್ಮ ವಿಘ್ನನಿವಾರಕ 

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!