Monday, October 2, 2023

ಬೂದುತಲೆಯ ಟಿಟ್ಟಿಭ

Follow Us

ಇತರ ಟಿಟ್ಟಿಭಗಳಂತೆ ಹೊಲಗದ್ದೆಯ ಅಂಚುಗಳಲ್ಲಿ ಮೊಟ್ಟೆಯಿಟ್ಟು ಮರಿಮಾಡುತ್ತದೆ. ಕೀಟಗಳು, ಹುಳುಗಳು ಹಾಗೂ ಕಂಟಕಚರ್ಮಿಗಳು ಇದರ ಆಹಾರ. ಹಾಗಾಗಿ ಇದನ್ನು ರೈತನ ಮಿತ್ರ ಎನ್ನಲು ಅಡ್ಡಿಯಿಲ್ಲ.

  ಪಕ್ಷಿನೋಟ – 67 


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞರು, ಅಂಕಣಕಾರರು
ಚಿತ್ರಗಳು: ಜಿ.ಎಸ್.ಶ್ರೀನಾಥ
newsics.com@gmail.com
www.facebook.com/ksn.bird
kalgundi.naveen@yahoo.com

ಅಂಕಣದಲ್ಲಿ ಹೊರರಾಜ್ಯಗಳಲ್ಲಿನ ಕೆಲವು ಹಕ್ಕಿಗಳ ಪರಿಚಯವನ್ನು ಇದುವರೆಗೂ ಮಾಡಿಕೊಂಡು ಬಂದೆವು. ಮುಂದೆ ಮತ್ತೆ ಅವಕಾಶ ಸಿಕ್ಕಾಗ ನೋಡೋಣ. ಈಗ ನಮ್ಮ ರಾಜ್ಯದಲ್ಲಿಯೂ ಕಂಡುಬರುವ ಒಂದು ಟಿಟ್ಟಿಭವನ್ನು ಕುರಿತಾಗಿ ನೋಡೋಣ.
ಪ್ರಧಾನವಾಗಿ ಬೂದು, ಬಿಳಿ ಬಣ್ಣಗಳನ್ನು ಹೊಂದಿರುವ ದೊಡ್ಡ ಗಾತ್ರದ ಟಿಟ್ಟಿಭ. ಕಪ್ಪು ತುದಿಯುಳ್ಳ ಹಳದಿಕೊಕ್ಕು, ಬೂದು ತಲೆ ಹಾಗೂ ಎದೆಯಭಾಗ. ಹೊಟ್ಟೆ ಬಿಳಿ. ಎದೆ ಹಾಗೂ ಹೊಟ್ಟೆಯನ್ನು ಬೇರ್ಪಡಿಸುವ ಕಪ್ಪು ಪಟ್ಟಿಯುಂಟು. ಕಣ್ಣು ಕೆಂಪು.

 

ಈಶಾನ್ಯಭಾರತ, ದಕ್ಷಿಣ ಭಾರತದ ಕೆಲವು ರಾಜ್ಯಗಳು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಬೆಂಗಳೂರಿನಲ್ಲಿಯೂ ಸಹ. ಬಾಂಗ್ಲದೇಶ, ಥೈಲ್ಯಾಂಡ್, ಮಲೇಶಿಯಾಗಳಲ್ಲಿ ಕಂಡುಬರುತ್ತದೆ. ಅಂಡಮಾನ್‍ನಲ್ಲಿ ಉಂಟು. ಶ್ರೀಲಂಕಾದಲ್ಲಿ ಅಲೆಮಾರಿಯಾಗಿ ಕಂಡುಬರುತ್ತದೆ.
ಇತರ ಟಿಟ್ಟಿಭಗಳಂತೆ ಹೊಲಗದ್ದೆಯ ಅಂಚುಗಳಲ್ಲಿ ಮೊಟ್ಟೆಯಿಟ್ಟು ಮರಿಮಾಡುತ್ತದೆ. ಕೀಟಗಳು, ಹುಳುಗಳು ಹಾಗೂ ಕಂಟಕಚರ್ಮಿಗಳು ಇದರ ಆಹಾರ. ಹಾಗಾಗಿ ಇದನ್ನು ರೈತನ ಮಿತ್ರ ಎನ್ನಲು ಅಡ್ಡಿಯಿಲ್ಲ. ಹಾಗಾಗಿ ಸಂರಕ್ಷಣೆಗೆ ಮತ್ತೊಂದು ಕಾರಣವಿದೆ.
ಈ ಹಕ್ಕಿಯನ್ನು ಕಂಡಾಗ ನಮಗೆ ಬರೆದು ತಿಳಿಸಿ.

ಮತ್ತಷ್ಟು ಸುದ್ದಿಗಳು

vertical

Latest News

ರಸ್ತೆ ಅಪಘಾತ: ಮಗು ಸೇರಿ ಕನಿಷ್ಠ 10 ಮಂದಿ ಸಾವು

newsics.com ಮೆಕ್ಸಿಕೊ: ಟ್ರಕ್ ವೊಂದು ಅಪಘಾತಕ್ಕೆ ಒಳಗಾದ ಪರಿಣಾಮ 10 ಜನ ವಲಸಿಗರು ಸಾವನ್ನಪಿರುವ ಘಟನೆ ದಕ್ಷಿಣ ರಾಜ್ಯ ಚೈಪಾಸ್ನಲ್ಲಿ ನಡೆದಿದೆ. ಅಪಘಾತದಲ್ಲಿ 17 ಜನ ಗಾಯಗೊಂಡಿದ್ದು, ಅವರನ್ನು...

ಮೈಕಲ್ ಜಾಕ್ಸನ್ ಟೋಪಿ ಬರೋಬ್ಬರಿ 68 ಲಕ್ಷಕ್ಕೆ ಹರಾಜು

newsics.com ಜನಪ್ರಿಯ ವ್ಯಕ್ತಿಗಳು ಬಳಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇರುತ್ತದೆ. ದೊಡ್ಡ ಪ್ರಮಾಣದ ಹಣ ತೆತ್ತು ಅವುಗಳನ್ನು ಖರೀದಿಸುವವರು ಇರುತ್ತಾರೆ. ಇದೀಗ ನೃತ್ಯಲೋಕದ ಅಚ್ಚಳಿಯದ ಹೆಸರು ಮೈಕಲ್ ಜಾಕ್ಸನ್ ಅವರು ಧರಿಸುತ್ತಿದ್ದ ಟೋಪಿ ಬರೋಬ್ಬರಿ...

ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಲೋಕಾರ್ಪಣೆಗೆ ಸಿದ್ಧ

newsics.com ವಾಷಿಂಗ್ಟನ್: ಅಮೆರಿಕದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಬಿಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಲೋಕಾರ್ಪಣೆಗೆ ಸಿದ್ಧವಾಗಿದೆ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ನಿರ್ಮಾಣವಾಗಿರುವ ದೇಗುಲ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 30ರಂದೇ ಆರಂಭಗೊಂಡಿದ್ದು. ಅಕ್ಟೋಬರ್...
- Advertisement -
error: Content is protected !!