Wednesday, July 6, 2022

ಕಾರ್ಬನ್ ನೆರಳು ನಿವಾರಣೆ ಹೇಗೆ?

Follow Us

ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ‍್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ ಜವಾಬ್ದಾರಿ ಬರಬೇಕು ಇಲ್ಲವೇ ಜನರು ಸೇರಿ ತರಬೇಕು.

ಪಕ್ಷಿ ಸಂರಕ್ಷಣೆ- 7


♦ ಕಲ್ಗುಂಡಿ ನವೀನ್
ವನ್ಯಜೀವಿ ತಜ್ಞ, ಅಂಕಣಕಾರರು
www.facebook.com/ksn.bird
ksn.bird@gmail.com
newsics.com@gmail.com

ಳೆದ ಬಾರಿ ಕಾರ್ಬನ್ ನೆರಳಿನ ಬಗ್ಗೆ ವಿಸ್ತೃತವಾಗಿ ತಿಳಿದುಕೊಂಡೆವು. ಈಗ ಅದನ್ನು ತಗ್ಗಿಸಲು ಇರುವ ಉಪಾಯಗಳನ್ನು ಕುರಿತಾಗಿ ನೋಡೋಣ. ಇಲ್ಲಿ ಒಂದು ವಿಷಯ ನೇರ ಹಾಗೂ ಸ್ಪಷ್ಟವಾಗಿದೆ. ಕಾರ್ಬನ್ ನೆರಳು ಅಥವಾ ಮಾಲಿನ್ಯವನ್ನು ನಿವಾರಿಸಲು ಇರುವ ಮುಖ್ಯವಾದ ಉಪಾಯವೆಂದರೆ ಅದನ್ನು ಉಂಟುಮಾಡದಿರುವುದೇ ಆಗಿರುತ್ತದೆ. ನಮ್ಮ ಶೋಕಿಯ ಬದುಕು, ಕೊಳ್ಳುಬಾಕತನ ಹಾಗೂ ಅಸಹಜ ಬದುಕು ಎಷ್ಟು ಮಾಲಿನ್ಯಕಾರಿ ಎಂಬುದನ್ನು ಯೋಚಿಸಬೇಕು. ಅವಶ್ಯಕತೆಗಿಂತಲೂ ಮಾನವನ ಸ್ವಾರ್ಥ ಹಾಗೂ ದುರಾಸೆ ಹೆಚ್ಚಿನ ದುರಂತಗಳಿಗೆ ಕಾರಣವಾಗಿದೆ. ಇದು ವೈಯಕ್ತಿಕವಾಗಿ ನಾವೆಲ್ಲರೂ ಮಾಡಬೇಕಾದ ಕಾರ್ಯ. ಇರಲಿ.

ಇನ್ನು ನಾವು ಪರಿಸರಕ್ಕೆ ಹೊಂದುವಂತಹ ಜೀವನ ನಡೆಸುವಲ್ಲಿ ಮುಖ್ಯವಾಗಿ ಮಾಡಲೇಬೇಕಾದದ್ದು ಎಂದರೆ ತ್ಯಾಜ್ಯ ವಿಲೇವಾರಿಯ ನಿಗಾವಣೆ. ಈಗ ನಾವು ಕಾರ್ಬನ್ ನೆರಳನ್ನು ಕುರಿತು ಯೋಚಿಸುತ್ತಿರುವುದರಿಂದ ಒಂದು ಸರಳವಾದ ವಿಚಾರವನ್ನು ನೋಡೋಣ. ಅದೇ ನಾವು ನಮ್ಮ ವಾಹನಗಳಿಗೆ ಹಾಕುವ ತೈಲ (ಎಂಜಿನ್ ಆಯಿಲ್). ಇದನ್ನು ನಾವು ಬದಲಿಸುತ್ತೇವೆ. ಹೀಗೆ ಬದಲಿಸಿದಾಗ ಆ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ ಎಂಬುದನ್ನು ವಿಚಾರಿಸಬೇಕು. ಈ ತ್ಯಾಜ್ಯ ತೈಲವನ್ನು ಶೋಧಿಸಿ ಇಂಧನವನ್ನಾಗಿ ಬಳಸಬಹುದು ಹಾಗೂ ಇದಕ್ಕೆ ಇನ್ನು ಅನೇಕ ಉಪಯೋಗಗಳಿವೆ. ನಮ್ಮ ಗ್ಯಾರೇಜಿನವರನ್ನು ವಿಚಾರಿಸಿ ಹಾಗೆ ವಿಲೇ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರಿಗೆ ತಿಳಿದಿಲ್ಲದಿದ್ದರೆ ಪ್ರೀತಿಯಿಂದ ತಿಳಿಸಿ ಹೇಳಬೇಕು. ಕೆಲವರು ಚರಂಡಿಗೆ ಚೆಲ್ಲಿಬಿಡುತ್ತಾರೆ. ಇದು ಸರ್ವಥಾ ಸಲ್ಲದು. ಯಾವುದೇ ತ್ಯಾಜ್ಯವನ್ನು ನೆಲಕ್ಕೆ, ಮೋರಿಗೆ ಸುರಿದಲ್ಲಿ ಅದು ಅಂತಿಮವಾಗಿ ನಮ್ಮ ಹೊಟ್ಟೆಯಲ್ಲಿ ಜಾಗ ಪಡೆದುಕೊಳ್ಳುತ್ತದೆ. ಅಂತರ್ಜಲ ಇದರಿಂದ ತೀವ್ರವಾಗಿ ಕಲುಷಿತಗೊಳ‍್ಳುತ್ತದೆ. ಈ ತೈಲಗಳು ವಿಷಕಾರಿ ಹಾಗೂ ಕಾನ್ಸರ್‌ಕಾರಕಗಳು ಎಂಬುದನ್ನು ನಾವು ಮರೆಯಬಾರದು. ಇವುಗಳು ಯುಕ್ತವಾಗಿ ಮರುಬಳಕೆಯಾಗುವಂತೆ ನಾವೂ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ಬ್ರಿಟಿಷ್ ಪೆಟ್ರೋಲಿಯಂ ಇಂತಹ ತೈಲವನ್ನು ಸಂಗ್ರಹಸಿ ವಿಲೇ ಮಾಡುವ ಕೆಲಸವನ್ನು ಮಾಡುತ್ತಿದೆ. ನಮ್ಮಲ್ಲಿನ ಪರಿಸರಪರ ಸಂಘಟನೆಗಳು ಇಂತಹ ಮಾರ್ಗಗಳನ್ನು ಕಂಡುಕೊಳ್ಳಬೇಕು.

ಇನ್ನು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ತೈಲಗಳು ಉತ್ಪತ್ತಿಯಾಗುತ್ತವೆ. ಅವೂ ಸಹ ಸಂಸ್ಕರಣಗೊಂಡು ಮರುಬಳಕೆಯಾಗಬೇಕು. ಇಲ್ಲವಾದಲ್ಲಿ ನಮ್ಮ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಇವುಗಳನ್ನು ಕೆಲವು ಸಂಸ್ಕರಣ ನಡೆಸುವ ಘಟಕಗಳು ಕೊಂಡು ಸಂಸ್ಕರಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ಆತಂಕಕ್ಕೆ ಕಾರಣವಿಲ್ಲ. ಆದರೂ ನಾವು ಜಾಗರೂಕರಾಗಿರಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂತಹವಕ್ಕೆ ವಿಶೇಷ ವ್ಯವಸ್ಥೆ ಇರುತ್ತದೆ. ಈ ತ್ಯಾಜ್ಯ ತೈಲಗಳನ್ನು ಸಂಸ್ಕರಿಸಿ ಫರ್ನೇಸುಗಳಲ್ಲಿ ಬಳಸಲಾಗುತ್ತದೆ.

ಒಟ್ಟಾರೆ ಹಸಿರು ಮನೆ ಪರಿಣಾಮ ಹಾಗೂ ಕಾರ್ಬನ್ ನೆರಳು ಇವನ್ನು ಕಡಿಮೆ ಮಾಡುವುದು ಒಳ್ಳೆಯ ಪರಿಸರ ನಿರ್ಮಾಣದಲ್ಲಿ ಬಹುದೊಡ್ಡ ಹೆಜ್ಜೆ. ಕಾಡುಗಳನ್ನು ಕಡಿಯದಿರುವುದು ಇನ್ನೂ ದೊಡ್ಡ ಹೆಜ್ಜೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಿ ಪ್ರಬುದ್ಧರಾಗಬೇಕು. ಪ್ರಬುದ‍್ದ ಜನರಿಂದಲೇ ಪ್ರಬುದ್ಧ ಸರ್ಕಾರ. ಜನಜಾಗೃತಿಯಾಗಬೇಕು. ನಮ್ಮ ಕಸ ಹಾಗೂ ತ್ಯಾಜ್ಯ ನಮ್ಮ ಜವಾಬ್ದಾರಿ ಎಂಬ ಭಾವ ಬೆಳೆಯಬೇಕು. ಹಾಗೆಯೇ ನಮಗೆ ಉತ್ಪನ್ನಗಳನ್ನು ಮಾರುವ ಸಂಸ್ಥೆಗಳಿಗೂ ಇವುಗಳ ವಿಲೇವಾರಿಯ ಜವಾಬ್ದಾರಿ ಬರಬೇಕು ಇಲ್ಲವೇ ಜನರು ಸೇರಿ ತರಬೇಕು. ಅದೂ ಒಂದು ಮಹತ್ವದ ಹೆಜ್ಜೆಯಾಗುತ್ತದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡೋಣ.

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!