Tuesday, August 9, 2022

International Tea Day- ಟೀ ಕುಡಿದು ಸ್ನೇಹ ಹಂಚಿಕೊಳ್ಳಿ

Follow Us

• ಪದ ಭಟ್

newsics.com@gmail. com

ಬಾ ಮಚ್ಚಾ ಒಂದು ಟೀ ಕುಡಿಯೋಣ ಎನ್ನುವುದರಿಂದ ಹಿಡಿದು ಬನ್ನಿ ಸಾರ್ ಒಂದು ಕಪ್ ಟೀ ಕುಡಿಯೋಣ ಎನ್ನುವವರೆಗೂ ಟೀ ಪ್ರಚಲಿತ. ಕೆಲವರಿಗೆ ಕಪ್‌ನಲ್ಲಿ ಬಿಸಿ ಬಿಸಿ ಟೀ ಹೀರದೆ ದಿನದ ಆರಂಭವಾಗುವುದು ಕಷ್ಟ. ತಿಂಡಿಯಾದ ಮೇಲೆ ಟೀ, ಮಧ್ಯಾಹ್ನದ ಊಟದ ನಂತರ ಟೀ, ಮಧ್ಯದಲ್ಲಿ ಬೋರ್ ಆದ್ರೆ, ತಲೆ ನೋವು ಬಂದ್ರೆ, ನಿದ್ದೆ ಬಂದ್ರೆ…. ಅಬ್ಬಬ್ಬಾ ಎಲ್ಲದಕ್ಕೂ ಟೀ ಬೇಕು.

ಇಂದು (ಮೇ.21) ಅಂತಾರಾಷ್ಟ್ರೀಯ ಟೀ ದಿನ. ಪ್ರಪಂಚದಲ್ಲಿ ಅತೀ ಹೆಚ್ಚು ಸೇವಿಸುವ ಪಾನೀಯಗಳಲ್ಲಿ ಒಂದಾದ ಚಹಾದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚಹಾ ದಿನವನ್ನು ಆಚರಿಸಲಾಗುತ್ತದೆ.

ಲೆಮನ್ ಟೀ, ಶುಂಠಿ ಟೀ, ಪುದೀನಾ ಟೀ, ಬೆಲ್ಲದ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ… ಹೀಗೆ ಪಟ್ಟಿ ಉದ್ದವಿದೆ. ಆದರೆ ನೆನಪಿಡಿ ಚಹಾದಲ್ಲಿ ಕೆಫಿನ್ ಅಂಶವಿರುತ್ತದೆ. ಹೀಗಾಗಿ ಅಧಿಕವಾಗಿ ಟೀ ಸೇವನೆ ಮಾಡಿದರೆ ಪಿತ್ತ, ತಲೆನೋವು, ವಾಂತಿಯಂತಹ ಅನಾರೋಗ್ಯ ಕಾಡಬಹುದು ಎಚ್ಚರಿಕೆಯಿರಲಿ.

ಎನಿ ವೇ ಎಲ್ಲಾ ಟೀ ಪ್ರಿಯರಿಗೆ, ಮನಸ್ಸನ್ನು ಪ್ರಫುಲ್ಲಗೊಳಿಸುವಂತೆ ಟೀ ಮಾಡಿಕೊಡುವ ಎಲ್ಲರಿಗೂ ಹ್ಯಾಪಿ ಇಂಟರ್‌ನ್ಯಾಷನಲ್ ಟೀ ಡೇ.

ಮತ್ತಷ್ಟು ಸುದ್ದಿಗಳು

vertical

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌ ಸಂಬಂಧ ಇಬ್ಬರನ್ಮು‌ ಬಂಧಿಸಲಾಗಿದೆ ಈ ಘಟನೆ ಮಧ್ಯಪ್ರದೇಶದ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...
- Advertisement -
error: Content is protected !!