ಬದುಕು ಕಲಿಸಿದ ಜನ್ಮದಾತ. ಪ್ರೀತಿ, ಮಮತೆ, ತ್ಯಾಗ, ಧೈರ್ಯ ಎಲ್ಲದಕ್ಕೂ ಅವನೇ ಆದರ್ಶ. ಪ್ರತೀ ಮಕ್ಕಳ ಸೂಪರ್ ಹೀರೋ ಅಪ್ಪ.
• ಪದ ಭಟ್
newsics.com@gmail.com
ಅದೆಷ್ಟೇ ಸಿಟ್ಟಿನಿಂದ ಕೂಗಾಡಲಿ, ಒಂದೆರಡು ಏಟನ್ನು ಕೊಡಲಿ, ಪ್ರತೀ ನಿರ್ಧಾರದ, ಹೊಸ ಕೆಲಸದ ಆರಂಭದಲ್ಲಿ ಅಷ್ಟೇ ಯಾಕೆ ಜೀವನ ಬೇಜಾರಾಗಿ ಯಾಕ್ ಹೀಗ್ ಆಗ್ತಿದೆ ಅಂತಾ ಹತಾಶೆಯಲ್ಲಿ ಇದ್ದಾಗ್ಲೂ ನೆನಪಾಗೋದು, ‘ಒಂದ್ಸಲ ಅಪ್ಪನತ್ರ ಮಾತಾಡೋಣ’. ಅಪ್ಪ ಬದುಕ ಕನಸುಗಳನ್ನು ಬೆಸೆಯೋ ಸಾರಥಿ, ಬೆನ್ನು ತಟ್ಟಿ ಹುರಿದುಂಬಿಸೋ ಸ್ನೇಹಿತ.
ಇಂದು ಅಪ್ಪಂದಿರ ದಿನ. ಅದೆಷ್ಟೋ ಅಪ್ಪಂದಿರಿಗೆ ತಮ್ಮನ್ನೂ ಗೌರವಿಸುವ ದಿನವೊಂದಿದೆ ಎನ್ನುವುದೇ ಸೋಜಿಗ. ಈಗಿನ ದಿನಗಳಲ್ಲಿ ನಾವು ವಾಟ್ಸಾಪ್, ಇನ್ಸ್ಟಾಗ್ರಾಂ, ಫೆಸ್ಬುಕ್ಗಳಲ್ಲಿ ಅಪ್ಪಂದಿರ ಫೋಟೋ ಹಾಕಿ ಹ್ಯಾಪಿ ಫಾದರ್ಸ್ ಡೇ ಅಂತ ಆಚರಣೆ ಮಾಡೋದು ಕೂಡ ಅದೆಷ್ಟೋ ಅಪ್ಪಂದಿರಿಗೆ ಅಪರೂಪದ ಕ್ಷಣ.
ನಾನಿದ್ದೀನಿ ಯಾಕ್ ಭಯ, ಅನ್ನೋ ಪ್ರತಿ ಅಪ್ಪಂದಿರಿಗೂ ನಿಮ್ಜೊತೆ ನಾವೂ ಇದ್ದೀವಿ ಅನ್ನೋ ವಾಗ್ದಾನ ನೀಡಿ. ಪ್ರತೀ ದಿನ ಅವರೊಟ್ಟಿಗೆ ಒಂದಿಷ್ಟು ಮಾತುಕತೆಯಿರಲಿ. ನಿಮ್ಮನ್ನ ಪುಟ್ಟ ಮಗುವಿನಿಂದ ಎದೆಯೆತ್ತರಕೆ ಬೆಳೆಸಿದ ಜೀವದ ಬಗ್ಗೆ ಸದಾ ಕಾಳಜಿ, ಪ್ರೀತಿಯಿರಲಿ.
ಅಪ್ಪ ಅಂದ್ರೆ ಆಕಾಶ, ಅಪ್ಪ ಅಂದ್ರೆ ಧೈರ್ಯ, ಅಪ್ಪ ಅಂದ್ರೆ ಎವ್ರಿಥಿಂಗ್. ಎಲ್ಲಾ ಅಪ್ಪಂದಿರಿಗೂ ಹ್ಯಾಪಿ ಫಾದರ್ಸ್ ಡೇ….